Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishab Shetty: ಭರ್ಜರಿಯಾಗಿ ನಡೀತಿದೆ ‘ಕಾಂತಾರ 2’ ತಯಾರಿ; ರಿಷಬ್ ಶೆಟ್ಟಿ ಕೊಟ್ರು ಅಪ್​ಡೇಟ್​

‘ಕಾಂತಾರ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿರುವುದಾಗಿ ಅವರು ಹೇಳಿದ್ದರು. ಆದರೂ ಈ ಸುದ್ದಿ ನಿಂತಿಲ್ಲ. ಈ ಬಗ್ಗೆ ಅವರು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.

Rishab Shetty: ಭರ್ಜರಿಯಾಗಿ ನಡೀತಿದೆ ‘ಕಾಂತಾರ 2’ ತಯಾರಿ; ರಿಷಬ್ ಶೆಟ್ಟಿ ಕೊಟ್ರು ಅಪ್​ಡೇಟ್​
ರಿಷಬ್ ಶೆಟ್ಟಿ
Follow us
ರಾಜೇಶ್ ದುಗ್ಗುಮನೆ
|

Updated on: Apr 14, 2023 | 10:52 AM

‘ಕಾಂತಾರ’ ಸಿನಿಮಾ ರಿಷಬ್ ಶೆಟ್ಟಿ ವೃತ್ತಿ ಜೀವನಕ್ಕೆ ಮೈಲೇಜ್ ನೀಡಿದೆ. ರಿಷಬ್ ಶೆಟ್ಟಿ ಅವರನ್ನು ನೋಡುವ ರೀತಿ ಸಂಪೂರ್ಣ ಬದಲಾಗಿದೆ. ಪರಭಾಷೆಯ ಮಂದಿಯೂ ರಿಷಬ್ ಶೆಟ್ಟಿ (Rishab Shetty) ಮುಂದಿನ ಚಿತ್ರದ ಬಗ್ಗೆ ಗಮನ ಕೊಡುತ್ತಿದ್ದಾರೆ. ಅವರು ‘ಕಾಂತಾರ 2’ ಸಿನಿಮಾ (Kantara 2 Movie) ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಭರ್ಜರಿಯಾಗಿ ಈ ಸಿನಿಮಾ ಕೆಲಸಗಳು ನಡೆಯುತ್ತಿವೆ. ಈ ಬಗ್ಗೆ ರಿಷಬ್ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ. ರಾಜಕೀಯದಲ್ಲಿ ಅವರ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.

ವಿಧಾನಸಭೆ ಚುನಾವಣೆಗೆ ಕೌಂಟ್​ಡೌನ್ ಶುರುವಾಗಿದೆ. ರಿಷಬ್ ಶೆಟ್ಟಿ ಅವರು ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಾರೆ ಎನ್ನುವ ಮಾತಿತ್ತು. ಆದರೆ, ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದರು. ‘ಕಾಂತಾರ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿರುವುದಾಗಿ ಅವರು ಹೇಳಿದ್ದರು. ಆದರೂ ಈ ಸುದ್ದಿ ನಿಂತಿಲ್ಲ. ಈ ಬಗ್ಗೆ ಅವರು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ‘ಕಾಂತಾರ 2’ ಸಿನಿಮಾ ಬಗ್ಗೆ ಅಪ್​ಡೇಟ್ ನೀಡಿದ್ದಾರೆ.

ಇತ್ತೀಚೆಗೆ ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ರಿಷಬ್ ಶೆಟ್ಟಿ ತೆರಳಿದ್ದರು. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಆಗಮಿಸಿದ್ದರು. ಇಬ್ಬರು ಒಟ್ಟಾಗಿ ಫೋಟೋ ತೆಗೆಸಿಕೊಂಡಿದ್ದರು. ಇದಕ್ಕೆ ರಾಜಕೀಯ ಬಣ್ಣ ಹಚ್ಚಲಾಗಿತ್ತು. ಆದರೆ, ಆ ರೀತಿ ಯಾವುದೇ ಆಲೋಚನೆ ಇಲ್ಲ ಎಂದು ರಿಷಬ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

‘ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಹೋದಾಗ ಮುಖ್ಯಮಂತ್ರಿಗಳ ಭೇಟಿಯಾಯಿತು. ರಾಜಕೀಯದ ಬಣ್ಣ ಬೇಡ. ಕಾಂತಾರದ ಬರವಣಿಗೆಯಲ್ಲಿ ಸಂಪೂರ್ಣ ತೊಡಗಿ ಕೊಂಡಿದ್ದೇನೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಇರಲಿ’ ಎಂದು ರಿಷಬ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಪರ ಪ್ರಚಾರ ಮಾಡ್ತಾರಾ ರಿಷಬ್​​ ಶೆಟ್ಟಿ? ಸಿಎಂ ಬೊಮ್ಮಾಯಿ ಕೊಟ್ಟ ಸ್ಪಷ್ಟನೆ ಇಲ್ಲಿದೆ

‘ಕಾಂತಾರ’ ಸಿನಿಮಾ ಕಳೆದ ವರ್ಷ ಸೆಪ್ಟೆಂಬರ್ 30ರಂದು ರಿಲೀಸ್ ಆಯಿತು. ಮೊದಲು ಕನ್ನಡದಲ್ಲಿ ಮಾತ್ರ ಸಿನಿಮಾ ತೆರೆಗೆ ಬಂತು. ಆ ಬಳಿಕ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಪರಭಾಷೆಗೂ ಡಬ್ ಮಾಡುವ ಕೆಲಸ ಆಯಿತು. ಅಲ್ಲಿಯೂ ಈ ಸಿನಿಮಾ ಒಳ್ಳೆಯ ಕಮಾಯಿ ಮಾಡಿತು. ಕೇವಲ 15 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ರೂಪಾಯಿ ಬಾಚಿಕೊಂಡಿತು. ಈಗ ‘ಕಾಂತಾರ 2’ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಅವರು ತಮ್ಮ ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ. ಅಂದಹಾಗೆ ಈಗ ಸಿದ್ಧಗೊಳ್ಳುತ್ತಿರುವುದು ಪ್ರೀಕ್ವೆಲ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