ಇಂದಿನಿಂದ ಯುವಜನೋತ್ಸವ: ಹುಬ್ಬಳ್ಳಿಯಲ್ಲಿ ಹಣೆಗಿಟ್ಟ ಕುಂಕುಮ ಅಳಿಸಿಕೊಂಡ ಸಿಎಂ ಬೊಮ್ಮಾಯಿ

TV9kannada Web Team

TV9kannada Web Team | Edited By: Ayesha Banu

Updated on: Jan 12, 2023 | 3:12 PM

ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಈ ವೇಳೆ ಯುವಜನೋತ್ಸವ ಕಲಾತಂಡದವರು ಸಿಎಂಗೆ ಆರತಿ ಮಾಡಿ ತಿಲಕವಿಟ್ಟು ಸ್ವಾಗತಿಸಿದರು. ಆದ್ರೆ ಮಾಧ್ಯಮಗಳ ಎದುರು ಬರ್ತಿದ್ದಂತೆ ಸಿಎಂ ಹಣೆಗೆ ಹಚ್ಚಿದ್ದ ತಿಲಕ ಒರಿಸಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇವತ್ತು ಕರ್ನಾಟಕದ ಎರಡನೇ ದೊಡ್ಡ ನಗರ, ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರ ಹುಬ್ಬಳ್ಳಿಗೆ ಬರುತ್ತಿದ್ದಾರೆ. ಹೀಗೆ ಬರುವ ಮೋದಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನುಡಿ ಎನ್ನುವಂತೆ ರಾಷ್ಟ್ರೀಯ ಯುವಜನೋತ್ಸವವನ್ನ ಉದ್ಘಾಟಿಸಲಿದ್ದಾರೆ. ರೋಡ್‌ ಶೋ ನಡೆಸುವ ಪ್ರಧಾನಿ ಮೋದಿ ನಂತರ ಆಯ್ದ ಯುವಜನತೆಯೊಂದಿಗೆ ಸಂವಾದ ನಡೆಸಲಿದ್ದಾರೆ. ಮೋದಿಯ ಈ ಹುಬ್ಬಳ್ಳಿ ಕಾರ್ಯಕ್ರಮಕ್ಕಾಗಿ ಅವಳಿ ಮಹಾನಗರಗಳಲ್ಲಿ ಭಾರೀ ಬಿಗಿ ಭದ್ರತೆ ಒದಗಿಸಲಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಈ ವೇಳೆ ಯುವಜನೋತ್ಸವ ಕಲಾತಂಡದವರು ಸಿಎಂಗೆ ಆರತಿ ಮಾಡಿ ತಿಲಕವಿಟ್ಟು ಸ್ವಾಗತಿಸಿದರು. ಆದ್ರೆ ಮಾಧ್ಯಮಗಳ ಎದುರು ಬರ್ತಿದ್ದಂತೆ ಸಿಎಂ ಹಣೆಗೆ ಹಚ್ಚಿದ್ದ ತಿಲಕ ಒರಿಸಿಕೊಂಡಿದ್ದಾರೆ.

Follow us on

Click on your DTH Provider to Add TV9 Kannada