Ashitha First Reaction: ಆಶಿತಾ ಮೀಟೂ ವಿವಾದ: ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ‘ಬಾ ಬಾರೋ ರಸಿಕ’ ಚಿತ್ರದ ನಟಿ

Sandalwood Actress Ashitha: ‘ಬೇರೆ ಬೇರೆ ಚಿತ್ರರಂಗದಿಂದ ಬಂದು ಮೀಟೂ ಆಫರ್​ ನೀಡುವವರು ಇದ್ದರು. ಆದರೆ ನಾನು ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಅದರಿಂದ ನಾನು ಚಿತ್ರರಂಗದಿಂದ ಹೊರಬಂದೆ’ ಎಂದು ಆಶಿತಾ ಹೇಳಿದ್ದಾರೆ.

Ashitha First Reaction: ಆಶಿತಾ ಮೀಟೂ ವಿವಾದ: ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ‘ಬಾ ಬಾರೋ ರಸಿಕ’ ಚಿತ್ರದ ನಟಿ
ಆಶಿತಾ
Follow us
TV9 Web
| Updated By: ಮದನ್​ ಕುಮಾರ್​

Updated on:Sep 16, 2022 | 4:31 PM

ಕನ್ನಡ ಚಿತ್ರರಂಗದ (Sandalwood) ಖ್ಯಾತ ನಟಿ ಆಶಿತಾ ಅವರು ಮೀಟೂ (Me Too) ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಯೂಟ್ಯೂಬ್​ ಚಾನೆಲ್​ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅವರು ಈ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಎಲ್ಲದರ ಬಗ್ಗೆ ‘ಟಿವಿ9 ಕನ್ನಡ’ ಜೊತೆ ಮಾತನಾಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಸಾಮಾನ್ಯವಾಗಿ ನಾವೆಲ್ಲ ಕಲಾವಿದರು ಈ ರೀತಿ ಕಷ್ಟ ಅನುಭವಿಸುತ್ತೇವೆ. ನನ್ನ ಜೊತೆಯೇ ಹೀಗೆಲ್ಲ ಆಯ್ತು ಅಂತ ನಾನು ಹೇಳಿಲ್ಲ. ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದ್ದೇನೆ. ಅನೇಕ ಅವಕಾಶಗಳು ಬಂದಾಗ ನನಗೆ ಇಷ್ಟ ಆಗಿಲ್ಲ. ಬರೀ ಮೀಟೂ ಎನ್ನುವುದು ಮಾತ್ರವೇ ಕಾರಣ ಅಲ್ಲ’ ಎಂದು ಆಶಿತಾ (Ashitha) ಹೇಳಿದ್ದಾರೆ.

‘ವೈಯಕ್ತಿಕವಾಗಿ ನನಗೆ ಈ ರೀತಿ ಆಗಿದೆ ಎನ್ನಲಾರೆ. ನಟಿ ಎಂದಮೇಲೆ ಕೆಲವು ಘಟನೆಗಳ ಬಗ್ಗೆ ಕೇಳಿರುತ್ತೇವೆ. ಬೇರೆ ಬೇರೆ ಚಿತ್ರರಂಗದಿಂದ ಬಂದು ಮೀಟೂ ಆಫರ್​ ನೀಡುವವರು ಇದ್ದರು. ಆದರೆ ನಾನು ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಅದರಿಂದ ನಾನು ಚಿತ್ರರಂಗದಿಂದ ಹೊರಬಂದೆ. ಆಗಿನ ಕಾಲದಲ್ಲಿ ಆಗಿದ್ದು ಅಲ್ಲಿಯೇ ಬಿಟ್ಟೆ. ಹಾಗೇನಾದರೂ ಆಗಿದ್ದರೆ ನಾನು ಇನ್ನೂ ಇಂಡಸ್ಟ್ರಿಯಲ್ಲಿ ಇರಬೇಕಾಗಿತ್ತು’ ಎಂದು ಆಶಿತಾ ಹೇಳಿದ್ದಾರೆ.

