Kabzaa: ಫೆ.4ಕ್ಕೆ ಅಬ್ಬರಿಸಲಿದೆ ‘ಕಬ್ಜ’ ಮೊದಲ ಹಾಡು; ಉಪ್ಪಿ ಚಿತ್ರದ ಅದ್ದೂರಿ ಇವೆಂಟ್​ಗೆ ಹೈದರಾಬಾದ್​ ಸಜ್ಜು

Upendra | Kabzaa First Song: ರವಿ ಬಸ್ರೂರು ಅವರು ‘ಕಬ್ಜ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವುದರಿಂದ ಸಿಕ್ಕಾಪಟ್ಟೆ ಕ್ರೇಜ್​ ಸೃಷ್ಟಿ ಆಗಿದೆ. ಫೆ.4ರಂದು ಈ ಸಿನಿಮಾದ ಮೊದಲ ಸಾಂಗ್​ ಬಿಡುಗಡೆ ಆಗಲಿದೆ.

Kabzaa: ಫೆ.4ಕ್ಕೆ ಅಬ್ಬರಿಸಲಿದೆ ‘ಕಬ್ಜ’ ಮೊದಲ ಹಾಡು; ಉಪ್ಪಿ ಚಿತ್ರದ ಅದ್ದೂರಿ ಇವೆಂಟ್​ಗೆ ಹೈದರಾಬಾದ್​ ಸಜ್ಜು
ಉಪೇಂದ್ರ
Follow us
ಮದನ್​ ಕುಮಾರ್​
|

Updated on:Jan 30, 2023 | 7:53 PM

ಕನ್ನಡದ ‘ಕಬ್ಜ’ ಸಿನಿಮಾ (Kabzaa Movie) ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಲು ಬೇಕಾದ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಪ್ರತಿ ಹೆಜ್ಜೆಯಲ್ಲೂ ಭಾರಿ ನಿರೀಕ್ಷೆ ಹುಟ್ಟು ಹಾಕುತ್ತಿರುವ ಈ ಸಿನಿಮಾದಲ್ಲಿ ಉಪೇಂದ್ರ (Upendra) ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್​ ಕೂಡ ನಟಿಸಿರುವುದರಿಂದ ಹೈಪ್​ ಇನ್ನಷ್ಟು ಹೆಚ್ಚಿದೆ. ಆರ್​. ಚಂದ್ರು ನಿರ್ದೇಶನದ ಈ ಸಿನಿಮಾ ಈಗಾಗಲೇ ಟೀಸರ್​ ಮೂಲಕ ಸೌಂಡು ಮಾಡಿದೆ. ಈಗ ಹಾಡುಗಳ ಮೂಲಕ ಧೂಳೆಬ್ಬಿಸಲು ಪ್ಲ್ಯಾನ್​ ರೆಡಿ ಆಗಿದೆ. ಫೆಬ್ರವರಿ 4ರಂದು ‘ಕಬ್ಜ’ ಸಿನಿಮಾದ ಮೊದಲ ಹಾಡಿನ ಲಿರಿಕಲ್​ ವಿಡಿಯೋ (Kabzaa First Song) ರಿಲೀಸ್​ ಆಗಲಿದೆ. ಅದಕ್ಕಾಗಿ ಹೈದರಾಬಾದ್​ನಲ್ಲಿ ವೇದಿಕೆ ಸಜ್ಜಾಗುತ್ತಿದೆ.

‘ಕಬ್ಜ’ ಸಿನಿಮಾದಲ್ಲಿ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಆರ್​. ಚಂದ್ರು ಅವರ ಮುಂದಾಳತ್ವದಲ್ಲಿ ನುರಿತ ತಂತ್ರಜ್ಞರ ತಂಡ ಹಗಲಿರುಳು ಶ್ರಮಿಸುತ್ತಿದೆ. ಸಂಗೀತದ ಜವಾಬ್ದಾರಿಯನ್ನು ರವಿ ಬಸ್ರೂರು ಅವರು ನಿಭಾಯಿಸುತ್ತಿದ್ದಾರೆ. ಟೀಸರ್​ಗೆ ಅವರು ನೀಡಿದ ಹಿನ್ನೆಲೆ ಸಂಗೀತ ಕೇಳಿ ಫ್ಯಾನ್ಸ್​ ಫಿದಾ ಆಗಿದ್ದರು. ಈಗ ಮೊದಲ ಹಾಡು ಕೇಳುವ ಸಮಯ ಹತ್ತಿರವಾಗಿದೆ. ರವಿ ಬಸ್ರೂರು ಅವರ ಬತ್ತಳಿಕೆಯಿಂದ ಬರಲಿರುವ ಈ ಸಾಂಗ್​ ಹೇಗಿರಲಿದೆ ಎಂಬುದನ್ನು ತಿಳಿಯಲು ಅಭಿಮಾನಿ ಬಳಗ ಕಾದು ಕೂತಿದೆ.

