‘ನನ್ನ ಖಾಸಗಿ ಭಾಗಕ್ಕೆ ಗುದ್ದುತ್ತಿದ್ದ’; ಬಾಯ್ಫ್ರೆಂಡ್ ಬಗ್ಗೆ ‘ನಮ್ಮಣ್ಣ’ ಸಿನಿಮಾ ನಟಿಯ ಗಂಭೀರ ಆರೋಪ
1999ರಲ್ಲಿ ಫ್ಲೋರಾ ಸೈನಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರು ವೃತ್ತಿಜೀವನ ಆರಂಭಿಸಿದ್ದು ತೆಲುಗು ಚಿತ್ರರಂಗದಿಂದ. ಹಲವು ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
‘ಕೋದಂಡ ರಾಮ’, ‘ನಮ್ಮಣ್ಣ’ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಫ್ಲೋರಾ ಸೈನಿ (ಆಶಾ ಸೈನಿ) ಅವರು ಈಗ ಸುದ್ದಿಯಲ್ಲಿದ್ದಾರೆ. 14 ತಿಂಗಳ ಕಾಲ ಅವರು ನಿರ್ಮಾಪಕ ಗೌರಂಗ್ (Gaurang Doshi) ಜತೆ ರಿಲೇಶನ್ಶಿಪ್ನಲ್ಲಿದ್ದರು. ಆದರೆ, ಈ ರಿಲೇಶನ್ಶಿಪ್ ತುಂಬಾನೇ ಬೀಭತ್ಸವಾಗಿತ್ತು ಎಂದು ಹೇಳಿದ್ದಾರೆ. 1999ರಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರುವ ಫ್ಲೋರಾ (Flora Saini) ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸದ್ಯ ಅವರ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
1999ರಲ್ಲಿ ಫ್ಲೋರಾ ಸೈನಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರು ವೃತ್ತಿಜೀವನ ಆರಂಭಿಸಿದ್ದು ತೆಲುಗು ಚಿತ್ರರಂಗದಿಂದ. ಹಲವು ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಆ ಬಳಿಕ ಹಿಂದಿ, ಕನ್ನಡ, ಪಂಜಾಬಿ ಚಿತ್ರಗಳಲ್ಲಿ ಅವರು ನಟಿಸಿದರು. ಈಗಲೂ ಫ್ಲೋರಾ ಅವರು ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರು ತಮ್ಮ ರಿಲೇಶನ್ಶಿಪ್ ಬಗ್ಗೆ ಮಾತನಾಡಿದ್ದಾರೆ.
ಗೌರಂಗ್ ದೋಶಿ ಜತೆ ಫ್ಲೋರಾ 14 ತಿಂಗಳು ಕಳೆದಿದ್ದರು. ಇದು ನರಕವಾಗಿತ್ತು ಎಂದು ಈ ಮೊದಲು ಅವರ ಆರೋಪ ಮಾಡಿದ್ದರು. ಈಗ ಹೆಸರನ್ನು ಉಲ್ಲೇಖ ಮಾಡದೆ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ. ‘ನಾನು ಖ್ಯಾತ ನಿರ್ಮಾಪಕನ ಜತೆ ಪ್ರೀತಿಯಲ್ಲಿದ್ದೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಅದು ನಿಂದನಾತ್ಮಕ ಸಂಬಂಧವಾಗಿ ಬದಲಾಯಿತು. ಆತ ನನ್ನ ಮುಖ ಹಾಗೂ ಖಾಸಗಿ ಭಾಗಕ್ಕೆ ಹೊಡೆಯುತ್ತಿದ್ದ. ನನ್ನ ಮೊಬೈಲ್ ಕಸಿದುಕೊಳ್ಳುತ್ತಿದ್ದ. ನನ್ನನ್ನು ಸಿನಿಮಾ ರಂಗದಿಂದ ದೂರ ಇಡಲು ಪ್ರಯತ್ನಿಸಿದ. 14 ತಿಂಗಳು ನಾನು ಯಾರ ಜತೆಯೂ ಮಾತನಾಡದಂತೆ ನೋಡಿಕೊಂಡ. ಒಂದು ದಿನ ಆತ ನನ್ನ ಹೊಟ್ಟೆಯ ಮೇಲೆ ಹೊಡೆದ. ನಾನು ಓಡಿ ಬಂದೆ’ ಎಂದಿದ್ದಾರೆ ಫ್ಲೋರಾ.
ಇದನ್ನೂ ಓದಿ: Ashitha First Reaction: ಆಶಿತಾ ಮೀಟೂ ವಿವಾದ: ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ‘ಬಾ ಬಾರೋ ರಸಿಕ’ ಚಿತ್ರದ ನಟಿ
ಹೀಗೆ ಓಡಿಬಂದ ಫ್ಲೋರಾ ಪಾಲಕರ ಜತೆ ವಾಸಮಾಡೋಕೆ ಆರಂಭಿಸಿದರು. ಈ ಘಟನೆಯಿಂದ ಚೇತರಿಸಿಕೊಳ್ಳೋಕೆ ಅವರಿಗೆ ತಿಂಗಳೇ ಬೇಕಾಯಿತು. ನಂತರ ಅವರು ಮತ್ತೆ ನಟನೆ ಆರಂಭಿಸಿದರು. ‘ಎಲ್ಲದರಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಯಿತು. ಆದರೆ, ನಾನು ಈಗ ಖುಷಿಯಾಗಿದ್ದೇನೆ. ನನಗೆ ಪ್ರೀತಿಯೂ ಸಿಕ್ಕಿದೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