ಮೊದಲ ದಿನವೇ 10 ಕೋಟಿ ರೂಪಾಯಿ ನಷ್ಟ ಅನುಭವಿಸಿದ ‘ಭೀಮ್ಲಾ ನಾಯಕ್’
ಮಾರ್ಚ್ 25ರಂದು ‘ಆರ್ಆರ್ಆರ್’ ಸಿನಿಮಾ ತೆರೆಗೆ ಬರುತ್ತಿದೆ. ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’ ಮಾರ್ಚ್ 11ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಗಳ ಕಲೆಕ್ಷನ್ಗೂ ದೊಡ್ಡ ಹೊಡೆತ ಬೀಳುವ ಸೂಚನೆ ಸಿಕ್ಕಿದೆ.
ಸಿನಿಮಾ ಟಿಕೆಟ್ ದರ (Ticket Price) ವಿಚಾರದಲ್ಲಿ ಆಂಧ್ರ ಪ್ರದೇಶದಲ್ಲಿ ಹೊಸ ನಿಯಮ ಜಾರಿಗೆ ಬಂದು ಹಲವು ತಿಂಗಳು ಕಳೆದಿದೆ. ಸಿನಿಮಾ ಟಿಕೆಟ್ ದರ ಮಲ್ಟಿಪ್ಲೆಕ್ಸ್ಗಳಲ್ಲಿ 250 ರೂಪಾಯಿ ದಾಟುವಂತಿಲ್ಲ. ಸಿಂಗಲ್ ಸ್ಕ್ರೀನ್ಗಳಲ್ಲೂ ದರಕ್ಕೆ ಕಡಿವಾಣ ಹಾಕಲಾಗಿದೆ. ಇದರಿಂದ ಎಲ್ಲಾ ಸಿನಿಮಾಗಳ ಕಲೆಕ್ಷನ್ಗೆ ದೊಡ್ಡ ಮಟ್ಟದ ಹೊಡೆತ ಕೊಡುತ್ತಿದೆ. ಪವನ್ ಕಲ್ಯಾಣ್ (Pawan Kalyan) ನಟನೆಯ ‘ಭೀಮ್ಲಾ ನಾಯಕ್’ ಸಿನಿಮಾ (Bheemla Nayak Movie) ಕೂಡ ಈಗ ದೊಡ್ಡ ಹೊಡೆತ ಎದುರಿಸಿದೆ. ಟಿಕೆಟ್ ದರದ ನಿಯಮದಿಂದಾಗಿ ಮೊದಲ ದಿನವೇ 10 ಕೋಟಿಗೂ ಅಧಿಕ ನಷ್ಟ ಅನುಭವಿಸಿದೆ.
ಸಿನಿಮಾ ಟಿಕೆಟ್ಗೆ ಸರ್ಕಾರ ದರ ನಿಗದಿ ಮಾಡಿದೆ. ನಗರ ವ್ಯಾಪ್ತಿಯಲ್ಲಿ ಇರುವ ಮಲ್ಟಿಪ್ಲೆಕ್ಸ್ಗಳಿಗೆ ಟಿಕೆಟ್ ಮೊತ್ತ 75 ರೂಪಾಯಿ ಕನಿಷ್ಠ ಹಾಗೂ 250 ಗರಿಷ್ಟ ಮೊತ್ತ ನಿಗದಿ ಮಾಡಿದೆ. ಎಸಿ ಹಾಗೂ ಎಸಿ ರಹಿತ ಚಿತ್ರಮಂದಿರಗಳ ಟಿಕೆಟ್ ದರ 20-100 ರೂ ಅಂತರದಲ್ಲಿ ಇರಬೇಕು. ಪಂಚಾಯತ್ ಭಾಗದಲ್ಲಿ ಟಿಕೆಟ್ ಕನಿಷ್ಠ ದರ 20 ರೂಪಾಯಿಗೂ ಕಡಿಮೆ ಇಡಲು ಸೂಚಿಸಲಾಗಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸೋದು ಅನಿವಾರ್ಯ ಆಗಿದೆ.
‘ಭೀಮ್ಲಾ ನಾಯಕ್’ ಸಿನಿಮಾ ಫೆಬ್ರವರಿ 25ರಂದು ತೆರೆಗೆ ಬಂದಿದೆ. ಈ ಮೊದಲು ತೆರೆಕಂಡಿದ್ದ ಪವನ್ ಕಲ್ಯಾಣ್ ನಟನೆಯ ‘ವಕೀಲ್ ಸಾಬ್’ ಸಿನಿಮಾ ಮೊದಲ ದಿನ ಆಂಧ್ರ ಪ್ರದೇಶದಲ್ಲಿ 23.6 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ‘ಭೀಮ್ಲಾ ನಾಯಕ್’ ಸಿನಿಮಾ ಆಂಧ್ರದಲ್ಲಿ ಮೊದಲ ದಿನ ಬಾಚಿಕೊಂಡಿದ್ದು ಕೇವಲ 14.5 ಕೋಟಿ ರೂಪಾಯಿ. ಸರ್ಕಾರದ ಹೊಸ ನೀತಿಯಿಂದ 10 ಕೋಟಿ ನಷ್ಟ ಆಗಿದೆ ಎನ್ನುವ ಮಾತು ಕೇಳಿ ಬಂದಿದೆ.
ಸಿನಿಮಾ ಹೀರೋಗಳು ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳಲಿ. ಈ ಮೂಲಕ ನಿರ್ಮಾಪಕರಿಗೆ ಸಹಾಯ ಮಾಡಿ ಎಂಬ ಸಲಹೆಯನ್ನು ಆಂಧ್ರ ಪ್ರದೇಶ ಸರ್ಕಾರ ನೀಡಿತ್ತು. ಈ ಸೂಚನೆಗೆ ಎಲ್ಲರಿಂದ ವಿರೋಧ ವ್ಯಕ್ತವಾಗಿತ್ತು. ಸರ್ಕಾರ ಈ ನಿಯಮಗಳನ್ನು ಹಿಂಪಡೆಯಬೇಕು ಎನ್ನುವ ಒತ್ತಾಯ ಜೋರಾಗಿದೆ.
ಮಾರ್ಚ್ 25ರಂದು ‘ಆರ್ಆರ್ಆರ್’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದಿದ್ದಾರೆ. ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’ ಮಾರ್ಚ್ 11ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಗಳ ಕಲೆಕ್ಷನ್ಗೂ ದೊಡ್ಡ ಹೊಡೆತ ಬೀಳುವ ಸೂಚನೆ ಸಿಕ್ಕಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ‘ಭೀಮ್ಲಾ ನಾಯಕ್’ ಚಿತ್ರ ನೋಡಿ ಕುಣಿದು ಕುಪ್ಪಳಿಸಿದ ಪವನ್ ಕಲ್ಯಾಣ್ ಫ್ಯಾನ್ಸ್
ಪವನ್ ಕಲ್ಯಾಣ್ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿದ ಲೇಡಿ ಫ್ಯಾನ್; ‘ಭೀಮ್ಲಾ ನಾಯಕ್’ ಅದ್ದೂರಿ ರಿಲೀಸ್