ಶತ್ರುಘ್ನಾ ಸಿನ್ಹಾ ಮಾಟ ಮಾಡಿಸಿದ್ದರು ಎಂದು ಆರೋಪಿಸಿದ್ದ ಮಾಜಿ ಬಿಗ್ಬಾಸ್ ಸ್ಪರ್ಧಿಯ ಮೇಲೆ ಹರಿಹಾಯ್ದ ಲವ್ ಸಿನ್ಹಾ; ಏನಿದು ಪ್ರಕರಣ?
Shatrughan Sinha | Pooja Mishra | Luv S Sinha: ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪೂಜಾ ಮಿಶ್ರಾ, ‘‘ಶತ್ರುಘ್ನಾ ಸಿನ್ಹಾ ನನ್ನ ತಂದೆಯ ಸ್ನೇಹಿತರಾಗಿದ್ದರು. ಅವರು ನನ್ನ ತಂದೆಯಿಂದ 100 ಕೋಟಿ ರೂಪಾಯಿಗಳನ್ನು ಪಡೆದಿದ್ದರು’’ ಎಂದು ಆರೋಪಿಸಿದ್ದರು. ಜತೆಗೆ ತಮ್ಮ ಮೇಲೆ ಮಾಟವನ್ನು ಮಾಡಿಸಿದ್ದಾರೆ ಎಂದೂ ಪೂಜಾ ಆರೋಪಿಸಿದ್ದರು. ಇದಕ್ಕೆ ಶತ್ರುಘ್ನಾ ಪುತ್ರ ಲವ್ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ.
ಬಿಗ್ ಬಾಸ್ 5 ರ ಸ್ಪರ್ಧಿ ಪೂಜಾ ಮಿಶ್ರಾ (Pooja Mishra) ಇತ್ತೀಚೆಗೆ ಖ್ಯಾತ ನಟ, ಸಂಸದ ಶತ್ರುಘ್ನಾ ಸಿನ್ಹಾ (Shatrughna Sinha) ಹಾಗೂ ಅವರ ಕುಟುಂಬದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಇದೀಗ ಈ ಎಲ್ಲಾ ವಿಚಾರಗಳಿಗೆ ಶತ್ರುಘ್ನ ಅವರ ಪುತ್ರ ಲವ್ ಎಸ್ ಸಿನ್ಹಾ ಪ್ರತಿಕ್ರಿಯೆ ನೀಡಿದ್ದು, ಆರೋಗಳನ್ನು ನಿರಾಕರಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪೂಜಾ ಮಿಶ್ರಾ, ‘‘ಶತ್ರುಘ್ನಾ ಸಿನ್ಹಾ ನನ್ನ ತಂದೆಯ ಸ್ನೇಹಿತರಾಗಿದ್ದರು. ಅವರು ನನ್ನ ತಂದೆಯಿಂದ 100 ಕೋಟಿ ರೂಪಾಯಿಗಳನ್ನು ಪಡೆದಿದ್ದರು’’ ಎಂದು ಆರೋಪಿಸಿದ್ದರು. ಜತೆಗೆ ತಮ್ಮ ಮೇಲೆ ಮಾಟವನ್ನು ಮಾಡಿಸಿದ್ದಾರೆ ಎಂದೂ ಪೂಜಾ ಆರೋಪಿಸಿದ್ದರು. ಈ ಎಲ್ಲಾ ಆರೋಪಗಳಿಗೆ ಉತ್ತರಿಸಿರುವ ಲವ್ ಸಿನ್ಹಾ, ಪೂಜಾರಿಗೆ ಮಾನಸಿಕ ಅಸ್ವಸ್ಥತೆ ಇದೆ ಎಂದು ತೋರುತ್ತದೆ. ಅವರು ಚಿಕಿತ್ಸೆ ಪಡೆಯಬೇಕು ಎಂದು ಟ್ವೀಟ್ ಮಾಡಿದ್ದಾರೆ.