ಇದನ್ನೂ ಓದಿ
Image
‘ಈ ಹಬ್ಬಕ್ಕೆ ಉಪ್ಪಿ ಇರಲೇಬೇಕು, ಅವ್ರು ಪೂಜೆ ಮಾಡಿದ್ರೆ ಮಾತ್ರ ನಮಗೆ ಸಂತೋಷ’: ಪ್ರಿಯಾಂಕಾ ಉಪೇಂದ್ರ
Image
ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರದ ಸೆಟ್​​ಗೆ ಶಿವರಾಜ್​ಕುಮಾರ್​-ಗೀತಾ ಭೇಟಿ
Image
Upendra: ‘ಯುಐ’ ಚಿತ್ರಕ್ಕೆ ಶೂಟಿಂಗ್​ ಶುರು; ಸೆಟ್​ನಲ್ಲಿ ಡೈರೆಕ್ಟರ್​ ಕ್ಯಾಪ್​ ಧರಿಸಿ ನಿಂತ ಉಪೇಂದ್ರ
Image
Kabza Movie: 7 ಭಾಷೆಗಳಲ್ಲಿ ಧೂಳೆಬ್ಬಿಸಲಿದೆ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ; ಭರದಿಂದ ಸಾಗುತ್ತಿದೆ ಡಬ್ಬಿಂಗ್​ ಕೆಲಸ

‘ಕೆಜಿಎಫ್​’ ಮತ್ತು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಯಶಸ್ಸಿನ ಬಳಿಕ ರವಿ ಬಸ್ರೂರು ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇರುವ ಸಂಗೀತ ನಿರ್ದೇಶಕನಾಗಿ ಬೆಳೆದು ನಿಂತಿದ್ದಾರೆ. ಅವರ ಕೆಲಸದ ಮೇಲೆ ಸಿನಿಪ್ರಿಯರು ಸಖತ್​ ಭರವಸೆ ಇಟ್ಟುಕೊಂಡಿದ್ದಾರೆ. ‘ಕಬ್ಜ’ ಚಿತ್ರಕ್ಕೆ ಅವರು ಸಂಗೀತ ನಿರ್ದೇಶನ ಮಾಡಿರುವುದರಿಂದ ಸಿಕ್ಕಾಪಟ್ಟೆ ಕ್ರೇಜ್​ ಸೃಷ್ಟಿ ಆಗಿದೆ.

ಇದನ್ನೂ ಓದಿ: Kabzaa: ಟ್ವಿಟರ್​ ಟ್ರೆಂಡಿಂಗ್​ನಲ್ಲಿ ‘ಪಠಾಣ್​’ ಚಿತ್ರವನ್ನೇ ಮೀರಿಸಿದ ‘ಕಬ್ಜ’: ಉಪ್ಪಿ-ಆರ್​. ಚಂದ್ರು ಕಮಾಲ್​

ಫೆಬ್ರವರಿ 4ರಂದು ‘ಕಬ್ಜ’ ಸಿನಿಮಾದ ಮೊದಲ ಸಾಂಗ್​ ಬಿಡುಗಡೆ ಆಗಲಿದೆ ಎಂಬುದನ್ನು ತಿಳಿಸಲು ಹೊಸ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮುಂತಾದ ಭಾಷೆಗಳಲ್ಲಿ ಪೋಸ್ಟರ್​ಗಳನ್ನು ರಿಲೀಸ್​ ಮಾಡಲಾಗಿದ್ದು, ಉಪೇಂದ್ರ ಅವರು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬದ ದಿನವೇ ಉಪೇಂದ್ರ-ಸುದೀಪ್​ ನಟನೆಯ ‘ಕಬ್ಜ’ ಸಿನಿಮಾ ರಿಲೀಸ್

‘ಕಬ್ಜ ಚಿತ್ರದ ಮೊದಲ ಲಿರಿಕಲ್​ ಸಾಂಗ್​ಗೆ ಸಂಬಂಧಪಟ್ಟಂತೆ ನೀವೆಲ್ಲ ಕಾಯುತ್ತಿದ್ದ ದೊಡ್ಡ ಅನೌನ್ಸ್​ಮೆಂಟ್​ ಇಲ್ಲಿದೆ. ಹೈದರಾಬಾದ್​ನಲ್ಲಿ ಫೆಬ್ರವರಿ 4ರಂದು ಅದ್ದೂರಿ ಕಾರ್ಯಕ್ರಮ ಮಾಡಲಾಗುವುದು’ ಎಂದು ಉಪೇಂದ್ರ ಟ್ವೀಟ್​ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅನೇಕ ಸ್ಟಾರ್​ ಕಲಾವಿದರು ನಟಿಸಿದ್ದಾರೆ. ನಾಯಕಿಯಾಗಿ ಶ್ರೀಯಾ ಶರಣ್​ ಅಭಿನಯಿಸಿದ್ದಾರೆ. ಮಾರ್ಚ್​ 17ರಂದು ‘ಕಬ್ಜ’ ಚಿತ್ರ ವಿಶ್ವಾದ್ಯಂತ ರಿಲೀಸ್​ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:53 pm, Mon, 30 January 23

