ಮೀಟೂ ಆರೋಪಿ ಜತೆ ವೇದಿಕೆ ಹಂಚಿಕೊಳ್ಳಲಿರುವ ಸಿಎಂ; ಅಸಮಾಧಾನ ಹೊರಹಾಕಿದ ಗಾಯಕಿ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ವೈರಮುತ್ತು ಅತಿಥಿಯಾಗಿ ಆಗಮಿಸಿದ್ದರು. ಸ್ಟಾಲಿನ್​ ಜತೆ ಅವರು ವೇದಿಕೆ ಹಂಚಿಕೊಂಡಿದ್ದರು.

ಮೀಟೂ ಆರೋಪಿ ಜತೆ ವೇದಿಕೆ ಹಂಚಿಕೊಳ್ಳಲಿರುವ ಸಿಎಂ; ಅಸಮಾಧಾನ ಹೊರಹಾಕಿದ ಗಾಯಕಿ
ಚಿನ್ಮಯಿ ಶ್ರೀಪಾದ್​-ವೈರಮುತ್ತು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 26, 2022 | 8:46 PM

ಕೆಲ ವರ್ಷಗಳ ಹಿಂದೆ ಭಾರತೀಯ ಚಿತ್ರರಂಗದಲ್ಲಿ ‘ಮೀಟೂ’ ಆಂದೋಲನ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅನೇಕ ನಟಿಯರು ಮುಂದೆ ಬಂದು, ನಿರ್ದೇಶಕರು, ನಿರ್ಮಾಪಕರು ಹಾಗೂ ನಟರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ನಟಿಯರು ತಮಗಾದ ಅನ್ಯಾಯದ ಬಗ್ಗೆ ಹೇಳಿಕೊಂಡಾಗ ಅನೇಕರು ಅವರ ಪರವಾಗಿ ನಿಂತರು. ಆದರೆ, ತಪ್ಪಿತಸ್ಥರಿಗೆ ಶಿಕ್ಷೆ ಆಗಿಲ್ಲ ಎನ್ನುವ ಕೊರಗು ಕೆಲವರಲ್ಲಿ ಇದೆ. ಅದೇ ರೀತಿ ಗಾಯಕಿ ಚಿನ್ಮಯಿ ಶ್ರೀಪಾದ್ (Chinmayi Sripada)​ ಕೂಡ ಮೀಟೂ ಆರೋಪ ಮಾಡಿದ್ದರು. ಹಿರಿಯ ಗೀತ ರಚನಕಾರ ವೈರಮುತ್ತು (Vairamuthu) ವಿರುದ್ಧ ಅವರು ಸಿಡಿದೆದ್ದಿದ್ದರು. ವೈರಮುತ್ತು ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಎಂದು ಚಿನ್ಮಯಿ ಅನೇಕ ಸಂದರ್ಭಗಳಲ್ಲಿ ಅಸಮಾಧಾನ ಹೊರಹಾಕಿದ್ದಿದೆ. ಈಗ ಅವರು ಮತ್ತೊಮ್ಮೆ ಇದೇ ವಿಚಾರವನ್ನು ಪುನರುಚ್ಚರಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಅವರ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ವೈರಮುತ್ತು ಅತಿಥಿಯಾಗಿ ಆಗಮಿಸಲಿದ್ದಾರೆ. ಸ್ಟಾಲಿನ್​ ಜತೆ ಅವರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪ ಹೊತ್ತ ವ್ಯಕ್ತಿ ಜತೆಯಲ್ಲಿ ಸಿಎಂ ವೇದಿಕೆ ಹಂಚಿಕೊಳ್ಳುವುದಕ್ಕೆ ಚಿನ್ಮಯಿ ಆಕ್ರೋಶ ಹೊರಹಾಕಿದ್ದಾರೆ. ನ್ಯೂಸ್​9 ವೆಬ್​ಸೈಟ್​ನಲ್ಲಿ ಅವರು ಈ ಬಗ್ಗೆ ವಿಶೇಷ ಲೇಖನ ಬರೆದಿದ್ದಾರೆ.

