AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pushpa 2: ‘ಕಾಂತಾರ’ ಸಿನಿಮಾದಿಂದ ಸ್ಫೂರ್ತಿ ಪಡೆಯಿತೇ ‘ಪುಷ್ಪ 2’ ಪೋಸ್ಟರ್​? ಕನ್ನಡದ ಮೇಲೆ ಕಣ್ಣಿಟ್ಟ ತೆಲುಗು ಚಿತ್ರರಂಗ

‘ಪುಷ್ಪ 2’ ಚಿತ್ರದ ಹೊಸ ಪೋಸ್ಟರ್​ ವೈರಲ್​ ಆಗಿದೆ. ಅದಕ್ಕೆ ಕಮೆಂಟ್​ ಮಾಡಿರುವ ಅನೇಕರು ‘ಕಾಂತಾರ ಚಿತ್ರದ ಫೀಲ್​ ಬರುತ್ತಿದೆ’ ಎಂದು ಅಭಿಪ್ರಾಯ ತಿಳಿಸಿದ್ದಾರೆ.

Pushpa 2: ‘ಕಾಂತಾರ’ ಸಿನಿಮಾದಿಂದ ಸ್ಫೂರ್ತಿ ಪಡೆಯಿತೇ ‘ಪುಷ್ಪ 2’ ಪೋಸ್ಟರ್​? ಕನ್ನಡದ ಮೇಲೆ ಕಣ್ಣಿಟ್ಟ ತೆಲುಗು ಚಿತ್ರರಂಗ
ಅಲ್ಲು ಅರ್ಜುನ್
ಮದನ್​ ಕುಮಾರ್​
|

Updated on:Apr 09, 2023 | 10:14 AM

Share

ಏಪ್ರಿಲ್​ 8ರಂದು ಟಾಲಿವುಡ್​ ನಟ ಅಲ್ಲು ಅರ್ಜುನ್​ (Allu Arjun) ಜನ್ಮದಿನ. ಆ ಪ್ರಯುಕ್ತ ಒಂದು ದಿನ ಮುಂಚಿತವಾಗಿ ‘ಪುಷ್ಪ 2’ (Pushpa 2 Movie) ಸಿನಿಮಾದ ಫಸ್ಟ್​ ಗ್ಲಿಂಪ್ಸ್​ ಮತ್ತು ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಯಿತು. ಈ ಪೋಸ್ಟರ್​ನಲ್ಲಿ ಅಲ್ಲು ಅರ್ಜುನ್​ ಅವರ ಗೆಟಪ್​ ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ‘ಪುಷ್ಪ 2’ ಚಿತ್ರದ ಬಗ್ಗೆ ಭಾರಿ ಕೌತುಕ ಮೂಡುವಂತಾಗಿದೆ. ಅದರ ಜೊತೆಗೆ ಸೋಶಿಯಲ್​ ಮೀಡಿಯಾದಲ್ಲಿ ಇನ್ನೊಂದು ಚರ್ಚೆ ನಡೆಯುತ್ತಿದೆ. ರಿಷಬ್​ ಶೆಟ್ಟಿ ನಟನೆಯ ‘ಕಾಂತಾರ’ (Kantara Movie) ಸಿನಿಮಾದಿಂದ ಸ್ಫೂರ್ತಿ ಪಡೆದು ನಿರ್ದೇಶಕ ಸುಕುಮಾರ್​ ಅವರು ‘ಪುಷ್ಪ 2’ ಪೋಸ್ಟರ್​ ವಿನ್ಯಾಸ ಮಾಡಿಸಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಅಲ್ಲು ಅರ್ಜುನ್​ ಅವರ ವೇಷಭೂಷಣ. ಸದ್ಯಕ್ಕಂತೂ ಸೋಶಿಯಲ್​ ಮೀಡಿಯಾದಲ್ಲಿ ಈ ಪೋಸ್ಟರ್​ ವೈರಲ್​ ಆಗಿದ್ದು, ಫ್ಯಾನ್ಸ್​ ನಡುವೆ ಚರ್ಚೆ ಹುಟ್ಟುಹಾಕಿದೆ.