ನಾವೇನು ಕೈಗೆ ಬಳೆ ತೊಟ್ಟು ಕುಳಿತಿಲ್ಲ: ವಿಜಯೇಂದ್ರ ಕಿಡಿ
ನಾವೇನು ಕೈಗೆ ಬಳೆ ತೊಟ್ಟು ಕುಳಿತಿಲ್ಲ: ವಿಜಯೇಂದ್ರ ಕಿಡಿ
ಒಬ್ಬ ಭಯೋತ್ಪಾದಕನ ಹಾಗೆ ರವಿಯವರನ್ನು ನಡೆಸಿಕೊಂಡಿದ್ದಾರೆ: ವಿಜಯೇಂದ್ರ
ಒಬ್ಬ ಭಯೋತ್ಪಾದಕನ ಹಾಗೆ ರವಿಯವರನ್ನು ನಡೆಸಿಕೊಂಡಿದ್ದಾರೆ: ವಿಜಯೇಂದ್ರ
ಬಿಡುಗಡೆ ಬಳಿಕ ಸಿಟಿ ರವಿ ಮಹತ್ವದ ಸುದ್ದಿಗೋಷ್ಠಿಯ ನೇರಪ್ರಸಾರ
ಬಿಡುಗಡೆ ಬಳಿಕ ಸಿಟಿ ರವಿ ಮಹತ್ವದ ಸುದ್ದಿಗೋಷ್ಠಿಯ ನೇರಪ್ರಸಾರ
ಮೀರತ್‌ನಲ್ಲಿ ಪ್ರದೀಪ್ ಮಿಶ್ರಾ ಕಥಾ ಕಾರ್ಯಕ್ರಮದಲ್ಲಿ ಕಾಲ್ತುಳಿತ
ಮೀರತ್‌ನಲ್ಲಿ ಪ್ರದೀಪ್ ಮಿಶ್ರಾ ಕಥಾ ಕಾರ್ಯಕ್ರಮದಲ್ಲಿ ಕಾಲ್ತುಳಿತ
ರವಿಯವರ ಚಿಕ್ಕಮಗಳೂರು ಮನೆಬಳಿ ಕಾರ್ಯಕರ್ತರ ಸಂಭ್ರಮಾಚರಣೆ 
ರವಿಯವರ ಚಿಕ್ಕಮಗಳೂರು ಮನೆಬಳಿ ಕಾರ್ಯಕರ್ತರ ಸಂಭ್ರಮಾಚರಣೆ 
ಪಾಯಿಂಟ್ ಬ್ಲ್ಯಾಂಕ್ ರೇಂಜಲ್ಲಿ ಶೂಟ್ ಮಾಡುವಂತೆ ಹೇಳಿದ್ದು ನಿಜ: ಪ್ರಸಾದ್
ಪಾಯಿಂಟ್ ಬ್ಲ್ಯಾಂಕ್ ರೇಂಜಲ್ಲಿ ಶೂಟ್ ಮಾಡುವಂತೆ ಹೇಳಿದ್ದು ನಿಜ: ಪ್ರಸಾದ್
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಟಿ ರವಿ ಪ್ರಕರಣ ವಿಚಾರಣೆ ಆರಂಭ
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಟಿ ರವಿ ಪ್ರಕರಣ ವಿಚಾರಣೆ ಆರಂಭ
ಬಸ್​ನೊಳಗೆ ಕಿರುಕುಳ ನೀಡಿದ ಕುಡುಕನಿಗೆ 26 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ
ಬಸ್​ನೊಳಗೆ ಕಿರುಕುಳ ನೀಡಿದ ಕುಡುಕನಿಗೆ 26 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ
ರವಿ ಮನೆಯಲ್ಲಿ ಪ್ರಾಣೇಶ್ ಜೊತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು
ರವಿ ಮನೆಯಲ್ಲಿ ಪ್ರಾಣೇಶ್ ಜೊತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು
ಸ್ಪರ್ಧಿಗಳಿಗೆ ಇನ್ನಷ್ಟು ಕಷ್ಟ ಕೊಟ್ಟ ಬಿಗ್ ಬಾಸ್; ಭವ್ಯಾ, ಐಶ್ವರ್ಯಾ ಪರದಾಟ
ಸ್ಪರ್ಧಿಗಳಿಗೆ ಇನ್ನಷ್ಟು ಕಷ್ಟ ಕೊಟ್ಟ ಬಿಗ್ ಬಾಸ್; ಭವ್ಯಾ, ಐಶ್ವರ್ಯಾ ಪರದಾಟ