ಬಾಡಿ ಶೇಮಿಂಗ್ ಮಾಡಿದ ಅಭಿಮಾನಿಗೆ ನಟಿ ಕೊಟ್ರು ಖಡಕ್ ಉತ್ತರ
ಮೃಣಾಲ್ ಪೋಸ್ಟ್ ಮಾಡಿರುವ ಫೋಟೋ ನೋಡಿ ಕೆಲವರು ಖುಷಿಪಟ್ಟಿದ್ದಾರೆ. ಆದರೆ, ಕೆಲವರಿಗೆ ಮೃಣಾಲ್ ಅವರು ಫಿಟ್ನೆಸ್ ಕಾಯ್ದುಕೊಳ್ಳುತ್ತಿಲ್ಲ ಎನ್ನುವ ವಿಚಾರ ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಬಾಯಿಗೆ ಬಂದಂತೆ ಕಮೆಂಟ್ ಮಾಡೋಕೆ ಶುರುಹಚ್ಚಿಕೊಂಡಿದ್ದಾರೆ. ‘
ಸೆಲೆಬ್ರಿಟಿ ಆದ ನಂತರ ಅಭಿಮಾನಿಗಳಿಂದ ಬರುವ ಟೀಕೆಗಳನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ಪೋಸ್ಟ್ ಮಾಡಿದ ಫೋಟೋದಲ್ಲಿ ಕೊಂಚ ವ್ಯತ್ಯಾಸ ಕಂಡರೂ ಅಭಿಮಾನಿಗಳು ಟ್ರೋಲ್ (Troll) ಮಾಡುತ್ತಾರೆ. ಫೋಟೋಗೆ ಕೆಟ್ಟದಾಗಿ ಕಮೆಂಟ್ ಹಾಕುತ್ತಾರೆ. ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಮುನ್ನಡೆಯಬೇಕು. ಅನೇಕ ಸೆಲೆಬ್ರಿಟಿಗಳು ಈ ರೀತಿಯ ಟೀಕೆಗಳನ್ನು ಎದುರಿಸುತ್ತಲೇ ಇದ್ದಾರೆ. ಹಿಂದಿಯ ‘ಜೆರ್ಸಿ’ ಸಿನಿಮಾ (Jersey Movie) ನಟಿ ಮೃಣಾಲ್ ಠಾಕೂರ್ (Mrunal Thakur) ಕೂಡ ಬಾಡಿ ಶೇಮಿಂಗ್ ಅನುಭವಿಸಿದ್ದಾರೆ. ಬಾಕ್ಸರ್ ಶಾರ್ಟ್ಸ್ ಹಾಗೂ ಟ್ಯಾಂಕ್ ಟಾಪ್ ಧರಿಸಿ ಫೋಟೋ ಪೋಸ್ಟ್ ಮಾಡಿದ್ದರು. ಇದನ್ನು ನೋಡಿದ ಕೆಲವರು ಕೆಟ್ಟದಾಗಿ ಟೀಕಿಸಿದ್ದಾರೆ. ಇದಕ್ಕೆ ನಟಿ ಸುಮ್ಮನೆ ಕೂತಿಲ್ಲ. ಬದಲಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ.
ಮೃಣಾಲ್ ಪೋಸ್ಟ್ ಮಾಡಿರುವ ಫೋಟೋ ನೋಡಿ ಕೆಲವರು ಖುಷಿಪಟ್ಟಿದ್ದಾರೆ. ಆದರೆ, ಕೆಲವರಿಗೆ ಮೃಣಾಲ್ ಅವರು ಫಿಟ್ನೆಸ್ ಕಾಯ್ದುಕೊಳ್ಳುತ್ತಿಲ್ಲ ಎನ್ನುವ ವಿಚಾರ ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಬಾಯಿಗೆ ಬಂದಂತೆ ಕಮೆಂಟ್ ಮಾಡೋಕೆ ಶುರುಹಚ್ಚಿಕೊಂಡಿದ್ದಾರೆ. ‘ನಿಮ್ಮ ಬ್ಯಾಕ್ ಗಡಿಗೆಯಂತೆ ಆಗಿದೆ’ ಎಂದು ಓರ್ವ ಅಭಿಮಾನಿ ಟೀಕಿಸಿದ್ದ. ಇದಕ್ಕೆ ಕೊಂಕಿನಿಂದ ಉತ್ತರಿಸಿರುವ ನಟಿ ‘ಧನ್ಯವಾದಗಳ ಭಯ್ಯಾ ಜಿ’ ಎಂದು ಉತ್ತರಿಸಿದ್ದಾರೆ.
