Pushpa 2: ಪುಷ್ಪನ ಶವಕ್ಕಾಗಿ ಹುಡುಕಾಟ, ಪುಷ್ಪ ಎಲ್ಲಿ?

ಪುಷ್ಪನಿಗೆ ಎಂಟು ಗುಂಡುಗಳು ತಗುಲಿವೆ, ಪುಷ್ಪನ ಶವಕ್ಕಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ, ಪುಷ್ಪನ ಸಹಸ್ರಾರು ಬೆಂಬಲಿಗರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಇದರ ನಡುವೆ ಆ ಕಾಡಿನ ಕತ್ತಲಲ್ಲಿ ಹುಲಿ ಎರಡು ಹೆಜ್ಜೆ ಹಿಂದಿಟ್ಟಿದೆ...

Pushpa 2: ಪುಷ್ಪನ ಶವಕ್ಕಾಗಿ ಹುಡುಕಾಟ, ಪುಷ್ಪ ಎಲ್ಲಿ?
ಪುಷ್ಪ 2
Follow us
ಮಂಜುನಾಥ ಸಿ.
|

Updated on:Apr 07, 2023 | 5:03 PM

ತಿರುಪತಿ ಜೈಲಿನಿಂದ ಪುಷ್ಪ (Pushpa) ತಪ್ಪಿಸಿಕೊಂಡಿದ್ದಾನೆ, ತಪ್ಪಿಸಿಕೊಳ್ಳುವಾಗ ಪೊಲೀಸರು ಪುಷ್ಪ ಮೇಲೆ ಹತ್ತು ಸುತ್ತು ಗುಂಡು ಹಾರಿಸಿದ್ದಾರೆ. ಪುಷ್ಪನಿಗೆ ಎಂಟು ಗುಂಡುಗಳು ತಗುಲಿರುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ಪುಷ್ಪ ಶವವನ್ನು ಹುಡುಕಲು ದೊಡ್ಡ ಪೊಲೀಸ್ ಪಡೆ ತಮ್ಮ ನಾಯಿಗಳೊಟ್ಟಿಗೆ ಶೇಷಾಚಲಂ ಕಾಡಿಗೆ ದಾಂಗುಡಿ ಇಟ್ಟಿದ್ದಾರೆ. ಪುಷ್ಪನನ್ನು ದೇವರಂತೆ ಕಾಣುವ, ಅವನಿಂದ ಹಲವಾರು ಸಹಾಯಗಳನ್ನು ಪಡೆದ ಜನ ಪುಷ್ಪನ ವಿರುದ್ಧ ಫೈರಿಂಗ್ ಮಾಡಿದ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವೆಡೆ ದೊಂಬಿಗಳೆದ್ದಿವೆ, ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ, ಪುಷ್ಪನಿಗಾಗಿ ಪ್ರತಿಭಟಿಸುತ್ತಿರುವವರ ಮೇಲೆ ಪೊಲೀಸರ ಆರ್ಭಟ ಜೋರಿದೆ, ಇನ್ನೊಂದೆಡೆ ಪುಷ್ಪ ಬದುಕಿದ್ದಾನೋ ಅಥವಾ ಸತ್ತಿದ್ದಾನೋ ಎಂಬ ಚರ್ಚೆಗಳು ಟಿವಿಯಲ್ಲಿ. ಎಲ್ಲರಲ್ಲೂ ಇರುವುದು ಒಂದೇ ಪ್ರಶ್ನೆ ಪುಷ್ಪ ಬದುಕಿದ್ದಾನಾ? ಪುಷ್ಪ ಎಲ್ಲಿದ್ದಾನೆ?

ಅಲ್ಲು ಅರ್ಜುನ್ (Allu Arjun) ನಟನೆಯ ಸೂಪರ್ ಹಿಟ್ ಸಿನಿಮಾ ಪುಷ್ಪದ ಎರಡನೇ ಭಾಗ ಪುಷ್ಪ 2 ಅಥವಾ ಪುಷ್ಪ; ದಿ ರೂಲ್ (Pushpa The Rule) ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದೆ. ಮೂರು ನಿಮಿಷಕ್ಕೂ ಹೆಚ್ಚು ಅವಧಿಯ ಟೀಸರ್​ನಲ್ಲಿ ಪುಷ್ಪನಿಗಾಗಿ ಎಲ್ಲರೂ ಹುಡುಕುತ್ತಿರುವುದಾಗಿ ತೋರಿಸಲಾಗಿದೆ. ಪುಷ್ಪ ಸತ್ತು ಹೋಗಿದ್ದಾನಾ? ಬದುಕಿದ್ದಾನಾ? ಟೀಸರ್​ನ ಕೊನೆಯಲ್ಲಿ ಅದಕ್ಕೂ ಉತ್ತರವಿದೆ.

