ಬೆಂಗಳೂರು: ನಾಳೆ ನೇರಳೆ ಮಾರ್ಗದ ಟ್ರಿನಿಟಿ ಟೂ ಹಲಸೂರು ಮೆಟ್ರೋ ನಿಲ್ದಾಣದ ನಡುವೆ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಎರಡು ಗಂಟೆಗಳ ಕಾಲ ಮೆಟ್ರೋ ಸಂಚಾರ ಇರೋದಿಲ್ಲ ಎಂದು BMRCL ನಿಂದ ಮಾದ್ಯಮ ಪ್ರಕಟಣೆ ಹೊರಡಿಸಲಾಗಿದೆ.
ಟ್ರಿನಿಟಿ ಟೂ ಹಲಸೂರು ಮೆಟ್ರೋ ನಿಲ್ದಾಣದ ನಡುವೆ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಎಂಜಿ ರೋಡ್ ಮೆಟ್ರೋ ಸ್ಟೇಷನ್ನಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ಈ ಅವದಿಯಲ್ಲಿ ಪ್ರಯಾಣಿಕರಿಗೆ ಎಂಜಿ ರೋಡ್ ಟೂ ಮೈಸೂರು ರೋಡ್ ನಡುವೆ ಮಾತ್ರ ಸಂಚಾರ ಲಭ್ಯವಿರುತ್ತದೆ. ದುರಸ್ತಿ ಕಾರ್ಯ ಮುಗಿದ ನಂತರ ಬೆಳಿಗ್ಗೆ 9 ಗಂಟೆಯಿಂದ ನೇರಳೆ ಮಾರ್ಗದಲ್ಲಿ ಸಂಚಾರ ಆರಂಭವಾಗುತ್ತದೆ. ಆದರೆ ನಾಳೆ ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ.