ನಾನಿ ನಟನೆಯ ‘ದಸರಾ’ ತಂಡಕ್ಕೆ ಬಂಪರ್ ಗಿಫ್ಟ್​; ಸಿಕ್ತು ಬಿಎಂಡಬ್ಲ್ಯೂ ಕಾರ್, ಚಿನ್ನದ ನಾಣ್ಯ

Dasara Movie Collection: ‘ದಸರಾ’ ಸಿನಿಮಾ ರಾಮ ನವಮಿ ಪ್ರಯುಕ್ತ ಮಾರ್ಚ್ 30ರಂದು ರಿಲೀಸ್ ಆಯಿತು. ಚಿತ್ರಕ್ಕೆ ರಾಮನ ಆಶೀರ್ವಾದ ಸಿಕ್ಕಿದೆ. ಸಿನಿಮಾ ಎಲ್ಲ ಕಡೆಗಳಲ್ಲಿ ಅಬ್ಬರಿಸುತ್ತಿದೆ.

ನಾನಿ ನಟನೆಯ ‘ದಸರಾ’ ತಂಡಕ್ಕೆ ಬಂಪರ್ ಗಿಫ್ಟ್​; ಸಿಕ್ತು ಬಿಎಂಡಬ್ಲ್ಯೂ ಕಾರ್, ಚಿನ್ನದ ನಾಣ್ಯ
ನಾನಿ
Follow us
ರಾಜೇಶ್ ದುಗ್ಗುಮನೆ
|

Updated on:Apr 04, 2023 | 7:55 AM

ನಾನಿ ನಟನೆಯ ‘ದಸರಾ’ ಸಿನಿಮಾದ (Dasara Movie) ಕಲೆಕ್ಷನ್ ನೋಡಿ ಅನೇಕರು ಅಚ್ಚರಿಗೊಂಡಿದ್ದಾರೆ. ಮಹೇಶ್ ಬಾಬು, ಅಲ್ಲು ಅರ್ಜುನ್​, ರಾಮ್​ ಚರಣ್ (Ram Charan) ಮೊದಲಾದ ಸ್ಟಾರ್ ಹೀರೋಗಳ ಸಿನಿಮಾ ರೀತಿಯಲ್ಲೇ ಈ ಚಿತ್ರ ಕಲೆಕ್ಷನ್ ಮಾಡುತ್ತಿದೆ. ರೊಮ್ಯಾಂಟಿಕ್​, ಕಾಮಿಡಿ ಸಿನಿಮಾಗಳನ್ನು ಮಾಡಿ ಫೇಮಸ್ ಆದ ನಾನಿ ಹೊಸ ಪ್ರಯತ್ನಕ್ಕೆ ಮುಂದಾದರು. ಈ ಪ್ರಯತ್ನ ಯಶಸ್ಸು ಕೊಟ್ಟಿದೆ. ಸಾಕಷ್ಟು ಶ್ರಮ ಹಾಕಿ ಮಾಡಿದ ಸಿನಿಮಾ ‘ದಸರಾ’ ಹಿಟ್ ಆಗಿದೆ. ನಾಲ್ಕೇ ದಿನಕ್ಕೆ ಚಿತ್ರದ ಗಳಿಕೆ 87 ಕೋಟಿ ರೂಪಾಯಿ ದಾಟಿದೆ. ಇದು ಸಿನಿಮಾ ತಂಡದ ಖುಷಿ ಹೆಚ್ಚಿಸಿದೆ. ಇದೇ ಖುಷಿಯಲ್ಲಿ ನಿರ್ಮಾಪಕರು ತಂಡದವರಿಗೆ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ.

‘ದಸರಾ’ ಸಿನಿಮಾ ರಾಮ ನವಮಿ ಪ್ರಯುಕ್ತ ಮಾರ್ಚ್ 30ರಂದು ರಿಲೀಸ್ ಆಯಿತು. ಚಿತ್ರಕ್ಕೆ ರಾಮನ ಆಶೀರ್ವಾದ ಸಿಕ್ಕಿದೆ. ಸಿನಿಮಾ ಎಲ್ಲ ಕಡೆಗಳಲ್ಲಿ ಅಬ್ಬರಿಸುತ್ತಿದೆ. ಸಿನಿಮಾದ ಮೇಕಿಂಗ್ ಹಾಗೂ ನಾನಿ ಆ್ಯಕ್ಷನ್ ಪ್ರೇಕ್ಷಕರಿಗೆ ಇಷ್ಟವಾಗಿದೆ. ಚಿತ್ರಕ್ಕೆ ಬಾಯಿ ಮಾತಿನ ಪ್ರಚಾರ ಕೂಡ ಜೋರಾಗಿ ಸಿಗುತ್ತಿದೆ. ಈ ಎಲ್ಲ ಕಾರಣದಿಂದ ಜನರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ವೀಕೆಂಡ್​ನಲ್ಲಿ ಚಿತ್ರಕ್ಕೆ ಭರ್ಜರಿ ಕಲೆಕ್ಷನ್ ಆಗಿದೆ.

ಇದನ್ನೂ ಓದಿ: ನಾಲ್ಕನೇ ದಿನವೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ನಾನಿಯ ದಸರಾ

ಚಿತ್ರದ ನಿರ್ಮಾಪಕ ಸುಧಾಕರ್ ಚೆರಕೂರಿ ಅವರು ಸುಮಾರು 80 ಲಕ್ಷ ರೂಪಾಯಿ ಬೆಲೆಯ ಬಿಎಂಡಬ್ಲ್ಯೂ ಕಾರನ್ನು ‘ದಸರಾ’ ನಿರ್ದೇಶಕ ಶ್ರೀಕಾಂತ್ ಒಡೆಲಾಗೆ ಗಿಫ್ಟ್ ನೀಡಿದ್ದಾರೆ. ಪ್ರಮುಖ ತಂತ್ರಜ್ಞರಿಗೆ 10 ಗ್ರಾಂ ಚಿನ್ನದ ಗಟ್ಟಿಯನ್ನು ನೀಡಿದ್ದಾರೆ. ಇದರಿಂದ ಚಿತ್ರದ ತಾಂತ್ರಿಕ ವರ್ಗ ಸಖತ್ ಖುಷಿಪಟ್ಟಿದೆ. ನಿರ್ಮಾಪಕ ಸುಧಾಕರ್ ಅವರ ನಿರ್ಧಾರದ ಬಗ್ಗೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ಉಡುಗೊರೆ ಸ್ವೀಕರಿಸಲು ನಿರ್ದೇಶಕರು ಹಾಗೂ ತಾಂತ್ರಿಕ ವರ್ಗ ಅರ್ಹವಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಅಬ್ಬರದ ಓಪನಿಂಗ್ ಪಡೆದ ನಾನಿ ನಟನೆಯ ‘ದಸರಾ’; ಆದರೂ, ‘ಕಬ್ಜ’ ದಾಖಲೆ ಮುರಿಯಲಿಲ್ಲ

ಮಾರ್ಚ್ 30 ರಂದು ‘ದಸರಾ’ ಬಿಡುಗಡೆ ಆಯಿತು. ರಿಲೀಸ್​ಗೂ ಮೊದಲೇ ಸಿನಿಮಾದ ಟ್ರೇಲರ್ ಹೈಪ್ ಸೃಷ್ಟಿ ಮಾಡಿತ್ತು. ಇದರ ಜೊತೆಗೆ ನಾನಿ ಅಬ್ಬರದ ಪ್ರಚಾರ ಮಾಡಿದರು. ಮೊದಲ ದಿನ ಸಿನಿಮಾ 38 ಕೋಟಿ ರೂಪಾಯಿ ಗಳಿಸಿ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ಅದಾದ ಬಳಿಕ ಎರಡನೇ ದಿನ 15 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿ ತನ್ನ ಓಟ ಮುಂದುವರಿಸಿತು. ನಾಲ್ಕನೇ ದಿನದ ಅಂತ್ಯಕ್ಕೆ ಸಿನಿಮಾ ವಿಶ್ವದಾದ್ಯಂತ 87 ಕೋಟಿ ರೂಪಾಯಿ ಗಳಿಸಿದೆ. ಸೋಮವಾರ (ಏಪ್ರಿಲ್ 3) ಚಿತ್ರದ ಗಳಿಕೆ ಎಷ್ಟಾಗಲಿದೆ ಅನ್ನೋದು ಸದ್ಯದ ಕುತೂಹಲ. ಆಂಧ್ರ-ತೆಲಂಗಾಣ ಮಾತ್ರವಲ್ಲದೆ ತಮಿಳುನಾಡು, ಕರ್ನಾಟಕದಲ್ಲೂ ಚಿತ್ರಕ್ಕೆ ಉತ್ತಮ ಗಳಿಕೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:16 am, Tue, 4 April 23

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು