AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರೋರಾತ್ರಿ ಡಿಲೀಟ್​ ಆಯ್ತು ಶ್ರುತಿ ಹರಿಹರನ್​ ಮೆಸೇಜ್​ಗಳು; ಎಲ್ಲರಿಗೂ ಎಚ್ಚರಿಕೆ ನೀಡಿದ ನಟಿ

Sruthi Hariharan Instagram: ಶ್ರುತಿ ಹರಿಹರನ್​ ಖಾತೆಯಿಂದ ನಟಿ ರಮ್ಯಾ ಅವರಿಗೂ ಒಂದು ಮೆಸೇಜ್​ ಕಳಿಸಲಾಗಿತ್ತು. ಆದರೆ ಅದರ ಮೇಲೆ ರಮ್ಯಾ ಕ್ಲಿಕ್​ ಮಾಡಿಲ್ಲ.

ರಾತ್ರೋರಾತ್ರಿ ಡಿಲೀಟ್​ ಆಯ್ತು ಶ್ರುತಿ ಹರಿಹರನ್​ ಮೆಸೇಜ್​ಗಳು; ಎಲ್ಲರಿಗೂ ಎಚ್ಚರಿಕೆ ನೀಡಿದ ನಟಿ
ಶ್ರುತಿ ಹರಿಹರನ್
TV9 Web
| Edited By: |

