AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pushpa 2: ಕಥಾನಾಯಕನೇ ನಾಪತ್ತೆ; ಎಲ್ಲಿದ್ದಾನೆ ಪುಷ್ಪರಾಜ್​? ಅಲ್ಲು ಅರ್ಜುನ್​ ಜನ್ಮದಿನಕ್ಕೂ ಮುನ್ನ ದೊಡ್ಡ ಟ್ವಿಸ್ಟ್​

Pushpa 2 First Glimpse: ಸುಕುಮಾರ್​ ಅವರು ‘ಪುಷ್ಪ 2’ ಸಿನಿಮಾದ ಕಥೆಗೆ ಟ್ವಿಸ್ಟ್​ ನೀಡುತ್ತಿದ್ದಾರೆ. ಅದರ ಝಲಕ್​ ತೋರಿಸಲು ಒಂದು ಚಿಕ್ಕ ವಿಡಿಯೋ ಹಂಚಿಕೊಳ್ಳಲಾಗಿದೆ.

Pushpa 2: ಕಥಾನಾಯಕನೇ ನಾಪತ್ತೆ; ಎಲ್ಲಿದ್ದಾನೆ ಪುಷ್ಪರಾಜ್​? ಅಲ್ಲು ಅರ್ಜುನ್​ ಜನ್ಮದಿನಕ್ಕೂ ಮುನ್ನ ದೊಡ್ಡ ಟ್ವಿಸ್ಟ್​
ಅಲ್ಲು ಅರ್ಜುನ್
ಮದನ್​ ಕುಮಾರ್​
|

Updated on: Apr 05, 2023 | 6:35 PM

Share

ಅಲ್ಲು ಅರ್ಜುನ್​ ನಟನೆಯ ‘ಪುಷ್ಪ 2’ (Pushpa 2) ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಚಿತ್ರದ ಬಗ್ಗೆ ಅಪ್​ಡೇಟ್​ ತಿಳಿಯಲು ಫ್ಯಾನ್ಸ್​ ಕಾದಿದ್ದರು. ಅಂಥವರಿಗೆಲ್ಲ ಶುಭ ಸಮಾಚಾರ ಸಿಕ್ಕಿದೆ. ಅಲ್ಲು ಅರ್ಜುನ್​ (Allu Arjun) ಹುಟ್ಟುಹಬ್ಬದ ಸಲುವಾಗಿ ಫಸ್ಟ್​ ಗ್ಲಿಂಪ್ಸ್​ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಅದನ್ನು ತಿಳಿಸುವ ಸಲುವಾಗಿ ಇಂದು (ಏಪ್ರಿಲ್​ 5) ಚಿಕ್ಕ ವಿಡಿಯೋ​ ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿದ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. ಏಪ್ರಿಲ್​ 8ರಂದು ಅಲ್ಲು ಅರ್ಜುನ್​ ಬರ್ತ್​ಡೇ (Allu Arjun Birthday) ಆಚರಿಸಲು ಅಭಿಮಾನಿಗಳು ಕಾದಿದ್ದಾರೆ. ಅದಕ್ಕೂ ಒಂದು ದಿನ ಮುನ್ನ ಅಂದರೆ, ಏಪ್ರಿಲ್​ 7ರ ಸಂಜೆ 4 ಗಂಟೆ 5 ನಿಮಿಷಕ್ಕೆ ಫಸ್ಟ್​ ಗ್ಲಿಂಪ್ಸ್​ ಬಿಡುಗಡೆ ಆಗಲಿದೆ.

‘ಪುಷ್ಪ’ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಬ್ಲಾಕ್​ ಬಸ್ಟರ್​ ಆಯಿತು. ಈಗ ‘ಪುಷ್ಪ 2’ ಚಿತ್ರ ಕೂಡ ಅದ್ದೂರಿಯಾಗಿ ತಯಾರಾಗುತ್ತಿದೆ. ಬಹುಭಾಷೆಯಲ್ಲಿ ಫಸ್ಟ್​ ಗ್ಲಿಂಪ್ಸ್​ ಅನಾವರಣ ಮಾಡಲು ಸಕಲ ಸಿದ್ಧತೆ ನಡೆದಿದೆ. ಈ ಮೊದಲು ಯೂಟ್ಯೂಬ್​ನಲ್ಲಿ ಬಹುಭಾಷೆಯ ಆಡಿಯೋ ಆಯ್ಕೆ ಇರಲಿಲ್ಲ. ಪ್ರತಿ ಭಾಷೆಯ ಕಾಂಟೆಂಟ್​ಗಳನ್ನು ಪ್ರತ್ಯೇಕವಾಗಿ ಅಪ್​ಲೋಡ್​ ಮಾಡಬೇಕಿತ್ತು. ಆದರೆ ಈಗ ಮಲ್ಟಿ ಆಡಿಯೋ ಆಯ್ಕೆಯ ಅವಕಾಶ ನೀಡಲಾಗಿದೆ. ‘ಪುಷ್ಪ 2’ ಗ್ಲಿಂಪ್ಸ್​ ಕೂಡ ಅದೇ ರೀತಿಯಲ್ಲಿ ಬಿಡುಗಡೆ ಆಗಲಿದೆ ಎಂಬುದು ವಿಶೇಷ.

