ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗ್ರಾಮದಲ್ಲಿ ಯುವಕನೊಬ್ಬ ತನ್ನ ನೆಚ್ಚಿನ ಹಸುವಿನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾನೆ. ಧೃವರಾಜ್ ಎಂಬ ಯುವಕ ತನ್ನ ಪ್ರೀತಿಯ ಹಸುವಾದ ಚಿನ್ಮಯಿಯ ಮೂರನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾನೆ.
ಕೇಕ್ ಕಟ್ ಮಾಡಿ 3ನೇ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿದ ಧೃವರಾಜ್ ಮತ್ತು ಆತನ ಸ್ನೇಹಿತರು ಹಸುವಿನ ಜೊತೆ ಫೋಟೋಗೆ ಪೋಸ್ ಕೊಟ್ಟರು. ಅಷ್ಟೇ ಅಲ್ಲ, ಬಲೂನ್ಗಳಿಂದ ವೇದಿಕೆಯನ್ನ ಸಿಂಗರಿಸಿದ ಧೃವರಾಜ್ ಪಟಾಕಿ ಸಿಡಿಸಿ ಭರ್ಜರಿಯಾಗಿ ಚಿನ್ಮಯಿ ಬರ್ತ್ಡೇಯನ್ನು ಆಚರಿಸಿದ್ದಾನೆ.
ಕೇಕ್ ಕಟ್ ಮಾಡಿ ಹಸುವಿನ 3ನೇ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿದ ಧೃವರಾಜ್
ಕೇಕ್ ಸವಿದ ಬರ್ತ್ಡೇ ಗರ್ಲ್ ಚಿನ್ಮಯಿ!
‘ಜಮೀನಿಗೆ ಗೋವು ಸಾಗಿಸುವ ರೈತರ ವಿರುದ್ಧ ಕ್ರಮವಿಲ್ಲ’ ಇತ್ತ, ಗೋ ಹತ್ಯೆ ಪ್ರತಿಬಂಧಕ ಕಾನೂನು ಪ್ರಶ್ನಿಸಿ ಮೊಹಮ್ಮದ್ ಆರಿಫ್ ಜಮೀಲ್ ಎಂಬುವವರು ಹೈಕೋರ್ಟ್ಗೆ ಸಲ್ಲಿಸಿದ್ದ PIL ವಿಚಾರಣೆ ಇಂದು ನಡೆಯಿತು. ಈ ವೇಳೆ, ಸರ್ಕಾರ ಸದ್ಯದಲ್ಲೇ ನಿಯಮಾವಳಿ ಜಾರಿಗೊಳಿಸಲಿದೆ. ನಿಯಮಾವಳಿ ಜಾರಿಯಾಗುವವರೆಗೂ ಕ್ರಮವಿಲ್ಲ. ಜಾರಿವರೆಗೂ ಸೆಕ್ಷನ್ 5ರಡಿ ಬಲವಂತದ ಕ್ರಮವಿಲ್ಲ. ಜಮೀನಿಗೆ ಗೋವು ಸಾಗಿಸುವ ರೈತರ ವಿರುದ್ಧ ಕ್ರಮವಿಲ್ಲ ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರದ ಹೇಳಿಕೆ ನೀಡಿದೆ.
ಸುಗ್ರೀವಾಜ್ಞೆ ಇದೀಗ ಕಾಯ್ದೆಯಾಗಿರುವ ಹಿನ್ನೆಲೆಯಲ್ಲಿ ಕಾಯ್ದೆ ಪ್ರಶ್ನಿಸಿ ಅರ್ಜಿ ತಿದ್ದುಪಡಿಗೆ ಅರ್ಜಿದಾರರಿಗೆ ಕಾಲಾವಕಾಶ ನೀಡಲಾಗಿದೆ. ಜೊತೆಗೆ, ವಿಚಾರಣೆಯನ್ನು ಹೈಕೋರ್ಟ್ ಏಪ್ರಿಲ್ 5ಕ್ಕೆ ಮುಂದೂಡಿದೆ.
ಇದನ್ನೂ ಓದಿ: ನನ್ನ ಮಕ್ಕಳು, ಮೊಮ್ಮಕ್ಕಳು BJPಯಲ್ಲೇ ಇರಬೇಕೆಂದು ವಿಲ್ನಲ್ಲಿ ಬರೆದಿಟ್ಟು ಬಿಡುತ್ತೇನೆ -ಸಚಿವ ನಾರಾಯಣಗೌಡ