‘ನಾನು ಚಿತ್ರರಂಗ ತೊರೆಯಲು ಮೀಟೂ ಮಾತ್ರವೇ ಕಾರಣವಲ್ಲ. ಬೇರೆ ಬೇರೆ ಕಾರಣಗಳು ಇದ್ದವು. ನಾನು ವಿದ್ಯಾಭ್ಯಾಸ ಮಾಡುತ್ತಿದ್ದರಿಂದ ಕೆಲವು ಸಿನಿಮಾದ ಅವಕಾಶಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದಿದ್ದಾರೆ ಆಶಿತಾ. ‘ಆಕಾಶ್​’, ‘ತವರಿನ ಸಿರಿ’, ‘ಬಾ ಬಾರೋ ರಸಿಕ’, ‘ರೋಡ್​ ರೋಮಿಯೋ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಆಶಿತಾ ಫೇಮಸ್​ ಆಗಿದ್ದರು. ‘ರೋಡ್​ ರೋಮಿಯೋ’ ಚಿತ್ರದ ಬಳಿಕ ಅವರು ಬಣ್ಣದ ಲೋಕದಲ್ಲಿ ಹೆಚ್ಚಾಗಿ ಸಕ್ರಿಯವಾಗಲಿಲ್ಲ.

ಇದನ್ನೂ ಓದಿ
Image
ಶತ್ರುಘ್ನಾ ಸಿನ್ಹಾ ಮಾಟ ಮಾಡಿಸಿದ್ದರು ಎಂದು ಆರೋಪಿಸಿದ್ದ ಮಾಜಿ ಬಿಗ್​ಬಾಸ್ ಸ್ಪರ್ಧಿಯ ಮೇಲೆ ಹರಿಹಾಯ್ದ ಲವ್ ಸಿನ್ಹಾ; ಏನಿದು ಪ್ರಕರಣ?
Image
ಮೀಟೂ ಆರೋಪಿ ಜತೆ ವೇದಿಕೆ ಹಂಚಿಕೊಳ್ಳಲಿರುವ ಸಿಎಂ; ಅಸಮಾಧಾನ ಹೊರಹಾಕಿದ ಗಾಯಕಿ
Image
ಶ್ರುತಿ ಹರಿಹರನ್​ ಮೀಟೂ ಕಾನೂನು ಸಮರ: ಅರ್ಜುನ್​ ಸರ್ಜಾಗೆ ಗೆಲುವು? ಸಾಕ್ಷಿ ಕೊರತೆಯಿಂದ ಬಿ ರಿಪೋರ್ಟ್​
Image
ಮೀಟೂ ಕೇಸ್​: ಶ್ರುತಿ ಹರಿಹರನ್​ಗೆ ಹಿನ್ನಡೆ ಬಳಿಕ ಧ್ರುವ ಸರ್ಜಾ, ಮೇಘನಾ ರಾಜ್​ ಪ್ರತಿಕ್ರಿಯೆ ಏನು?

ಯೂಟ್ಯೂಬ್​ ಸಂದರ್ಶನದಲ್ಲಿ ಆಶಿತಾ ಹೇಳಿದ್ದೇನು?

ನಟ, ನಿರ್ದೇಶಕ ರಘುರಾಮ್​ ಅವರ ಯೂಟ್ಯೂಬ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಆಶಿತಾ ನೇರವಾಗಿ ಮಾತಾಡಿದ್ದಾರೆ. ಶೂಟಿಂಗ್ ಸೆಟ್​ನಲ್ಲಿ ಎದುರಾದ ಎಲ್ಲ ಕಷ್ಟದ ಅನುಭವವನ್ನು ಅವರು ತೆರೆದಿಟ್ಟಿದ್ದಾರೆ.

