‘ಕಲಾತಪಸ್ವಿ’ ರಾಜೇಶ್​ ಅಂತ್ಯಸಂಸ್ಕಾರ; ಮಾವನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಅರ್ಜುನ್​ ಸರ್ಜಾ

‘ಕಲಾತಪಸ್ವಿ’ ರಾಜೇಶ್​ ಅಂತ್ಯಸಂಸ್ಕಾರ; ಮಾವನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಅರ್ಜುನ್​ ಸರ್ಜಾ

TV9 Web
| Updated By: ಮದನ್​ ಕುಮಾರ್​

Updated on: Feb 19, 2022 | 10:03 PM

ರಾಜೇಶ್​ ಅವರ ಇಬ್ಬರು ಪುತ್ರರಾದ ಸದಾನಂದ, ಧನಂಜಯ ಹಾಗೂ ಅಳಿಯ ಅರ್ಜುನ್​ ಸರ್ಜ ಅವರು ಅಂತಿಮ ವಿಧಿವಿಧಾನ ನೆರವೇರಿಸಿದರು. ಮಾವನ ಅಂತಿಮ ಯಾತ್ರೆಗೆ ಅರ್ಜುನ್​ ಸರ್ಜಾ ಹೆಗಲು ಕೊಟ್ಟರು.

‘ಕಲಾತಪಸ್ವಿ’ ಎಂದೇ ಚಿತ್ರರಂಗದಲ್ಲಿ ಫೇಮಸ್​ ಆಗಿದ್ದ ಹಿರಿಯ ನಟ ರಾಜೇಶ್​ (Kalatapasvi Rajesh) ಅವರು ಅನಾರೋಗ್ಯದಿಂದ ಮೃತರಾಗಿರುವುದು ನೋವಿನ ಸಂಗತಿ. ಅವರ ಅಗಲಿಕೆಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು, ರಾಜಕೀಯ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ. ರಾಜೇಶ್​ ಅವರಿಗೆ 82 ವರ್ಷ ವಯಸ್ಸಾಗಿತ್ತು. ಶನಿವಾರ (ಫೆ.19) ಬೆಂಗಳೂರಿನಲ್ಲಿ ಅವರು ಕೊನೆಯುಸಿರು ಎಳೆದರು. ಸಂಜೆ 5.30ರ ಸುಮಾರಿಗೆ ರಾಜೇಶ್​ ಅಂತ್ಯಕ್ರಿಯೆ (Kalatapasvi Rajesh Funeral) ನೆರವೇರಿಸಲಾಯಿತು. ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ ಈ ಸಾಧಕನಿಗೆ ಪೊಲೀಸ್ ಗೌರವದೊಂದಿಗೆ ಅಂತಿಮ ವಿದಾಯ ಹೇಳಲಾಯಿತು. ಹಾಲುಮತ ಸಂಪ್ರದಾಯದಂತೆ ರಾಜೇಶ್​ ಅವರ ಅಂತ್ಯಕ್ರಿಯೆ ನೆರವೇರಿತು. ಇಬ್ಬರು ಪುತ್ರರಾದ ಸದಾನಂದ, ಧನಂಜಯ ಹಾಗೂ ಅಳಿಯ ಅರ್ಜುನ್​ ಸರ್ಜಾ (Arjun Sarja) ಅವರು ಅಂತಿಮ ವಿಧಿವಿಧಾನ ನೆರವೇರಿಸಿದರು. ರಾಜೇಶ್​ ಅವರ ಪುತ್ರಿ ನಿವೇದಿತಾ (ಆಶಾ ರಾಣಿ) ಜೊತೆ 1988ರಲ್ಲಿ ಅರ್ಜುನ್​ ಸರ್ಜಾ ಮದುವೆ ನಡೆದಿತ್ತು. ಇಂದು ಮಾವನ ಪಾರ್ಥಿವ ಶರೀರಕ್ಕೆ ಅರ್ಜುನ್​ ಸರ್ಜಾ ಹೆಗಲು ಕೊಟ್ಟರು. ಬೆಂಗಳೂರು ಉತ್ತರ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿರುವ ಸ್ನೇಹಿತ ಸಿದ್ದಲಿಂಗಯ್ಯನವರ ತೋಟದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

ಇದನ್ನೂ ಓದಿ:

ಪುನೀತ್​-ರಾಜೇಶ್​ ಕೊನೇ ಭೇಟಿಯ ಕ್ಷಣಗಳು; ಅಗಲಿದ ಸಾಧಕರಿಗೆ ಇದು ಚಿತ್ರನಮನ

‘ಕಲಾ ತಪಸ್ವಿ’ ರಾಜೇಶ್​​ ಅವರಿಗಿತ್ತು ಮೂರು ಹೆಸರು; ಹೆಸರಿನ ಹಿಂದಿನ ಕುತೂಹಲಕರ ಮಾಹಿತಿ ಇಲ್ಲಿದೆ