ಇದನ್ನೂ ಓದಿ
Image
ಪ್ರಶಾಂತ್ ನೀಲ್ ಜತೆ ಸ್ಪರ್ಧೆಗೆ ಇಳಿಯಲಿದ್ದಾರೆ ‘ಪುಷ್ಪ 2’ ನಿರ್ದೇಶಕ ಸುಕುಮಾರ್​; ಗೆಲ್ಲೋದು ಯಾರು?
Image
ಅಬ್ಬಬ್ಬಾ.. ‘ಪುಷ್ಪ 2’ ಸಿನಿಮಾದ ನಿರ್ದೇಶನಕ್ಕೆ ಸುಕುಮಾರ್​ ಪಡೆಯುವ ಸಂಭಾವನೆ ಇಷ್ಟೊಂದಾ?
Image
‘ಕೆಜಿಎಫ್ 2’ ಎಫೆಕ್ಟ್​; ಹೆಚ್ಚಿತು ‘ಪುಷ್ಪ 2’ ಚಿತ್ರದ ಬೇಡಿಕೆ, ಶೂಟಿಂಗ್​ಗೂ​ ಮೊದಲೇ 700 ಕೋಟಿ ರೂಪಾಯಿ ಡೀಲ್
Image
‘ಪುಷ್ಪ 2’ ಚಿತ್ರದ ಬಗ್ಗೆ ಮೂಡಿದೆ ಎರಡು ಅನುಮಾನ; ಇದಕ್ಕೆಲ್ಲ ಕಾರಣ ಅಲ್ಲು ಅರ್ಜುನ್​ ಹೊಸ ಲುಕ್​

ಈಗ ಬಿಡುಗಡೆ ಆಗಿರುವ ಚಿಕ್ಕ ವಿಡಿಯೋದಲ್ಲಿ ಕಥೆ ಬಗ್ಗೆ ಸಣ್ಣ ಸುಳಿವು ನೀಡಲಾಗಿದೆ. ‘ಗುಂಡಿನಿಂದ ಗಾಯಗೊಂಡಿರುವ ಪುಷ್ಪರಾಜ್​ ತಿರುಪತಿ ಜೈಲಿನಿಂದ ಎಸ್ಕೇಪ್​ ಆಗಿದ್ದಾನೆ. ಈಗ ಎಲ್ಲಿದ್ದಾನೆ ಪುಷ್ಪ?’ ಎಂಬ ಹಿನ್ನೆಲೆ ಧ್ವನಿ ಈ ವಿಡಿಯೋದಲ್ಲಿದೆ. ಆ ಮೂಲಕ ಕಥೆಯ ಬಗ್ಗೆ ಚಿತ್ರತಂಡ ಕೌತುಕ ಸೃಷ್ಟಿ ಮಾಡಿದೆ. ಪುಷ್ಪರಾಜ್​ ಜೈಲಿಗೆ ಹೋಗುವಂತಾಗಿದ್ದು ಹೇಗೆ? ಅಲ್ಲಿಂದ ತಪ್ಪಿಸಿಕೊಳ್ಳಲು ಆತ ಮಾಡಿದ ಸಾಹಸ ಎಂಥದ್ದು? ಇತ್ಯಾದಿ ವಿವರಗಳನ್ನು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

Allu Arjun: ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ಅಲ್ಲು ಅರ್ಜುನ್​; ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸ್ಟಾರ್​ ನಟ

ಸುಕುಮಾರ್​ ಅವರು ‘ಪುಷ್ಪ 2’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್​ ಜೊತೆ ಫಹಾದ್​ ಫಾಸಿಲ್​, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್​ ಮುಂತಾದವರು ನಟಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್​ ಸಂಸ್ಥೆಯು ಅದ್ದೂರಿ ಬಜೆಟ್​ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ಅಲ್ಲು ಅರ್ಜುನ್​ ಅವರ ಜನ್ಮದಿನದ ಪ್ರಯುಕ್ತ ಫಸ್ಟ್​ ಗ್ಲಿಂಪ್ಸ್​ ಬಿಡುಗಡೆ ಆಗಲಿರುವುದರಿಂದ ಅಭಿಮಾನಿಗಳಿಗೆ ಈ ಬಾರಿ ತಮ್ಮ ನೆಚ್ಚಿನ ನಟನ ಬರ್ತ್​ಡೇ ಸಖತ್ ವಿಶೇಷವಾಗಿರಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?