ಶ್ರೀದೇವಿ 2ನೇ ಮಗಳು ಚಿತ್ರರಂಗಕ್ಕೆ ಎಂಟ್ರಿ; ಖುಷಿ ಸಿನಿಮಾ ಬಗ್ಗೆ ಮಾಹಿತಿ ನೀಡಿದ ತಂದೆ ಬೋನಿ ಕಪೂರ್​

ಅಗಸ್ತ್ಯ ನಂದಾ, ಸುಹಾನಾ ಖಾನ್​ ಮತ್ತು ಖುಷಿ ಕಪೂರ್​ ಜೊತೆಯಾಗಿ ನಟಿಸುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ನಿರ್ದೇಶಕಿ ಜೋಯಾ ಅಖ್ತರ್​ ಅವರ ಗರಡಿಯಲ್ಲಿ ಈ ಸ್ಟಾರ್​ ಕಿಡ್​ಗಳು ಪಳಗಲಿದ್ದಾರೆ ಎಂಬ ಸೂಚನೆ ಸಿಕ್ಕಿದೆ.

ಶ್ರೀದೇವಿ 2ನೇ ಮಗಳು ಚಿತ್ರರಂಗಕ್ಕೆ ಎಂಟ್ರಿ; ಖುಷಿ ಸಿನಿಮಾ ಬಗ್ಗೆ ಮಾಹಿತಿ ನೀಡಿದ ತಂದೆ ಬೋನಿ ಕಪೂರ್​
ಬೋನಿ ಕಪೂರ್, ಖುಷಿ ಕಪೂರ್
Follow us
TV9 Web
| Updated By: ಮದನ್​ ಕುಮಾರ್​

Updated on: Feb 26, 2022 | 9:00 AM

ಚಿತ್ರರಂಗದಲ್ಲಿ ನಟಿ ಶ್ರೀದೇವಿ (Sridevi) ಮಾಡಿದ ಸಾಧನೆಗೆ ಸರಿಸಾಟಿ ಇಲ್ಲ. ಹಲವು ದಶಕಗಳ ಕಾಲ ಸ್ಟಾರ್​ ನಟಿಯಾಗಿ ಮೆರೆದ ಅವರನ್ನು ಚಿತ್ರರಂಗ ಸದಾ ಮಿಸ್​ ಮಾಡಿಕೊಳ್ಳುತ್ತದೆ. ಈಗ ಶ್ರೀದೇವಿಯ ಪುತ್ರಿ ಜಾನ್ವಿ ಕಪೂರ್​ ಅವರು ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಎರಡನೇ ಮಗಳು ಖುಷಿ ಕಪೂರ್​ (Kushi Kapoor) ಕೂಡ ಚಿತ್ರರಂಗಕ್ಕೆ ಎಂಟ್ರಿ ನೀಡಲು ಕಾಯುತ್ತಿದ್ದಾರೆ. ಸ್ಟಾರ್​ ನಟ-ನಟಿಯರ ಮಕ್ಕಳ ಸಿನಿಮಾ ಎಂಟ್ರಿ ಬಗ್ಗೆ ಗಾಸಿಪ್​ಗಳು ಹರಡುವುದು ಸಹಜ. ಆದರೆ ಖುಷಿ ಕಪೂರ್​ ವಿಚಾರದಲ್ಲಿ ಕೇಳಿಬಂದಿರುವುದು ಗಾಸಿಪ್​ ಅಲ್ಲ. ಅವರ ತಂದೆ ಬೋನಿ ಕಪೂರ್​ (Boney Kapoor) ಅವರೇ ಖಚಿತ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಇನ್ನೊಂದು ಬಿಸಿಬಿಸಿ ಸುದ್ದಿ ಕೂಡ ಕೇಳಿಬಂದಿದೆ. ಖುಷಿ ಕಪೂರ್​ ಅಭಿನಯಿಸಲಿರುವ ಸಿನಿಮಾದಲ್ಲಿ ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ ಹಾಗೂ ಅಮಿತಾಭ್​ ಬಚ್ಚನ್​ ಮೊಮ್ಮಗ ಅಗಸ್ತ್ಯ ನಂದಾ ಕೂಡ ನಟಿಸುತ್ತಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕಿ ಜೋಯಾ ಅಖ್ತರ್​ ಅವರು ಆ್ಯಕ್ಷನ್​-ಕಟ್​ ಹೇಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶಾರುಖ್​ ಖಾನ್​ ಅಥವಾ ಅಮಿತಾಭ್​ ಬಚ್ಚನ್​ ಕಡೆಯಿಂದ ಪ್ರತಿಕ್ರಿಯೆ ಇನ್ನೂ ಸಿಕ್ಕಿಲ್ಲ.

‘ಜಿಂದಗಿ ನಾ ಮಿಲೇಗಿ ದೋಬಾರ’, ‘ಗಲ್ಲಿ ಬಾಯ್​’ ಮುಂತಾದ ಸೂಪರ್​ ಹಿಟ್​ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಜೋಯಾ ಅಖ್ತರ್​ ಅವರ ಗರಡಿಯಲ್ಲಿ ಸ್ಟಾರ್​ ಕಿಡ್​ಗಳು ಪಳಗಲಿದ್ದಾರೆ ಎಂಬ ಸೂಚನೆ ಸಿಕ್ಕಿದೆ. ಜೋಯಾ ಅಖ್ತರ್ ಅವರ ಕಚೇರಿಯಲ್ಲಿ ಅಗಸ್ತಾ ನಂದಾ ಮತ್ತು ಸುಹಾನಾ ಖಾನ್​ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಹಾಗಾಗಿ ಅವರು ಜೊತೆಯಾಗಿ ಸಿನಿಮಾ ಮಾಡಬಹುದು ಎಂಬ ಅನುಮಾನ ಹುಟ್ಟಿಕೊಂಡಿದೆ.

