ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 27 ವರ್ಷ; ಅಭಿಮಾನಿಗಳದ್ದು ಒಂದೇ ಕೋರಿಕೆ
ಕಿಚ್ಚ ಸುದೀಪ್ ಅವರ ಮೊದಲ ಸಿನಿಮಾ ‘ತಾಯವ್ವ’. ವಿ.ಉಮಾಕಾಂತ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಉಮಾಶ್ರೀ, ಚರಣ್ ರಾಜ್, ರಮೇಶ್ ಭಟ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದರು.
ಕಿಚ್ಚ ಸುದೀಪ್ (Kichcha Sudeep) ಅವರು ಚಿತ್ರರಂಗದಲ್ಲಿ ಶ್ರೇಷ್ಠ ನಟ ಎನಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ನಟಿಸಿ ಅವರು ಜನಪ್ರಿಯತೆ ಪಡೆದಿದ್ದಾರೆ. ಈಗ ಅವರು ಚಿತ್ರರಂಗಕ್ಕೆ ಕಾಲಿಟ್ಟು 27 ವರ್ಷಗಳು ಕಳೆದಿವೆ. ಈ ವಿಶೇಷ ದಿನವನ್ನು ಕಿಚ್ಚ ಸುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ನೆನಪಿಸಿಕೊಂಡಿದ್ದಾರೆ. ಇಷ್ಟು ವರ್ಷಗಳ ಕಾಲ ಬೆನ್ನಿಗೆ ನಿಂತ ಕನ್ನಡ ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.
ಕಿಚ್ಚ ಸುದೀಪ್ ಅವರ ಮೊದಲ ಸಿನಿಮಾ ‘ತಾಯವ್ವ’. ವಿ.ಉಮಾಕಾಂತ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಉಮಾಶ್ರೀ, ಚರಣ್ ರಾಜ್, ರಮೇಶ್ ಭಟ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದರು. ಆ ಬಳಿಕ ‘ಸ್ಪರ್ಶ’, ‘ಹುಚ್ಚ’, ‘ಕಿಚ್ಚ’ ಸೇರಿ ಹಲವು ಸಿನಿಮಾಗಳಲ್ಲಿ ಸುದೀಪ್ ನಟಿಸಿದರು. ಈಗ ಅವರು ಯಶಸ್ವಿಯಾಗಿ 27 ವರ್ಷ ಪೂರ್ಣಗೊಳಿಸಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸುದೀಪ್ ಅವರು, ‘ಖಂಡಿತವಾಗಿಯೂ ಇದು ಸ್ಮರಣೀಯ ಪ್ರಯಾಣ. ಚಿತ್ರರಂಗದಲ್ಲಿ 27 ವರ್ಷಗಳ ಕಾಲ ಹಲವಾರು ಅದ್ಭುತ ಪ್ರತಿಭೆಗಳೊಂದಿಗೆ ನಾನು ಕೆಲಸ ಮಾಡಿದ್ದೇನೆ. ನನಗೆ ಸ್ಫೂರ್ತಿ ನೀಡಿದ, ನನ್ನನ್ನು ಇನ್ನೂ ಉತ್ತಮವಾಗಿಸಿಕೊಳ್ಳಲು ಸಹಕಾರ ನೀಡಿದ ಆ ಪ್ರತಿಭೆಗಳಿಗೆ ಧನ್ಯವಾದ. ನನ್ನ ಬೆನ್ನಿಗೆ ನಿಂತ ನಿಮ್ಮೆಲ್ಲರಿಗೂ ನನ್ನ ನಮಸ್ಕಾರ’ ಎಂದು ಸುದೀಪ್ ಹೇಳಿದ್ದಾರೆ.
‘ನನಗೆ ಅವಕಾಶ ನೀಡಿದ ಕನ್ನಡ ಚಿತ್ರರಂಗಕ್ಕೆ ಧನ್ಯವಾದ. ನನ್ನ ಮೇಲೆ ನಂಬಿಕೆ ಇಟ್ಟ ಹಿಂದಿ, ತಮಿಳು ಹಾಗೂ ತೆಲುಗು ಚಿತ್ರರಂಗಕ್ಕೆ ಧನ್ಯವಾದ ಹೇಳದೇ ಇದ್ದರೆ ಅಪೂರ್ಣ ಎನಿಸುತ್ತದೆ’ ಎಂದು ಸುದೀಪ್ ಬರೆದುಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: Kichcha Sudeep: ‘ಹಾರದ ಜತೆ ಮೊಟ್ಟೆಯೂ ಬರುತ್ತೆ’; ರಶ್ಮಿಕಾ ಕುರಿತ ಟ್ರೋಲ್ಗೆ ಕಿಚ್ಚ ಸುದೀಪ್ ಕೊಟ್ರು ಖಡಕ್ ಪ್ರತಿಕ್ರಿಯೆ
ಕಿಚ್ಚ ಸುದೀಪ್ ಅವರಿಗೆ ಎಲ್ಲರೂ ಶುಭಾಶಯ ಕೋರಿದ್ದಾರೆ. ಅವರು ಚಿತ್ರರಂಗದಲ್ಲಿ ಮತ್ತಷ್ಟು ವರ್ಷ ಸೇವೆ ಸಲ್ಲಿಸಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಇದರ ಜತೆಗೆ ಅಭಿಮಾನಿಗಳು ಸುದೀಪ್ ಎದುರು ಬೇಡಿಕೆ ಒಂದನ್ನು ಇಡುತ್ತಿದ್ದಾರೆ. ಆದಷ್ಟು ಬೇಗ ಅವರು ಹೊಸ ಸಿನಿಮಾ ಘೋಷಣೆ ಮಾಡಲಿ ಎಂಬುದು ಅಭಿಮಾನಿಗಳ ಬೇಡಿಕೆ. ಕಳೆದ ವರ್ಷ ತೆರೆಗೆ ಬಂದ ‘ವಿಕ್ರಾಂತ್ ರೋಣ’ ಬಳಿಕ ಸುದೀಪ್ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಹೀಗಾಗಿ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:48 am, Tue, 31 January 23