Updated on: Feb 20, 2022 | 9:03 AM

Share

ನಟಿ ಶ್ರುತಿ ಹರಿಹರನ್​ (Sruthi Hariharan) ಅವರು ಬಹುಭಾಷೆಯಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅಕ್ಕ-ಪಕ್ಕದ ರಾಜ್ಯಗಳ ಚಿತ್ರರಂಗದ ಸೆಲೆಬ್ರಿಟಿಗಳ ಜೊತೆ ಅವರಿಗೆ ಸ್ನೇಹ ಇದೆ. ಕೆಲವು ವಿವಾದಗಳಿಂದಲೂ ಅವರು ಸುದ್ದಿ ಆಗಿದ್ದುಂಟು. ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಫಿಲ್ಮ್​ಫೇರ್​ ಪ್ರಶಸ್ತಿಗಳನ್ನು ಪಡೆದುಕೊಂಡು ಅವರು ತಮ್ಮ ಪ್ರತಿಭೆ ಏನೆಂಬುದನ್ನು ಸಾಬೀತು ಮಾಡಿದ್ದಾರೆ. ಈಗಲೂ ಅವರ ಕೈಯಲ್ಲಿ ಅನೇಕ ಚಿತ್ರಗಳಿವೆ. ಈ ನಡುವೆ ಅವರ ಕೆಲವು ಮೆಸೇಜ್​ಗಳು ಡಿಲೀಟ್​ ಆಗಿವೆ. ಸ್ನೇಹಿತರಿಗೆ ಮಾಡಿದ್ದ ಸಂದೇಶಗಳೆಲ್ಲವೂ ರಾತ್ರೋ ರಾತ್ರಿ ಮಾಯ ಆಗಿವೆ. ಅದಕ್ಕೆ ಕಾರಣ ಹ್ಯಾಕರ್ಸ್​! ಹೌದು, ಹ್ಯಾಕಿಂಗ್ (Hacking) ಕಾಟದಿಂದ ಶ್ರುತಿ ಹರಿಹರನ್​ ಅವರು ಕಿರಿಕಿರಿ ಅನುಭವಿಸಿದ್ದಾರೆ. ಅವರ ಸೋಶಿಯಲ್​ ಮೀಡಿಯಾ ಖಾತೆಗಳ ಮೇಲೆ ಸೈಬರ್​ ಕ್ರೈಂ (Cyber Crime) ಕಿಡಿಕೇಡಿಗಳು ಕಣ್ಣು ಹಾಕಿದ್ದಾರೆ. ಅಲ್ಲದೇ, ಶ್ರುತಿ ಹರಿಹರನ್​ ಅವರ ಖಾತೆಯನ್ನು ಬಳಸಿಕೊಂಡು ಇತರೆ ಸೆಲೆಬ್ರಿಟಿಗಳ ಅಕೌಂಟ್​ಗಳನ್ನು ಹ್ಯಾಕ್​ ಮಾಡಲು ಕೂಡ ಪ್ರಯತ್ನಿಸಲಾಗಿದೆ. ಅದೆಲ್ಲ ಹೇಗೆ ನಡೆಯಿತು ಎಂಬುದನ್ನು ಶ್ರುತಿ ಹರಿಹರನ್​ ಅವರು ವಿವರಿಸಿದ್ದಾರೆ. ಇತರೆ ಸೆಲೆಬ್ರಿಟಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಅವರು ಸಂದೇಶ ರವಾನಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಶ್ರುತಿ ಹರಿಹರನ್​ ಅವರು ಆ್ಯಕ್ಟೀವ್​ ಆಗಿರುತ್ತಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 4.8 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಅವರ ಇನ್​ಸ್ಟಾಗ್ರಾಮ್​ ಖಾತೆಯನ್ನು ಕೆಲವು ಕಿಡಿಗೇಡಿಗಳು ಹ್ಯಾಕ್​ ಮಾಡಿದ್ದಾರೆ. ಅಲ್ಲದೇ, ಅವರ ಖಾತೆಯಿಂದ ಇನ್ನೂ ಕೆಲವು ಸೆಲೆಬ್ರಿಟಿಗಳಿಗೆ ಮೆಸೇಜ್​ ಕಳಿಸಿ ಎಲ್ಲ ಖಾತೆಯನ್ನು ಹ್ಯಾಕ್​ ಮಾಡುವ ಪ್ರಯತ್ನ ನಡೆಸಲಾಗಿದೆ. ಹ್ಯಾಕರ್​ಗಳು ಕಳಿಸುವ ಮೆಸೇಜ್​ ಮೇಲೆ ಕ್ಲಿಕ್​ ಮಾಡಿದರೆ ಇನ್​ಸ್ಟಾಗ್ರಾಮ್​ ಖಾತೆ ಕ್ಷಣಾರ್ಧದಲ್ಲಿ ಹ್ಯಾಕ್​ ಆಗಿ ಬಿಡುತ್ತದೆ. ಶ್ರುತಿ ಹರಿಹರನ್​ ಖಾತೆಯಿಂದ ನಟಿ ರಮ್ಯಾ ಅವರಿಗೂ ಇಂಥ ಒಂದು ಮೆಸೇಜ್​ ಕಳಿಸಲಾಗಿತ್ತು. ಆದರೆ ಅದರ ಮೇಲೆ ರಮ್ಯಾ ಕ್ಲಿಕ್​ ಮಾಡಿಲ್ಲ. ಹಾಗಾಗಿ ಅವರು ಜಸ್ಟ್​ ಮಿಸ್​ ಆಗಿದ್ದಾರೆ.

ಹ್ಯಾಕರ್​ಗಳು ಮುಂಬೈನಲ್ಲಿ ಕುಳಿತು ಸೈಬರ್​ ಕ್ರೈಂ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಸದ್ಯಕ್ಕೆ ಶ್ರುತಿ ಹರಿಹರನ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯ ನಿಯಂತ್ರಣವನ್ನು ಮರಳಿ ಪಡೆದಿದ್ದಾರೆ. ಪಾಸ್​ವರ್ಡ್​ ಬದಲಾಯಿಸಿಕೊಂಡು ಸೇಫ್​ ಆಗಿದ್ದಾರೆ. ಆದರೆ ಈ ಹಿಂದೆ ಸೆಲೆಬ್ರಿಟಿ ಸ್ನೇಹಿತರಿಗೆ ಅವರು ಮಾಡಿದ್ದ ಮೆಸೇಜ್​ಗಳೆಲ್ಲವೂ ಡಿಲೀಟ್​ ಆಗಿವೆ. ಇದು ಅವರಿಗೆ ಬೇಸರ ತರಿಸಿದೆ.

