ಸ್ಟಾರ್ ನಟನ ಸಿನಿಮಾದಲ್ಲಿ ವಿಜಯ್ ಸೇತುಪತಿ ಮಗ?; ಗುಟ್ಟು ಮಾಡಿದ ನಿರ್ದೇಶಕ
ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ವಿಜಯ್ಗೆ ಜತೆಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ನೆಲ್ಸನ್ ದಿಲೀಪ್ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ದೊಡ್ಡ ಮಟ್ಟದ ನಿರೀಕ್ಷೆ ಇದೆ.
ಸ್ಟಾರ್ ನಟರ ಮಕ್ಕಳು ಚಿತ್ರರಂಗಕ್ಕೆ ಕಾಲಿಡುತ್ತಾರೆ ಎಂದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಸಿನಿಮಾ ಹೇಗಿರುತ್ತದೆ? ಸಿನಿಮಾದಲ್ಲಿ ಅವರ ಪಾತ್ರ ಹೇಗಿರುತ್ತದೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಇರುತ್ತದೆ. ಈಗ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ (Vijay Sethupathi ) ಅವರ ಮಗ ಸೂರ್ಯ ಸೇತುಪತಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ತಮಿಳಿನ ಸ್ಟಾರ್ ನಟ ‘ದಳಪತಿ’ ವಿಜಯ್ (Thalapathy Vijay) ಅಭಿನಯದ ‘ಬೀಸ್ಟ್’ ಸಿನಿಮಾದಲ್ಲಿ (Beast Movie) ಸೂರ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರದಲ್ಲಿ ನಿರ್ದೇಶಕರು ಗುಟ್ಟು ಮಾಡಿದ್ದಾರೆ. ಚಿತ್ರರಂಗಕ್ಕೆ ಸೂರ್ಯ ಎಂಟ್ರಿ ಸುದ್ದಿ ಕೇಳಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.
ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ವಿಜಯ್ಗೆ ಜತೆಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ನೆಲ್ಸನ್ ದಿಲೀಪ್ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈಗಾಗಲೇ ಹಾಡುಗಳ ಮೂಲಕ ಸಿನಿಮಾ ಸದ್ದು ಮಾಡುತ್ತಿದೆ. ಈ ಚಿತ್ರದ ಮೂಲಕ ಸೂರ್ಯ ಸೇತುಪತಿ ಚಿತ್ರರಂಗಕ್ಕೆ ಎಂಟ್ರಿ ಆದರೆ, ಅವರ ವೃತ್ತಿಜೀವನಕ್ಕೆ ಮೈಲೇಜ್ ಸಿಗಲಿದೆ. ಈ ಮೊದಲು ಸೂರ್ಯ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಆದರೆ, ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು.
ವಿಜಯ್ ಸೇತುಪತಿ ಮಗಳು ಶ್ರೀಜಾ ಸೇತುಪತಿ ಕಳೆದ ವರ್ಷ ‘ಮುಘಿಜ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ರೆಜಿನಾ ಹಾಗೂ ಶ್ರೀಜಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಚಿತ್ರರಂಗಕ್ಕೆ ಎಂಟ್ರಿ ನೀಡಿದ ಬೆನ್ನಲ್ಲೇ ಈಗ ಅವರ ಸಹೋದರ ಸೂರ್ಯ ಎಂಟ್ರಿ ಆಗೋಕೆ ಕ್ಷಣಗಣನೆ ಆರಂಭವಾಗಿದೆ.
ಸೂರ್ಯ ಅವರು ‘ದಳಪತಿ’ ವಿಜಯ್ ಅಭಿನಯದ ‘ಬೀಸ್ಟ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರ ತುಂಬಾನೇ ವಿಶೇಷವಾಗಿರಲಿದೆ ಎಂದು ವರದಿ ಆಗಿದೆ. ಈಗಲೇ ಈ ಪಾತ್ರದ ಬಗ್ಗೆ ಹೇಳಿದರೆ ಸಸ್ಪೆನ್ಸ್ ಇರುವುದಿಲ್ಲ ಎಂಬುದು ನಿರ್ದೇಶಕರ ಆಲೋಚನೆ. ಈ ಕಾರಣಕ್ಕೆ ಅವರು ಈ ವಿಚಾರದಲ್ಲಿ ಗುಟ್ಟು ಮಾಡುತ್ತಿದ್ದಾರೆ ಎನ್ನುತ್ತಿವೆ ಮೂಲಗಳು.
ವಿಜಯ್ ಸೇತುಪತಿ ಅವರು ಕಾಲಿವುಡ್ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಭಿನ್ನ ಪಾತ್ರ ಹಾಗೂ ಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಅವರು ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಈಗ ಅವರ ಮಗ ಸೂರ್ಯ ಕೂಡ ಚಿತ್ರರಂಗಕ್ಕೆ ಬರುತ್ತಿರುವುದು ವಿಜಯ್ ಸೇತುಪತಿ ಅಭಿಮಾನಿಗಳ ಪಾಲಿಗೆ ಖುಷಿಯ ವಿಚಾರ.
‘ದಳಪತಿ’ ವಿಜಯ್ ಹಾಗೂ ವಿಜಯ್ ಸೇತುಪತಿ ನಡುವೆ ಒಳ್ಳೆಯ ಬಾಂಧವ್ಯ ಇದೆ. ಕಳೆದ ವರ್ಷ ತೆರೆಗೆ ಬಂದ ‘ಮಾಸ್ಟರ್’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದರು. ಈಗ ‘ದಳಪತಿ’ ಜತೆ ಸೇತುಪತಿ ಮಗ ಅಭಿನಯಿಸುತ್ತಿದ್ದಾರೆ. ‘ಬೀಸ್ಟ್’ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಪುನೀತ್ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ ತಮಿಳು ನಟ ‘ದಳಪತಿ’ ವಿಜಯ್
ವಿಜಯ್ ಸೇತುಪತಿಯವರನ್ನು ಒದ್ದರೆ ಪ್ರತಿ ಒದೆಗೆ ರೂ. 1,001 ನೀಡುವುದಾಗಿ ಘೋಷಿಸಿದ ಹಿಂದೂ ಮಕ್ಕಳ್ ಕಾಚಿ ಸಂಘಟನೆ