ಟೀಸರ್​ನಲ್ಲಿ ಸಿನಿಮಾದ ಕತೆಯ ಬಗ್ಗೆ ಕೆಲವು ಸುಳಿವುಗಳನ್ನು ಬಿಟ್ಟುಕೊಡಲಾಗಿದೆ. ಮೊದಲ ಭಾಗದಲ್ಲಿ ಸಾಮಾನ್ಯ ಕೂಲಿಯವನಾಗಿದ್ದ ಪುಷ್ಪ, ಈಗ ದೊಡ್ಡ ವ್ಯಕ್ತಿಯಾಗಿ ಬೆಳೆದಿದ್ದಾನೆ. ರಕ್ತ ಚಂದನ ಸಾಗಾಣಿಕೆಯಿಂದ ಕೋಟ್ಯಂತರ ಹಣ ಸಂಪಾದನೆ ಮಾಡಿದ್ದಾನೆ. ಆ ಹಣವನ್ನು ಬಡವರ ಏಳ್ಗೆಗಾಗಿ ಖರ್ಚು ಮಾಡಿ ದೊಡ್ಡ ಸಂಖ್ಯೆಯ ಜನರನ್ನು ತನ್ನ ಬೆಂಬಲಿಗರನ್ನಾಗಿ ಮಾಡಿಕೊಂಡಿದ್ದಾನೆ. ಮಕ್ಕಳ ಆಪರೇಷನ್​ಗೆ, ಶಿಕ್ಷಣಕ್ಕೆ ಹಣ ಕೊಟ್ಟಿದ್ದಾನೆ, ನಿರಾಶ್ರಿತರಿಗೆ ಮನೆ ಕಟ್ಟಿಸಿಕೊಟ್ಟಿದ್ದಾನೆ. ಆದರೆ ರಾಜಕಾರಣಿಗಳಿಗೆ, ಪೊಲೀಸರಿಗೆ ಮಾಧ್ಯಮದವರಿಗೆ ಅವನು ಸಂಪಾದಿಸಿರುವ ಕೋಟ್ಯಂತರ ಹಣದ ಮೇಲಷ್ಟೆ ಕಣ್ಣು, ಆ ಹಣವನ್ನು ಅವನು ಏನು ಮಾಡಿದ ಎಂಬುದು ಅವರಿಗೆ ಬೇಕಿಲ್ಲ. ಪೊಲೀಸರು ರಾಜಕಾರಣಿಗಳು ಪುಷ್ಪನ ಬೆನ್ನು ಬಿದ್ದಿದ್ದಾರೆ ಇದರ ಫಲಿತವಾಗಿ ಪುಷ್ಪ ಜೈಲು ಸಹ ಸೇರಿದ್ದಾನೆ, ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ ಸಹ.

ಈಗ ಬಿಡುಗಡೆ ಆಗಿರುವ ಟೀಸರ್​ನಲ್ಲಿ ಅಲ್ಲು ಅರ್ಜುನ್​ರ ಪುಷ್ಪ ಪಾತ್ರದ ಹೊರತಾಗಿ ಇನ್ನಾವ ಪಾತ್ರದ ಪರಿಚಯವೂ ಇಲ್ಲ. ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಅವರುಗಳು ಟೀಸರ್​ನಲ್ಲಿ ಕಾಣಿಸಿಕೊಂಡಿಲ್ಲ, ಮೊದಲ ಭಾಗದಲ್ಲಿ ಪುಷ್ಪನ ಆತ್ಮೀಯ ಗೆಳೆಯನಾಗಿದ್ದ ಕೇಶವನೂ ಇಲ್ಲ. ಟೀಸರ್ ಪೂರ್ಣ ಪುಷ್ಪ ಮಯಂ. ಟೀಸರ್​ ಮೂಲಕ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸುವ ನಿರೀಕ್ಷೆ ಇತ್ತು ಆದರೆ ಅದನ್ನೂ ಮಾಡಲಾಗಿಲ್ಲ.

ಅಂದಹಾಗೆ ಶೇಷಾಚಲಂ ಕಾಡಿನ ಮೂಲೆಯೊಂದರಲ್ಲಿ ಹುಲಿಗಳ ಜಾಡು ತಿಳಿಯಲು ಅರಣ್ಯ ಇಲಾಖೆ ಇರಿಸಿದ್ದ ಟ್ರ್ಯಾಪ್ ಕ್ಯಾಮೆರಾದಲ್ಲಿ ಹುಲಿಯೊಂದು ಕಾಣಿಸಿಕೊಂಡಿದೆ. ಆದರೆ ಆ ಹುಲಿ ವ್ಯಕ್ತಿಯೊಬ್ಬನನ್ನು ಕಂಡು ಎರಡು ಹೆಜ್ಜೆ ಹಿಂದಿರಿಸಿದೆ!

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Fri, 7 April 23

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್