‘ನಾನು 2018ರ ಅಕ್ಟೋಬರ್​​ನಲ್ಲಿ MeToo ಬಗ್ಗೆ ಮಾತನಾಡಿದ್ದೆ. ಅತ್ಯಂತ ಪ್ರಭಾವಶಾಲಿ ಮತ್ತು ರಾಜಕೀಯವಾಗಿ ಸಂಪರ್ಕ ಹೊಂದಿರುವ ವ್ಯಕ್ತಿ ವಿರುದ್ಧ ಗಂಭೀರ ಆರೋಪ ಮಾಡಿದ್ದೆ. ನಾನು ಮಾತನಾಡಿದಾಗ, ರಾಜಕೀಯ ಗುಲಾಮರು ರಕ್ತಕ್ಕಾಗಿ ಬೇಟೆಯಾಡಿದರು. ನಾನು ಬಲಪಂಥೀಯರಿಂದ ಹಣ ಪಡೆದಿದ್ದೇನೆ ಎಂದು ಆರೋಪಿಸಿದರು. ನನ್ನ ಬಿಟ್ಟು ಇನ್ನೂ 19 ಮಹಿಳೆಯರು ಆ ವ್ಯಕ್ತಿಯ ಹೆಸರನ್ನು ಹೇಳಿದ್ದರು. ಆದರೆ, ಅವರನ್ನು ನಿರ್ಲಕ್ಷ್ಯ ಮಾಡಲಾಯಿತು. ಗಾಯಕಿ ಎ.ಆರ್. ರೈಹಾನಾ ಅವರು ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ‘ಇದು ಬಹಿರಂಗ ರಹಸ್ಯ. ಎಲ್ಲರಿಗೂ ತಿಳಿದಿದೆ ಎಂದಿದ್ದರು’  ಎಂಬುದಾಗಿ ಚಿನ್ಮಯಿ ಬರೆದುಕೊಂಡಿದ್ದಾರೆ.

‘ನಾನು ಹೆಸರಿಸಿರುವ ವ್ಯಕ್ತಿ ಯಾವಾಗಲೂ ತನ್ನ ಪ್ರಭಾವ ತೋರಿಸುತ್ತಾರೆ. 20 ಮಹಿಳೆಯರು ಮಾಡಿದ ಆರೋಪ ರಾಜಕಾರಾಣಿಗಳಿಗೆ ಯಾವುದೇ ವ್ಯತ್ಯಾಸ ಉಂಟು ಮಾಡಿಲ್ಲ’ ಎಂದು ಬೇಸರ ಹೊರಹಾಕಿದ್ದಾರೆ ಚಿನ್ಮಯಿ.

‘ಕೇರಳ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳು, ತೇಜಸ್ವಿ ಯಾದವ್, ರಾಹುಲ್ ಗಾಂಧಿ, ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವಷ್ಟು ಶಕ್ತಿಶಾಲಿ ವ್ಯಕ್ತಿಯನ್ನು ಹೆಸರಿಸಲು ನನಗೆ ಧೈರ್ಯವಿದೆ ಎಂದು ಇವರು ಹೇಗೆ ಭಾವಿಸುತ್ತಾರೆ? ಕೇರಳದಲ್ಲಿ ದಿಲೀಪ್ ಕೇಸ್, ಫ್ರಾಂಕೋ ಮುಳಕ್ಕಲ್ ಕೇಸ್, ಹೇಮಾ ಕಮಿಷನ್ ವರದಿ ಮುಚ್ಚಿ ಹೋಗಿದೆ. ಹೀಗಿರುವಾಗ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಗಂಭೀರ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಒಪ್ಪಿಕೊಳ್ಳಲು ಕಷ್ಟವಾಗಬಹುದೆ’ ಎಂದು ಪ್ರಶ್ನಿಸಿದ್ದಾರೆ ಚಿನ್ಮಯಿ.

‘ದೌರ್ಜನ್ಯ ನಡೆದಿದೆ ಎಂಬುದಕ್ಕೆ ದೃಢವಾದ ಪುರಾವೆ ಕೇಳಲಾಗುತ್ತಿದೆ. ಅವರಿಗೆ ಬೇಕಾಗಿರುವುದು ಕೆಲವೇ ನಿಮಿಷಗಳ ವೀಡಿಯೊ ಎಂದು ನಮಗೆ ತಿಳಿದಿದೆ. ಇದು ನನ್ನ ಭಾರತ ಮತ್ತು ಭಾರತೀಯ ಸಮಾಜ. ಅಪರಾಧಿಗಳನ್ನು ರಕ್ಷಿಸಲು ಇಲ್ಲಿ ಮಾರ್ಗಗಳನ್ನು ಹುಡುಕಲಾಗುತ್ತದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ ಚಿನ್ಮಯಿ.

ಇದನ್ನೂ ಓದಿ: ರಾತ್ರೋರಾತ್ರಿ ಡಿಲೀಟ್​ ಆಯ್ತು ಶ್ರುತಿ ಹರಿಹರನ್​ ಮೆಸೇಜ್​ಗಳು; ಎಲ್ಲರಿಗೂ ಎಚ್ಚರಿಕೆ ನೀಡಿದ ನಟಿ

Arjun Sarja: ಶ್ರುತಿ ಹರಿಹರನ್​ ಮೀಟೂ ಪ್ರಕರಣ: ಅರ್ಜುನ್​ ಸರ್ಜಾಗೆ ಜಯ

Published On - 6:11 pm, Sat, 26 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