ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಜನೆವರಿ 12 ರಂದು ಹುಬ್ಬಳ್ಳಿಗೆ ಬರುವ ಮೊದಲೇ ಪುನಃ ಒಂದುವಾರ ಬಿಟ್ಟು ರಾಜ್ಯಕ್ಕೆ ಬರಲಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸುಳಿವು ನೀಡಿದ್ದರು. ಪ್ರಧಾನಿಗಳ ನಿನ್ನೆಯ ಹುಬ್ಬಳ್ಳಿ ಕಾರ್ಯಕ್ರಮದ ಬಳಿಕ ಅದು ಖಚಿತಗೊಂಡಿದೆ. ಪ್ರಧಾನಿ ಮೋದಿ ಜನೆವರಿ 19 ರಂದು ಕರ್ನಾಟಕಕ್ಕೆ ಆಗಮಿಸಲಿದ್ದು ಕಲಬುರಗಿ (Kalaburagi) ಹಾಗೂ ಯಾದಗಿರಿ (Yadgir) ಜಿಲ್ಲೆಯಲ್ಲಿ ನಡೆಯಲಿರುವ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ವಿಧಾನ ಸಭಾ ಚುನಾವಣೆ ಹತ್ತಿರವಾಗಿರುವುದರಿಂದ ಪ್ರಧಾನಿಗಳ ಆಗಮನ ಬಿಜೆಪಿಗೆ ಧೀಶಕ್ತಿಯನ್ನು ಒದಗಿಸುವುದರಲ್ಲಿ ಎರಡು ಮಾತಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