ತಮ್ಮ ಖಾತೆಯಿಂದ ಇಂಥ ಮೆಸೇಜ್​ ಲಿಂಕ್​ಗಳು ಬಂದರೆ ದಯವಿಟ್ಟು ಕ್ಲಿಕ್​ ಮಾಡಬೇಡಿ ಎಂದು ಶ್ರುತಿ ಹರಿಹರನ್​ ಅವರು ಅವರು ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ. ಸೆಲೆಬ್ರಿಟಿಗಳ ವೇರಿಫೈಯ್ಡ್​ ಖಾತೆಗಳನ್ನೇ ಗುರಿಯಾಗಿಸಿಕೊಂಡು ಹ್ಯಾಕರ್​ಗಳು ಈ ಕೆಲಸ ಮಾಡುತ್ತಿದ್ದಾರೆ. ಕೆಲವೇ ತಿಂಗಳ ಹಿಂದೆ ಕನ್ನಡ ಚಿತ್ರರಂಗದ ಅನೇಕ ನಟಿಯರ ಖಾತೆಗಳ ಮೇಲೆ ಸೈಬರ್​ ಖದೀಮರು ಕಣ್ಣು ಹಾಕಿದ್ದು ಸುದ್ದಿ ಆಗಿತ್ತು.

ಶ್ರುತಿ ಹರಿಹರನ್​ ಹೊಸ ಸಿನಿಮಾ ‘ಸ್ಟ್ರಾಬೆರಿ’:

‘ಸ್ಟ್ರಾಬೆರಿ’ ಚಿತ್ರಕ್ಕೆ ಸದ್ದಿಲ್ಲದೇ ಚಿತ್ರೀಕರಣ ಮಾಡಲಾಗಿದೆ. ಈಗಾಗಲೇ ಶೂಟಿಂಗ್​ ಮುಕ್ತಾಯವಾಗಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಕೊನೇ ಹಂತದಲ್ಲಿವೆ. ಶ್ರುತಿ ಹರಿಹರನ್​ ಅವರು ಈ ಸಿನಿಮಾದಲ್ಲಿ ಲೈಂಗಿಕ ಕಾರ್ಯಕರ್ತೆಯ ಪಾತ್ರ ನಿಭಾಯಿಸುತ್ತಿದ್ದಾರೆ. ಅಮೃತಾ ಎಂಬ ಆ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಅವರ ಜೊತೆಗೆ ‘ದಿಯಾ’ ಸಿನಿಮಾ ಖ್ಯಾತಿಯ ನಟ ದೀಕ್ಷಿತ್​ ಶೆಟ್ಟಿ ಕೂಡ ನಟಿಸಿದ್ದಾರೆ. ಒಂದು ಮೊಟ್ಟೆಯ ಕಥೆ, ಬೀರ್ ಬಲ್, ಗರುಡ ಗಮನ ವೃಷಭ ವಾಹನ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ವಿನೀತ್ ಕುಮಾರ್ ಅವರಿಗೂ ‘ಸ್ಟ್ರಾಬೆರಿ’ ಚಿತ್ರದಲ್ಲೊಂದು ಮುಖ್ಯ ಪಾತ್ರವಿದೆ. ಮಂಗಳೂರಿನ ರಂಗಭೂಮಿಯಲ್ಲಿ ಗುರುತಿಸಿಕೊಂಡಿರುವ ವಿಜಯ್ ಮಯ್ಯ ಜಾರ್ಜ್ ಎಂಬ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:

ಶ್ರುತಿ ಹರಿಹರನ್​ ಮೀಟೂ ಕಾನೂನು ಸಮರ: ಅರ್ಜುನ್​ ಸರ್ಜಾಗೆ ಗೆಲುವು? ಸಾಕ್ಷಿ ಕೊರತೆಯಿಂದ ಬಿ ರಿಪೋರ್ಟ್​

ಮೀಟೂ ಕೇಸ್​: ಶ್ರುತಿ ಹರಿಹರನ್​ಗೆ ಹಿನ್ನಡೆ ಬಳಿಕ ಧ್ರುವ ಸರ್ಜಾ, ಮೇಘನಾ ರಾಜ್​ ಪ್ರತಿಕ್ರಿಯೆ ಏನು?