ಮದುವೆ ಯಾವಾಗ ಎಂದು ಪದೇಪದೇ ಕೇಳಿದ್ದಕ್ಕೆ ಆಲಿಯಾ ಕೊಟ್ಟ ಉತ್ತರ ಏನು?

ಆಲಿಯಾ ಭಟ್​ ಹಾಗೂ ರಣಬೀರ್ ಕಪೂರ್ ಇದೇ ಮೊದಲ ಬಾರಿಗೆ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ. ಈ ಚಿತ್ರ ಸೆಟ್ಟೇರಿ ಹಲವು ವರ್ಷಗಳೇ ಕಳೆದಿವೆ.

ಮದುವೆ ಯಾವಾಗ ಎಂದು ಪದೇಪದೇ ಕೇಳಿದ್ದಕ್ಕೆ ಆಲಿಯಾ ಕೊಟ್ಟ ಉತ್ತರ ಏನು?
ಆಲಿಯಾ ಭಟ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 27, 2022 | 6:00 AM

ನಟಿ ಆಲಿಯಾ ಭಟ್ (Alia Bhatt)​ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ (Gangubai Kathiawadi ) ತೆರೆಗೆ ಬಂದು ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ನಟಿ ಆಲಿಯಾ ಭಟ್​ ನಟನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಆಲಿಯಾ ಅವರು ಸಾಕಷ್ಟು ಸಂದರ್ಶನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ವೇಳೆ ಅವರಿಗೆ ಎದುರಾಗುತ್ತಿರುವ ಪ್ರಶ್ನೆ ಒಂದೇ ಒಂದು. ‘ನಿಮ್ಮ ಮದುವೆ ಯಾವಾಗ?’. ಈ ಪ್ರಶ್ನೆಯನ್ನು ಎದುರುಗೊಂಡು ಆಲಿಯಾ ಕೂಡ ಸುಸ್ತಾಗಿದ್ದಾರೆ. ಅವರು ಈಗ ಈ ಪ್ರಶ್ನೆಗೆ ಉತ್ತರ ನೀಡದೇ ಇರುವ ನಿರ್ಧಾರಕ್ಕೆ ಬಂದಿದ್ದಾರೆ.

ಆಲಿಯಾ ಭಟ್​ ಹಾಗೂ ರಣಬೀರ್ ಕಪೂರ್ ಇದೇ ಮೊದಲ ಬಾರಿಗೆ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ. ಈ ಚಿತ್ರ ಸೆಟ್ಟೇರಿ ಹಲವು ವರ್ಷಗಳೇ ಕಳೆದಿವೆ. ರಣಬೀರ್ ಹಾಗೂ ಆಲಿಯಾ ಪರಸ್ಪರ ಪ್ರೀತಿಸುತ್ತಿದ್ದು, ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇವರ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ಆಲಿಯಾ ‘ಮದುವೆ ಬಗ್ಗೆ ಯಾರೋ ನನ್ನನ್ನು ಕೇಳಿದರು. ‘ಹೇಳಿ ಆಲಿಯಾ ಅವರೇ ಮದುವೆ ಯಾವಾಗ?’ ನಾನು ಹೇಳುವುದಿಲ್ಲ ಎಂದೆ. ನಾನು ವೃತ್ತಿ ಜೀವನದಲ್ಲಿ ಹಾಗೂ ವೈಯಕ್ತಿಕವಾಗಿ ಉತ್ತಮ ಸ್ಥಾನದಲ್ಲಿದ್ದೇನೆ’ ಎಂದಿದ್ದಾರೆ ಆಲಿಯಾ.

ರಣಬೀರ್ ಜತೆಗಿನ ಪ್ರೀತಿ ಹೇಳಿಕೊಂಡಿದ್ದ ಆಲಿಯಾ

ಹಲವು ವರ್ಷಗಳ ಹಿಂದೆಯೇ ಆಲಿಯಾ ಭಟ್​ ಅವರು ರಣಬೀರ್​ ಕಪೂರ್​ಗೆ ಮನಸೋತಿದ್ದರು. ಆಗಿನ್ನೂ ಅವರು ಚಿಕ್ಕ ಬಾಲಕಿ ಆಗಿದ್ದರು. ‘ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ನಾನು ಮಾನಸಿಕವಾಗಿ ಅವರ ಜೊತೆ ಈಗಾಗಲೇ ಮದುವೆ ಆಗಿದ್ದೇನೆ. ಅದನ್ನೂ ಬಿಡಿ, ನಾನು ಮೊಟ್ಟ ಮೊದಲ ಬಾರಿಗೆ ಅವರನ್ನು ತೆರೆಮೇಲೆ ನೋಡಿದಾಗಲೇ ಮದುವೆ ಆದರೆ ಇವರನ್ನೇ ಆಗೋದು ಅಂತ ನಿರ್ಧಾರ ಮಾಡಿದ್ದೆ. ಆಗಿನ್ನೂ ನಾನು ಚಿಕ್ಕ ಹುಡುಗಿ ಆಗಿದ್ದೆ. ಆದರೂ ಆಗ ನಾನು ಆ ನಿರ್ಧಾರ ತೆಗೆದುಕೊಂಡಿದ್ದೆ. ಅದು ಒಂದು ರೀತಿಯ ಮನಸ್ಥಿತಿ’ ಎಂದು ಆಲಿಯಾ ಹೇಳಿದ್ದರು.

ಮದುವೆಗೆ ಇನ್ನೂ ಸಮಯ ಬೇಕಿದೆ:

‘ನನ್ನ ಬದುಕಿನಲ್ಲಿ ನಾನು ಕಂಡು ಅತಿ ಆಕರ್ಷಕ ವ್ಯಕ್ತಿಗಳಲ್ಲಿ ರಣಬೀರ್​ ಕಪೂರ್​ ಕೂಡ ಒಬ್ಬರು. ಅವರ ಮೇಲೆ ನನಗೆ ತುಂಬ ಪ್ರೀತಿ-ಗೌರವ ಇದೆ. ಅವರು ನನಗೆ ಸಖತ್​ ಬೆಂಬಲ ನೀಡುತ್ತಾರೆ. ನನ್ನ ಬಗ್ಗೆ ಮಾತನಾಡಲು ಕೂಡ ಅವರಲ್ಲಿ ಸಾಕಷ್ಟು ವಿಷಯ ಇದೆ ಅಂದುಕೊಂಡಿದ್ದೇನೆ. ಆದರೆ ಅದೆಲ್ಲವೂ ಆಗಬೇಕು ಎಂದರೆ ಸೂಕ್ತ ಸಮಯ ಬರಬೇಕು’ ಎಂದು ಆಲಿಯಾ ಭಟ್​ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಅಲ್ಲದೇ ಶೀಘ್ರದಲ್ಲೇ ಮದುವೆ ಆಗಲ್ಲ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಕಂಗನಾ ಮಾಡಿದ ಟೀಕೆಗೆ ಒಂದೇ ಮಾತಲ್ಲಿ ತಿರುಗೇಟು ನೀಡಿದ ಆಲಿಯಾ; ಶುಕ್ರವಾರವೇ ಭವಿಷ್ಯ ನಿರ್ಧಾರ

‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ನೋಡಿ ಆಲಿಯಾ​ ಅಭಿಮಾನಿಗಳು ಏನಂದ್ರು? ಇಲ್ಲಿದೆ ಜನರ ವಿಮರ್ಶೆ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