‘ದೊಡ್ಡ ದೊಡ್ಡ ಚಿತ್ರಗಳ ಅವಕಾಶ ಬಂದರೂ ನನಗೆ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಕೇಳಿದ್ದನ್ನು ನಾನು ಮಾಡುತ್ತಿಲ್ಲ ಎಂಬ ಕಾರಣಕ್ಕೆ ಸೆಟ್​ನಲ್ಲಿ ನನಗೆ ಕಷ್ಟ ಕೊಟ್ಟಿದ್ದಾರೆ. ಟೇಕ್​ ಸರಿಯಿದ್ದರೂ ಕೂಡ ರೀಟೇಕ್​ ಕೇಳುತ್ತಿದ್ದರು. ಇದನ್ನು ಮಾಡಿದರೆ ಮಾತ್ರ ಚಾನ್ಸ್​ ಕೊಡುತ್ತೇವೆ, ಹೆಚ್ಚಿನ ಪೇಮೆಂಟ್​ ಕೊಡುತ್ತೇವೆ ಎನ್ನುತ್ತಿದ್ದರು. ಹಾಗಾಗಿ ನನಗೆ ಈ ಕ್ಷೇತ್ರ ಬೇಡ ಎನಿಸಿತು’ ಎಂದು ಆಶಿತಾ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:22 pm, Fri, 16 September 22

45 ವರ್ಷಗಳ ನಂತರ ತೆರೆದ ಸಂಭಾಲ್‌ನ ದೇವಾಲಯ; ವಿಡಿಯೋ ವೈರಲ್
45 ವರ್ಷಗಳ ನಂತರ ತೆರೆದ ಸಂಭಾಲ್‌ನ ದೇವಾಲಯ; ವಿಡಿಯೋ ವೈರಲ್
ಭಾರತವನ್ನು ವಿಶ್ವವು ಪ್ರಜಾಪ್ರಭುತ್ವದ ತಾಯಿಯೆಂದು ಆದರಿಸುತ್ತದೆ: ಪ್ರಧಾನಿ
ಭಾರತವನ್ನು ವಿಶ್ವವು ಪ್ರಜಾಪ್ರಭುತ್ವದ ತಾಯಿಯೆಂದು ಆದರಿಸುತ್ತದೆ: ಪ್ರಧಾನಿ
ಬ್ರ್ಯಾಂಡ್ ಬೆಂಗಳೂರು ಸಿಗುತ್ತಿಲ್ಲ, ರಸ್ತೆಗುಂಡಿಗಳಲ್ಲಿ ದಫನ್ ಆಯಿತೇ?
ಬ್ರ್ಯಾಂಡ್ ಬೆಂಗಳೂರು ಸಿಗುತ್ತಿಲ್ಲ, ರಸ್ತೆಗುಂಡಿಗಳಲ್ಲಿ ದಫನ್ ಆಯಿತೇ?
ಒಂದು ದೇಶ ಒಂದು ಚುನಾವಣೆ ಮಸೂದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧ:ಶಾಸಕ
ಒಂದು ದೇಶ ಒಂದು ಚುನಾವಣೆ ಮಸೂದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧ:ಶಾಸಕ
ಪರಭಾಷಾ ಚಿತ್ರಗಳ ಹಾವಳಿ ಹೆಚ್ಚುತ್ತಿದೆ, ಕಡಿಮೆಯಾಗುತ್ತಿಲ್ಲ: ಗೋವಿಂದು
ಪರಭಾಷಾ ಚಿತ್ರಗಳ ಹಾವಳಿ ಹೆಚ್ಚುತ್ತಿದೆ, ಕಡಿಮೆಯಾಗುತ್ತಿಲ್ಲ: ಗೋವಿಂದು
ಧರಣಿಯಲ್ಲಿ ಪಾಲ್ಗೊಂಡ ಸಚಿವೆಯನ್ನು ಸಿಎಂ ಸಸ್ಪೆಂಡ್ ಮಾಡಲಿ: ಸ್ವಾಮೀಜಿ
ಧರಣಿಯಲ್ಲಿ ಪಾಲ್ಗೊಂಡ ಸಚಿವೆಯನ್ನು ಸಿಎಂ ಸಸ್ಪೆಂಡ್ ಮಾಡಲಿ: ಸ್ವಾಮೀಜಿ
ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಶಿಕ್ಷೆ ಕೊಡಿಸಲು ಜೈಲಿಂದ ತಪ್ಪಿಸಿಕೊಂಡ ಚೈತ್ರಾ-ತ್ರಿವಿಕ್ರಂ
ಶಿಕ್ಷೆ ಕೊಡಿಸಲು ಜೈಲಿಂದ ತಪ್ಪಿಸಿಕೊಂಡ ಚೈತ್ರಾ-ತ್ರಿವಿಕ್ರಂ