Allu Arjun: ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ಅಲ್ಲು ಅರ್ಜುನ್​; ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸ್ಟಾರ್​ ನಟ

Telugu Film Industry | Tollywood News: 20 ವರ್ಷಗಳ ಸಿನಿಪಯಣದಲ್ಲಿ ಅಲ್ಲು ಅರ್ಜುನ್​ ಅವರು ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

Allu Arjun: ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ಅಲ್ಲು ಅರ್ಜುನ್​; ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸ್ಟಾರ್​ ನಟ
ಅಲ್ಲು ಅರ್ಜುನ್
Follow us
ಮದನ್​ ಕುಮಾರ್​
|

Updated on:Mar 28, 2023 | 3:58 PM

ನಟ ಅಲ್ಲು ಅರ್ಜುನ್​ (Allu Arjun) ಅವರು ಭಾರತೀಯ ಚಿತ್ರರಂಗದಲ್ಲಿ ಸೂಪರ್​ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ. ಅವರಿಗೆ ಭರ್ಜರಿ ಬೇಡಿಕೆ ಇದೆ. ‘ಪುಷ್ಪ’ ಸಿನಿಮಾ (Pushpa Movie) ಬ್ಲಾಕ್​ ಬಸ್ಟರ್​ ಹಿಟ್​ ಆದ ಬಳಿಕ ಅವರು ಪ್ಯಾನ್​ ಇಂಡಿಯಾ ಹೀರೋ ಆಗಿದ್ದಾರೆ. ಇಂದಿಗೆ (ಮಾರ್ಚ್​ 28) ಅಲ್ಲು ಅರ್ಜುನ್​ ಅವರು ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷ ಕಳೆದಿದೆ. ಈ ವಿಶೇಷ ಸಂದರ್ಭದಲ್ಲಿ ಅವರು ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. 2 ದಶಕಗಳ ಕಾಲ ಬಣ್ಣದ ಲೋಕದಲ್ಲಿ ಚಾರ್ಮ್​ ಉಳಿಸಿಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ಈ ಸಾಧನೆ ಮಾಡಿರುವ ಅಲ್ಲು ಅರ್ಜುನ್​ಗೆ ಸೆಲೆಬ್ರಿಟಿಗಳು, ಅಭಿಮಾನಿಗಳು, ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.

‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ಅಲ್ಲು ಅರ್ಜುನ್​ ಅವರು ಬ್ಯುಸಿ ಆಗಿದ್ದಾರೆ. ಟಾಲಿವುಡ್​ನಲ್ಲಿ 20 ವರ್ಷ ಪೂರೈಸಿದ್ದಕ್ಕಾಗಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಒಂದು ಪೋಸ್ಟ್​ ಹಂಚಿಕೊಂಡಿದ್ದಾರೆ. ‘ಚಿತ್ರರಂಗದಲ್ಲಿ ನಾನು ಇಂದು 20 ವರ್ಷಗಳನ್ನು ಪೂರೈಸಿದ್ದೇನೆ. ನನಗೆ ಸಾಕಷ್ಟು ಪ್ರೀತಿ ಸಿಕ್ಕಿದೆ. ಚಿತ್ರರಂಗದ ಎಲ್ಲ ಆಪ್ತರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಅಭಿಮಾನಿಗಳು ಮತ್ತು ಪ್ರೇಕ್ಷಕರು ತೋರಿದ ಪ್ರೀತಿಯಿಂದಲೇ ನಾನು ಇಂದು ಈ ಸ್ಥಾನದಲ್ಲಿದ್ದೇನೆ. ಅವರಿಗೆ ಎಂದೆಂದಿಗೂ ಚಿರಋಣಿ’ ಎಂದು ಅಲ್ಲು ಅರ್ಜುನ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
‘ಸೈಮಾ’ ಅವಾರ್ಡ್ಸ್​ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ ಅಲ್ಲು ಅರ್ಜುನ್​; ವಿಡಿಯೋ ನೋಡಿ
Image
Pushpa 2: ಮತ್ತೆ ಫೀಲ್ಡ್​ಗೆ ಇಳಿದ ಪುಷ್ಪರಾಜ್​; ಇಲ್ಲಿದೆ ರಶ್ಮಿಕಾ, ಅಲ್ಲು ಅರ್ಜುನ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​
Image
Allu Arjun: ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್​ ಲುಕ್​ ಹೀಗಿರುತ್ತಾ? ವೈರಲ್​ ಆಗಿದೆ ಹೊಸ ಫೋಟೋ
Image
ಅಲ್ಲು ಅರ್ಜುನ್​ಗೆ ಬಾಡಿ ಶೇಮಿಂಗ್; ‘ವಡಾಪಾವ್ ಲುಕ್​’ ಎಂದು ಟೀಕಿಸಿದ ಫ್ಯಾನ್ಸ್​

ಇದನ್ನೂ ಓದಿ: ವಿಶ್ ಮಾಡಲಿಲ್ಲ, ಬರ್ತ್​ಡೇ ಪಾರ್ಟಿಗೂ ಬರಲಿಲ್ಲ; ರಾಮ್​ ಚರಣ್ ಬಗ್ಗೆ ಮುನಿಸಿಕೊಂಡ್ರಾ ಅಲ್ಲು ಅರ್ಜುನ್?

ಸೆಲೆಬ್ರಿಟಿಗಳಾದ ಸಮಂತಾ ರುತ್​ ಪ್ರಭು, ರಾಕುಲ್​ ಪ್ರೀತ್​ ಸಿಂಗ್​, ಅರ್ಮಾನ್​ ಮಲಿಕ್​, ಲಕ್ಷ್ಮಿ ಮಂಚು, ಶ್ರೇಯಾ ಘೋಷಾಲ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಅಲ್ಲು ಅರ್ಜುನ್​ ಅವರ ಪೋಸ್ಟ್​ಗೆ ಕಮೆಂಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಸಾವಿರಾರು ಅಭಿಮಾಗಳು ಕಮೆಂಟ್​ ಮಾಡಿದ್ದಾರೆ. ಲಕ್ಷಾಂತರ ಮಂದಿ ಲೈಕ್​ ಮಾಡಿದ್ದಾರೆ.

ಅಲ್ಲು ಅರ್ಜುನ್​ ಅವರು 2003ರ ಮಾರ್ಚ್​ 28ರಂದು ಹೀರೋ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದರು. ಅವರು ನಟಿಸಿದ ಮೊದಲ ಸಿನಿಮಾ ‘ಗಂಗೋತ್ರಿ’ ಅಂದು ತೆರೆಕಂಡಿತು. ಆಗ ಅಲ್ಲು ಅರ್ಜುನ್​ ಅವರಿಗೆ 21ರ ಪ್ರಾಯ. ಮೊದಲ ಚಿತ್ರದಲ್ಲೇ ಅವರು ದೊಡ್ಡ ಗೆಲುವು ಪಡೆದುಕೊಂಡರು. ತೆಲುಗು ಪ್ರೇಕ್ಷಕರ ಮನ ಗೆದ್ದರು. ಬಳಿಕ ಬ್ಯಾಕ್​ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತ ಅಭಿಮಾನಿಗಳಿಗೆ ಹತ್ತಿರವಾದರು.

20 ವರ್ಷಗಳ ಸಿನಿಪಯಣದಲ್ಲಿ ಅಲ್ಲು ಅರ್ಜುನ್​ ಅವರು ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ವೃತ್ತಿಜೀವನದಲ್ಲಿ ಅವರಿಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ‘ಪುಷ್ಪ 2’ ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:58 pm, Tue, 28 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