‘ಸೊಂಟದ ಭಾಗದಲ್ಲಿ ಫ್ಯಾಟ್ ಕೂತಿದೆ. ಅದನ್ನು ಕರಗಿಸೋಕೆ ಕಸರತ್ತು ನಡೆಸಿ’ ಎಂದು ಅಭಿಮಾನಿಯೋರ್ವ ಟೀಕಿಸಿದ್ದ. ಇದಕ್ಕೆ ಉತ್ತರಿಸಿರುವ ಮೃಣಾಲ್, ‘ಕೆಲವರು ನೈಸರ್ಗಿಕವಾಗಿಯೇ ತೆಳ್ಳನೆಯ ದೇಹ ಹೊಂದಿರುತ್ತಾರೆ. ಇನ್ನೂ ಕೆಲವರು ಶ್ರಮ ಹಾಕಿ ದೇಹ ಕರಗಿಸಬೇಕಾಗುತ್ತದೆ. ನೀವು ನಿಮ್ಮ ಬಾಡಿಯನ್ನು ತೋರಿಸಿ’ ಎಂದು ಬರೆದುಕೊಂಡಿದ್ದಾರೆ ಮೃಣಾಲ್.
ಮೃಣಾಲ್ ಅವರು ‘ಜೆರ್ಸಿ’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ. ಶಾಹಿದ್ ಕಪೂರ್ ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ತೆಲುಗಿನಲ್ಲಿ ನಾನಿ ಹಾಗೂ ಶ್ರದ್ಧಾ ಶ್ರೀನಾಥ್ ನಟನೆಯ ‘ಜೆರ್ಸಿ’ ಸಿನಿಮಾ ಹಿಟ್ ಆಗಿತ್ತು. ಈ ಚಿತ್ರವನ್ನು ಅದೇ ಹೆಸರಿನಲ್ಲಿ ರಿಮೇಕ್ ಮಾಡಲಾಗಿದೆ. ‘ಕೆಜಿಎಫ್ 2’ ಎದುರು ‘ಜೆರ್ಸಿ’ ಚಿತ್ರ ತೆರೆಗೆ ಬರುತ್ತಿದೆ. ‘ಲೆಫ್ಟಿನೆಂಟ್ ರಾಮ್’ ಸಿನಿಮಾದಲ್ಲಿ ಸೀತಾ ಪಾತ್ರ ಮಾಡುತ್ತಿದ್ದಾರೆ ಮೃಣಾಲ್. ಇದು ಅವರ ಮೊದಲ ತೆಲುಗು ಸಿನಿಮಾ. ಹಲವು ಹಿಂದಿ ಚಿತ್ರಗಳಲ್ಲಿ ಮೃಣಾಲ್ ಕಾಣಿಸಿಕೊಂಡಿದ್ದಾರೆ. ಮರಾಠಿ ಚಿತ್ರರಂಗದ ಮೂಲಕ ಅವರು ಬಣ್ಣದ ಬದುಕು ಆರಂಭಿಸಿದ್ದರು.
ಇದನ್ನೂ ಓದಿ: Samantha: ಕೀಳು ಭಾಷೆಯಲ್ಲಿ ಸಮಂತಾಗೆ ಪ್ರಶ್ನಿಸಿದ ಅಭಿಮಾನಿ; ನಟಿಯ ಉತ್ತರ ಏನಿತ್ತು?
ಅಂಗಡಿ ಉದ್ಘಾಟನೆ ಮಾಡೋಕೆ ಬಂದ್ರೆ ನಟಿ ಸಮಂತಾ ಪಡೆಯುವ ಸಂಭಾವನೆ ಎಷ್ಟು?