‘ಕೆಜಿಎಫ್​ 3’ ಬಗ್ಗೆ ದೊಡ್ಡ ಸುಳಿವು ನೀಡಿದ ‘ಹೊಂಬಾಳೆ’; 1978ರಿಂದ 1981 ತನಕ ರಾಕಿ ಎಲ್ಲಿದ್ದ?

KGF Chapter 3: ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ಮಿಸ್​ ಆದ ಒಂದಷ್ಟು ವಿವರಗಳು ಇವೆ. ಅವುಗಳನ್ನು ಇಟ್ಟುಕೊಂಡು ‘ಕೆಜಿಎಫ್​ 3’ ಚಿತ್ರ ಮಾಡಲಾಗುತ್ತಿದೆ ಎಂಬುದಕ್ಕೆ ಈಗ ಸುಳಿವು ಸಿಕ್ಕಿದೆ.

‘ಕೆಜಿಎಫ್​ 3’ ಬಗ್ಗೆ ದೊಡ್ಡ ಸುಳಿವು ನೀಡಿದ ‘ಹೊಂಬಾಳೆ’; 1978ರಿಂದ 1981 ತನಕ ರಾಕಿ ಎಲ್ಲಿದ್ದ?
ಯಶ್
Follow us
ಮದನ್​ ಕುಮಾರ್​
|

Updated on:Apr 14, 2023 | 1:50 PM

​ಏಪ್ರಿಲ್​ 14 ಎಂದರೆ ‘ರಾಕಿಂಗ್​ ಸ್ಟಾರ್​’ ಯಶ್​ (Yash) ಪಾಲಿಗೆ ವಿಶೇಷ ದಿನ. ಕೇವಲ ಯಶ್​ ಅವರಿಗೆ ಮಾತ್ರವಲ್ಲದೇ ಇಡೀ ಕನ್ನಡ ಚಿತ್ರರಂಗಕ್ಕೆ ಇದು ವಿಶೇಷವಾದ ದಿನಾಂಕ. 2022ರ ಏಪ್ರಿಲ್​ 14ರಂದು ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ತೆರೆಕಂಡಿತು. ಅದಾಗಿ ಇಂದಿಗೆ ಒಂದು ವರ್ಷ ಕಳೆದಿದೆ. ಇಡೀ ದೇಶವೇ ಚಂದನವನದ ಕಡೆಗೆ ತಿರುಗಿ ನೋಡಿದ ಆ ದಿನವನ್ನು ಕನ್ನಡ ಸಿನಿಪ್ರಿಯರು ಮರೆಯುವಂತಿಲ್ಲ. ‘ಕೆಜಿಎಫ್​ 2’ ನಿರ್ಮಾಣ ಮಾಡಿದ ‘ಹೊಂಬಾಳೆ ಫಿಲ್ಮ್ಸ್​’ (Hombale Films) ಸಂಸ್ಥೆ ಈಗ ಆ ನೆನಪುಗಳನ್ನು ಮೆಲುಕು ಹಾಕಿದೆ. ಒಂದು ವಿಶೇಷವಾದ ವಿಡಿಯೋ ಹಂಚಿಕೊಳ್ಳುವ ಮೂಲಕ ರಾಕಿ ಭಾಯ್​ ಜರ್ನಿಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳಲಾಗಿದೆ. ಅದರಲ್ಲಿ ಹೊಸದೊಂದು ಸುಳಿವು ನೀಡಲಾಗಿದೆ. ‘ಕೆಜಿಎಫ್​: ಚಾಪ್ಟರ್​ 3’ (KGF Chapter 3) ಸಿನಿಮಾ ಬರೋದು ಖಚಿತ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಒದಗಿಸುತ್ತಿದೆ. ಇದನ್ನು ನೋಡಿ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ.

ನಿರ್ದೇಶಕ ಪ್ರಶಾಂತ್​ ನೀಲ್​ ಅವರು ‘ಕೆಜಿಎಫ್​: ಚಾಪ್ಟರ್​ 1’ ಮತ್ತು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾಗಳ ಮೂಲಕ ರಾಕಿ ಭಾಯ್​ ಪಾತ್ರದ ಬಾಲ್ಯ, ಹೋರಾಟ, ಲವ್​, ಅವನತಿ.. ಮುಂತಾದ್ದನ್ನು ತೋರಿಸಿದರು. ಆದರೆ ಒಂದು ವಿಚಾರವನ್ನು ಗೌಪ್ಯವಾಗಿ ಇಡಲಾಯಿತು. 1978ರಿಂದ 1981ರ ತನಕ ರಾಕಿ ಭಾಯ್​ ಎಲ್ಲಿದ್ದ ಎಂಬುದನ್ನು ‘ಕೆಜಿಎಫ್​ 2’ ಸಿನಿಮಾದಲ್ಲಿ ತೋರಿಸಿಲ್ಲ. ಆ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದೆ.