ಅಗಸ್ತ್ಯ ನಂದಾ ಮತ್ತು ಸುಹಾನಾ ಖಾನ್ ಕುರಿತು ಯಾವುದೇ ಖಚಿತತೆ ಇಲ್ಲ. ಆದರೆ ಖುಷಿ ಕಪೂರ್​ ನಟಿಸುವುದು ಪಕ್ಕಾ ಎಂದು ಬೋನಿ ಕಪೂರ್​ ಹೇಳಿದ್ದಾರೆ. ಏಪ್ರಿಲ್​ನಿಂದ ಅವರು ಶೂಟಿಂಗ್​ನಲ್ಲಿ ಭಾಗಿ ಆಗಲಿದ್ದಾರೆ. ಈ ಚಿತ್ರ ನೇರವಾಗಿ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್​ ಆಗಲಿದೆ ಎಂದು ಕೂಡ ಹೇಳಲಾಗುತ್ತಿದೆ.

ಬಾಲಿವುಡ್​ನಲ್ಲಿ ಯಶಸ್ವಿ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಬೋನಿ ಕಪೂರ್ ಅವರು ಮಕ್ಕಳ ಸಿನಿಮಾಗೆ ಬೆಂಬಲವಾಗಿ ನಿಂತಿದ್ದಾರೆ. ಹಿರಿಯ ಮಗ ಅರ್ಜುನ್ ಕಪೂರ್​, ಪುತ್ರಿ ಜಾನ್ವಿ ಕಪೂರ್​ ಈಗಾಗಲೇ ಸ್ಟಾರ್​ ಆಗಿದ್ದಾರೆ. ಈಗ ಕಿರಿಯ ಪುತ್ರಿಗಾಗಿ ಅವರು ಯೋಚನೆ ಹಾಕಿಕೊಡುತ್ತಿದ್ದಾರೆ. ‘ನಿರ್ಮಾಪಕನಾಗಿ ನಾನು ನನ್ನ ಅನುಭವಗಳ ಆಧಾರದಲ್ಲಿ ಅವರಿಗೆ ಸಲಹೆ ನೀಡುತ್ತೇನೆ. ಕಮರ್ಷಿಯಲ್​ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಆದರೆ ಅಂತಿಮ ನಿರ್ಧಾರ ಅವರದ್ದೇ ಆಗಿರಲಿದೆ’ ಎಂದು ಮಕ್ಕಳ ಸಿನಿಮಾ ಜರ್ನಿ ಬಗ್ಗೆ ಬೋನಿ ಕಪೂರ್​ ಮಾತನಾಡಿದ್ದಾರೆ.

ಇನ್ನು, ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​ ಅವರಿಗೆ ನಟನೆಯಲ್ಲಿ ಆಸಕ್ತಿ ಇದೆ. ಅಮೆರಿಕಾ ಮತ್ತು ಇಂಗ್ಲೆಂಡ್​ನಲ್ಲಿ ಅವರು ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಬಂದಿದ್ದಾರೆ. ಕೆಲವು ಕಿರುಚಿತ್ರಗಳಲ್ಲಿ ನಟಿಸುವ ಮೂಲಕ ಅವರು ಅಭಿನಯದ ಪಾಠಗಳನ್ನು ಕಲಿತಿದ್ದಾರೆ. ಪ್ರತಿಷ್ಠಿತ ಮ್ಯಾಗಜಿನ್​ ಮುಖಪುಟಗಳಿಗೆ ಪೋಸ್​ ನೀಡುವ ಮೂಲಕವೂ ಅವರು ಗಮನ ಸೆಳೆದಿದ್ದಾರೆ. ಪುತ್ರಿಯ ನಟನಾ ಭವಿಷ್ಯಕ್ಕೆ ತಾಯಿ ಗೌರಿ ಖಾನ್​ ಅವರು ಸೂಕ್ತವಾಗಿ ಪ್ಲ್ಯಾನ್​ ಮಾಡುತ್ತಿದ್ದಾರೆ.

ಇದನ್ನೂ ಓದಿ:

ನಿರ್ಮಾಪಕನ ಕಾರಿಗೆ ಮೊಸರಿನ ಅಭಿಷೇಕ; ಅಜಿತ್ ಫ್ಯಾನ್ಸ್​ ಮೇಲೆ ಪೆಟ್ರೋಲ್​ ಬಾಂಬ್​​ ಎಸೆತ

ಆರ್ಯನ್​ ಖಾನ್​ ಕೇಸ್​ ಮರೆತು ಸಾರ್ವಜನಿಕವಾಗಿ ಕಾಣಿಸಿಕೊಂಡ ಶಾರುಖ್ ಪತ್ನಿ ಗೌರಿ ಖಾನ್​, ಪುತ್ರಿ ಸುಹಾನಾ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