ವಿಜಯ್ ಸೇತುಪತಿಯವರನ್ನು ಒದ್ದರೆ ಪ್ರತಿ ಒದೆಗೆ ರೂ. 1,001 ನೀಡುವುದಾಗಿ ಘೋಷಿಸಿದ ಹಿಂದೂ ಮಕ್ಕಳ್ ಕಾಚಿ ಸಂಘಟನೆ

ವಿಜಯ್ ಸೇತುಪತಿ ಬಹಿರಂಗವಾಗಿ ಕ್ಷಮೆ ಕೇಳುವವರೆಗೆ ಒದೆಯುವ ಅಭಿಯಾನ ಮುಂದುವರಿಯಲಿದೆ ಎಂದು ಅರ್ಜುನ್ ಹೇಳಿದ್ದಾರೆ.

ಜನಪ್ರಿಯ ನಟ ವಿಜಯ ಸೇತುಪತಿ ವಿರುದ್ಧ ತಮಿಳುನಾಡಿನ ಒಂದು ಸಂಘಟನೆ ಹಗೆ ಕಾರುತ್ತಿದೆ. ನಿಮಗೆ ಗೊತ್ತಿದೆ, ಕಳೆದ ಶನಿವಾರ ಅವರು ಪುನೀತ್ ರಾಜ್ಕುಮಾರ್ ಅವರ ಅಂತಿಮ ದರ್ಶನ ಪಡೆಯಲು ಬೆಂಗಳೂರಿಗೆ ಆಗಮಿಸಿದ್ದಾಗ ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿ ಅವರ ಮೇಲೆ ನಡೆಸಿದ್ದ. ಹಿಂದಿನಿಂದ ಬಂದು ಅವರನ್ನು ಒದ್ದಿದ್ದ. ಈ ಘಟನೆಯನ್ನು ವಿಜಯ್ ಅವರು ಅಂಥದ್ದೇನಿಲ್ಲ, ಚಿಕ್ಕ ಜಗಳ ಅಂತ ಹೇಳಿ ಸುಮ್ಮನಾಗಿದ್ದರು. ಆದರೆ, ಅದೊಂದು ದೊಡ್ಡ ಘಟನೆ ಅನ್ನುವ ಸಂಗತಿ ಬೆಳಕಿಗೆ ಬಂದಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಹಿಂದೂ ಮಕ್ಕಳ್ ಕಾಚಿ ಎಂಬ ಸಂಘಟನೆ ಯು ವಿಜಯ ಅವರು ಕಾಣಿಸಿದ ಸ್ಥಳಗಳೆಲ್ಲೆಲ್ಲ ಒದೆಯುವಂತೆ ಕರೆ ನೀಡಿದ್ದು ಅದರ ಅಧ್ಯಕ್ಷ ಅರ್ಜುನ್ ಸಂಪತ್ ಎನ್ನುವವರು ವಿಜಯ್ ಅವರನ್ನು ಒದ್ದಾಗಲೆಲ್ಲ ಅಂದರೆ ಪ್ರತಿ ಒದೆಗೆ ರೂ. 1,001 ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಹಿಂದೂ ಮಕ್ಕಳ್ ಕಾಚಿ ಸಂಘಟನೆಯ ಅಧಿಕೃತ ಟ್ವಿಟರ್ ಹ್ಯಾಂಡಲ್​ನಲ್ಲಿ ವಿಜಯ್ ಅವರನ್ನು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಒದೆಯುತ್ತಿರುವ ವಿಡಿಯೋದ ಸ್ಕ್ರೀನ್ ಶಾಟ್ ಅನ್ನು ಪೋಸ್ಟ್ ಮಾಡಿ ವಿಜಯ ಸೇತುಪತಿ ಅವರು ಸ್ವಾತಂತ್ರ್ಯ ಹೋರಾಟಗಾರ ದೇವತಿರು ಪಸುಂಪನ್ ಮುತುರಾಮಾಲಿಂಗ ದೇವರ್ ಅಯ್ಯ ಮತ್ತು ದೇಶವನ್ನು ಅಪಮಾನಿಸಿದ್ದಾರೆ ಎಂದು ಹೇಳಿದೆ.

‘ವಿಜಯ ಸೇತುಪತಿ ಅವರು ದೇವರ್ ಅಯ್ಯರ್ ಅವರನ್ನು ಅವಮಾನಿಸಿರುವುದರಿಂದ ಅವರನ್ನು ಯಾರೇ ಕಾಲಿನಿಂದ ಒದ್ದರೂ ಅವರಿಗೆ ರೂ. 1,001 ನೀಡುವ ಘೋಷಣೆಯನ್ನು ಅರ್ಜುನ್ ಸಂಪತ್ ಮಾಡಿದ್ದಾರೆ,’ ಎಂದು ಟ್ವೀಟ್​ನಲ್ಲಿ ಹೇಳಲಾಗಿದೆ. ಹಿಂದೂ ಮಕ್ಕಳ್ ಕಾಚಿ ಸಂಘಟನೆಯನ್ನು ಅರ್ಜುನ್ ಸಂಪತ್ ಅವರೇ ನಡೆಸುತ್ತಾರೆ.

ವಿಜಯ್ ಸೇತುಪತಿ ಬಹಿರಂಗವಾಗಿ ಕ್ಷಮೆ ಕೇಳುವವರೆಗೆ ಒದೆಯುವ ಅಭಿಯಾನ ಮುಂದುವರಿಯಲಿದೆ ಎಂದು ಅರ್ಜುನ್ ಹೇಳಿದ್ದಾರೆ.

ಇದನ್ನೂ  ಓದಿ:  ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮಿಳು ನಟ ವಿಜಯ್​ ಸೇತುಪತಿ ಮೇಲೆ ಹಲ್ಲೆಗೆ ಯತ್ನ, ವಿಡಿಯೋ ವೈರಲ್

Click on your DTH Provider to Add TV9 Kannada