2021ರ ಡಿಸೆಂಬರ್​ನಲ್ಲಿ ‘ಪುಷ್ಪ’ ಸಿನಿಮಾ ಬಿಡುಗಡೆಯಾಗಿ ಸೂಪರ್​ ಹಿಟ್​ ಆಯಿತು. ಈಗ ಆ ಚಿತ್ರದ ಎರಡನೇ ಪಾರ್ಟ್​ ಮೂಡಿಬರುತ್ತಿದೆ. ‘ಪುಷ್ಪ’ ಚಿತ್ರಕ್ಕಿಂತಲೂ ಹಲವು ಪಟ್ಟು ಅದ್ದೂರಿಯಾಗಿ ‘ಪುಷ್ಪ 2’ ಮೂಡಿಬರುತ್ತಿದೆ. ಹೇಗಾದರೂ ಮಾಡಿ ಈ ಸಿನಿಮಾವನ್ನು ಬ್ಲಾಕ್​ ಬಸ್ಟರ್​ ಆಗಿಸಬೇಕು ಎಂದು ನಿರ್ದೇಶಕ ಸುಕುಮಾರ್​ ಪಣ ತೊಟ್ಟಂತಿದೆ. ಹಾಗಾಗಿ ಜನಮನ ಸೆಳೆಯಲು ಅವರು ಸಕಲ ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ
Image
‘ನನ್ನ ಪುಷ್ಪರಾಜ್​​ಗೆ ಹುಟ್ಟುಹಬ್ಬದ ಶುಭಾಶಯ’; ಅಲ್ಲು ಅರ್ಜುನ್​ಗೆ ಶುಭಾಶಯ ತಿಳಿಸಿದ ರಶ್ಮಿಕಾ ಮಂದಣ್ಣ
Image
Pushpa 2: ಕಥಾನಾಯಕನೇ ನಾಪತ್ತೆ; ಎಲ್ಲಿದ್ದಾನೆ ಪುಷ್ಪರಾಜ್​? ಅಲ್ಲು ಅರ್ಜುನ್​ ಜನ್ಮದಿನಕ್ಕೂ ಮುನ್ನ ದೊಡ್ಡ ಟ್ವಿಸ್ಟ್​
Image
Allu Arjun: ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ಅಲ್ಲು ಅರ್ಜುನ್​; ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸ್ಟಾರ್​ ನಟ
Image
Sai Pallavi: ‘ಪುಷ್ಪ 2’ ಸಿನಿಮಾದಲ್ಲಿ ಸಾಯಿ ಪಲ್ಲವಿಗೆ ನೆಗೆಟಿವ್​ ಪಾತ್ರ? ಟಾಲಿವುಡ್​ ಅಂಗಳದಲ್ಲಿ ಗುಸುಗುಸು

‘ಕಾಂತಾರ’ ಸಿನಿಮಾ 2022ರಲ್ಲಿ ಸೂಪರ್​ ಹಿಟ್​ ಆಯಿತು. ಈ ಚಿತ್ರವನ್ನು ಟಾಲಿವುಡ್​ ಮಂದಿ ಕೂಡ ಬಹುವಾಗಿ ಮೆಚ್ಚಿಕೊಂಡರು. ಅಂದರೆ, ತೆಲುಗು ಪ್ರೇಕ್ಷಕರಿಗೆ ಈ ರೀತಿಯ ಸಿನಿಮಾ ಇಷ್ಟ ಆಗುತ್ತದೆ ಎಂಬುದು ಖಚಿತವಾಯಿತು. ಹಾಗಾಗಿ ‘ಪುಷ್ಪ 2’ ಸಿನಿಮಾದಲ್ಲೂ ಅದೇ ಫ್ಲೇವರ್​ ನೀಡಲು ಸುಕುಮಾರ್​ ಪ್ರಯತ್ನಿಸುತ್ತಿರುವಂತಿದೆ. ಹೊಸ ಪೋಸ್ಟರ್​ನಲ್ಲಿ ಅಲ್ಲು ಅರ್ಜುನ್​ ಅವರ ಗೆಟಪ್​ ನೋಡಿದವರಿಗೆ ಆ ರೀತಿ ಅನಿಸುತ್ತಿದೆ.

ಇದನ್ನೂ ಓದಿ: Pushpa 2: ಪುಷ್ಪನ ಶವಕ್ಕಾಗಿ ಹುಡುಕಾಟ, ಪುಷ್ಪ ಎಲ್ಲಿ?

ಅಲ್ಲು ಅರ್ಜುನ್​ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ‘ಪುಷ್ಪ 2’ ಚಿತ್ರದ ಈ ಹೊಸ ಪೋಸ್ಟರ್​ ಹಂಚಿಕೊಂಡಿದ್ದಾರೆ. ಅದಕ್ಕೆ ಕಮೆಂಟ್​ ಮಾಡಿರುವ ಅನೇಕರು ‘ಕಾಂತಾರ ಚಿತ್ರದ ಫೀಲ್​ ಬರುತ್ತದೆ’ ಎಂದು ಅಭಿಪ್ರಾಯ ತಿಳಿಸಿದ್ದಾರೆ. ಒಟ್ಟಿನಲ್ಲಿ, ಕನ್ನಡದ ಸಿನಿಮಾಗಳನ್ನು ತೆಲುಗು ಚಿತ್ರರಂಗದವರು ತೀವ್ರವಾಗಿ ಗಮನಿಸುತ್ತಿದ್ದಾರೆ ಎಂಬುದಂತೂ ನಿಜ.

ವಿಶೇಷ ಗೆಟಪ್​ನಲ್ಲಿ ಅಲ್ಲು ಅರ್ಜುನ್​ ಕಾಣಿಸಿಕೊಂಡಿರುವುದರಿಂದ ಅಭಿಮಾನಿಗಳಿಗೆ ‘ಪುಷ್ಪ 2’ ಚಿತ್ರದ ಮೇಲಿನ ನಿರೀಕ್ಷೆ ಡಬಲ್​ ಆಗಿದೆ. ಫಸ್ಟ್​ ಗ್ಲಿಂಪ್ಸ್​ ಕೂಡ ಜನಮನ ಗೆದ್ದಿದೆ. ಯೂಟ್ಯೂಬ್​ನಲ್ಲಿ ಇದು ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:14 am, Sun, 9 April 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್