ತಮ್ಮ ಟ್ವೀಟ್ನಲ್ಲಿ ಲವ್ ಸಿನ್ಹಾ, ‘‘ಆ ಮಹಿಳೆಗೆ ವೃತ್ತಿಪರ ತಜ್ಞರ ಸಹಾಯ ಬೇಕು. ನಮ್ಮ ಕುಟುಂಬದ ವಿರುದ್ಧ ಇಂತಹ ಆರೋಪಗಳನ್ನು ಮಾಡಿರುವುದನ್ನು ನೋಡಿದರೆ ಮಾನಸಿಕವಾಗಿ ಅವರು ಅಸ್ಥಿರವಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ. ಸಾಮಾನ್ಯವಾಗಿ ಇಂತಹ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಇಂತಹ ಸುದ್ದಿಯನ್ನು ಅನುಮೋದಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಅವಕಾಶ ನನಗಿದೆ ಎಂಬುದನ್ನು ತಿಳಿದುಕೊಳ್ಳಿ’’ ಎಂದು ಖಾರವಾಗಿ ಬರೆದಿದ್ದಾರೆ.
ಲವ್ ಸಿನ್ಹಾ ಟ್ವೀಟ್ ಇಲ್ಲಿದೆ:
who approved this story should realize that strong legal action can be taken against such defamatory articles which are absolutely untrue and disgusting @ZoomTV
— Luv S Sinha (@LuvSinha) May 4, 2022
ಪೂಜಾ ಮಿಶ್ರಾ ಹೇಳಿದ್ದೇನು?
ನವಭಾರತ್ ಟೈಮ್ಸ್ಗೆ ನೀಡಿದ್ದ ಸಂದರ್ಶನದಲ್ಲಿ ಪೂಜಾ ಮಿಶ್ರಾ ಶತ್ರುಘ್ನಾ ಸಿನ್ಹಾ ಹಾಗೂ ಅವರ ಪತ್ನಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ‘‘ಶತ್ರುಘ್ನಾ ಸಿನ್ಹಾ ನನ್ನನ್ನು ಲೈಂಗಿಕ ಹಗರಣ ದಂಧೆಗೆ ತಳ್ಳಿದ್ದರು ಹಾಗೂ ನನ್ನ ಕನ್ಯತ್ವವನ್ನು ಮಾರಾಟ ಮಾಡಿ ಅವರ ಪುತ್ರಿ ಸೋನಾಕ್ಷಿ ಸಿನ್ಹಾರನ್ನು ಸ್ಟಾರ್ ಮಾಡಿದರು’’ ಎಂದು ಅವರು ಆರೋಪಿಸಿದ್ದರು. ಮುಂದುವರೆದು ಮಾತನಾಡಿದ್ದ ಪೂಜಾ, ‘‘ನನ್ನ ಹಾಳಾದ ವೃತ್ತಿ ಜೀವನಕ್ಕೆ ಯಾರನ್ನಾದರೂ ದೂಷಿಸುವುದಾದರೆ ಅದು ಶತ್ರುಘ್ನಾ ಸಿನ್ಹಾರನ್ನು ಮಾತ್ರ’’ ಎಂದು ಹೇಳಿದ್ದರು. ಅವರ ಮಾತುಗಳು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು.
ಪೂಜಾ ಮಿಶ್ರಾ ಇಂತಹ ಆರೋಪಗಳನ್ನು ಮಾಡಿರುವುದು ಇದೇ ಮೊದಲಲ್ಲ. 2018ರಲ್ಲಿ ‘ಮೀಟೂ’ ಚಳವಳಿಯ ಬಗ್ಗೆ ಮಾತನಾಡುತ್ತಾ, ಸಲ್ಮಾನ್ ಖಾನ್ ಮತ್ತು ಅವರ ಸಹೋದರರಾದ ಸೊಹೈಲ್ ಖಾನ್ ಹಾಗೂ ಅರ್ಬಾಜ್ ಖಾನ್ ಮೇಲೆ ಪೂಜಾ ಅತ್ಯಾಚಾರದ ಆರೋಪ ಹೊರಿಸಿದ್ದರು.
ಪೂಜಾ ಮಿಶ್ರಾ ಟಿವಿ ನಿರೂಪಕಿ, ನಟಿ ಹಾಗೂ ರೂಪದರ್ಶಿಯಾಗಿದ್ದಾರೆ. ‘ಬಿಗ್ ಬಾಸ್ 5’ರ ಮೂಲಕ ಅವರು ಖ್ಯಾತಿಗಳಿಸಿದರು. ‘ಅಮ್ಮ’ (2016, ‘ಡ್ರೀಮ್ಸ್: ದಿ ಮೂವಿ’ (2013) ಚಿತ್ರಗಳಲ್ಲಿ ಪೂಜಾ ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