ನಟ ಕಿಚ್ಚ ಸುದೀಪ್ ಅವರು ಇಂದು (ಜ.12) ಬೆಂಗಳೂರಿನಲ್ಲಿ ಹೊಸ ಮಲ್ಟಿಪ್ಲೆಕ್ಸ್ ಉದ್ಘಾಟನೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರ ಜೊತೆ ಅತಿಥಿಗಳಾಗಿ ಶಾಸಕರಾದ ರಾಮಲಿಂಗ ರೆಡ್ಡಿ (Ramalinga Reddy) ಮತ್ತು ಸತೀಶ್ ರೆಡ್ಡಿ (Sathish Reddy) ಕೂಡ ಭಾಗಿ ಆಗಿದ್ದರು. ಈ ವೇಳೆ ಶಾಸಕರಿಬ್ಬರ ಜೊತೆ ಸುದೀಪ್ ಮಾತುಕತೆ ನಡೆಸಿದರು. ರಾಜಕೀಯಕ್ಕೆ ಸುದೀಪ್ ಎಂಟ್ರಿ ನೀಡುತ್ತಾರೆ ಎಂಬ ಗಾಸಿಪ್ ಇತ್ತೀಚೆಗೆ ಹಬ್ಬಿದೆ. ಆದರೆ ಆ ಕುರಿತು ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸುದೀಪ್ (Kichcha Sudeep) ಅವರ ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.