ಇದನ್ನೂ ಓದಿ
Image
Radhika Pandit: ಯಶ್​​ಗಿಂತ ರಾಧಿಕಾ ಪಂಡಿತ್ ಎಷ್ಟು ವರ್ಷ ದೊಡ್ಡವರು? ಇಲ್ಲಿದೆ ಮಾಹಿತಿ
Image
Yash Birthday: ಬರ್ತ್​ಡೇಗೂ ಮೊದಲು ಅಭಿಮಾನಿಗಳ ಭೇಟಿ ಮಾಡಿದ ಯಶ್; ಇದಕ್ಕಿದೆ ಕಾರಣ
Image
Yash Birthday: ‘ಕ್ಷಮಿಸಿ, ಹುಟ್ಟುಹಬ್ಬಕ್ಕೆ ನಿಮ್ಮ ಜತೆ ಇರಲು ಆಗುತ್ತಿಲ್ಲ’: ಅಭಿಮಾನಿಗಳಿಗೆ ಯಶ್​ ಪತ್ರ
Image
Yash: ನಟ ಯಶ್​ ಅವರನ್ನು ಭೇಟಿ ಮಾಡಿದ ಭಾರತೀಯ ಕ್ರಿಕೆಟಿಗರಾದ ಹಾರ್ದಿಕ್​, ಕೃನಾಲ್ ಪಾಂಡ್ಯ

ಈಗ ‘ಹೊಂಬಾಳೆ ಫಿಲ್ಮ್ಸ್​’ ಹಂಚಿಕೊಂಡ ವಿಡಿಯೋದಲ್ಲಿ ‘1978ರಿಂದ 1981ರ ತನಕ ರಾಕಿ ಭಾಯ್​ ಎಲ್ಲಿದ್ದ?’ ಎಂಬ ವಾಕ್ಯ ಹೈಲೈಟ್​ ಆಗಿದೆ. ಅಲ್ಲದೇ ವಿಡಿಯೋದ ಕೊನೆಯಲ್ಲಿ ‘3’ ಎದ್ದು ಕಾಣಿಸಿದೆ. ಅಂದರೆ, ‘ಕೆಜಿಎಫ್​: ಚಾಪ್ಟರ್​ 3’ ಚಿತ್ರಕ್ಕೆ ಸಕಲ ತಯಾರಿ ನಡೆದಿದೆಯೇ ಎಂಬ ಪ್ರಶ್ನೆ ಪ್ರೇಕ್ಷಕರ ಮನದಲ್ಲಿ ಮೂಡಿದೆ. ಮೂರನೇ ಚಾಪ್ಟರ್​ನಲ್ಲಿ 1978ರಿಂದ 1981ರವರೆಗಿನ ಕಥೆ ಬಹಿರಂಗ ಆಗಲಿದೆ ಎಂದು ಎಲ್ಲರೂ ಊಹಿಸುತ್ತಿದ್ದಾರೆ.

ಇದನ್ನೂ ಓದಿ: KGF 3: ‘ಇನ್ನೂ ಭರ್ಜರಿಯಾದ ದೃಶ್ಯಗಳಿವೆ’: ‘ಕೆಜಿಎಫ್​ 3’ ಬಗ್ಗೆ ಮಾಹಿತಿ ಬಹಿರಂಗ ಮಾಡಿದ ಯಶ್​​

‘ಕೆಜಿಎಫ್​: ಚಾಪ್ಟರ್​ 2’ ತೆರೆಕಂಡು ಒಂದು ವರ್ಷ ಕಳೆದಿದ್ದರೂ ಕೂಡ ಯಶ್​ ಅವರು ಹೊಸ ಸಿನಿಮಾ ಅನೌನ್ಸ್​ ಮಾಡಿಲ್ಲ. ಅವರು ಯಾವ ಪ್ರೊಡಕ್ಷನ್​ ಹೌಸ್​ ಜೊತೆ ಕೈ ಜೋಡಿಸುತ್ತಾರೆ ಎಂಬುದು ಕೂಡ ಬಹಿರಂಗ ಆಗಿಲ್ಲ. ಈಗ ‘ಹೊಂಬಾಳೆ ಫಿಲ್ಮ್ಸ್​’ ಹಂಚಿಕೊಂಡ ವಿಡಿಯೋದಲ್ಲಿ ‘ಕೆಜಿಎಫ್​: ಚಾಪ್ಟರ್​ 3’ ಬಗ್ಗೆ ಹಿಂಟ್​ ಸಿಕ್ಕಿರುವುದರಿಂದ ಯಶ್​ ಮಾಡಲಿರುವ ಮುಂದಿನ ಸಿನಿಮಾ ಇದೇ ಆಗಿರಬಹುದೇ ಎಂದು ಫ್ಯಾನ್ಸ್​ ಊಹಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:50 pm, Fri, 14 April 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