‘ಯಲಾ ಕುನ್ನಿ’ ಎನ್ನುತ್ತಾ ಕೋಮಲ್​ ಜೊತೆ ಚಿತ್ರರಂಗಕ್ಕೆ ಕಾಲಿಟ್ಟ ವಜ್ರಮುನಿ ಮೊಮ್ಮಗ ಆಕರ್ಶ್​

Yala Kunni Movie: ಸಿನಿಮಾ ಸಂಭಾಷಣೆಗಳಲ್ಲಿ ವಜ್ರಮುನಿ ಅವರು ‘ಯಲಾಕುನ್ನಿ’ ಎಂಬ ಪದವನ್ನು ಹೆಚ್ಚಾಗಿ ಬಳಸುತ್ತಿದ್ದರು. ಈಗ ಅದೇ ಪದವನ್ನು ಶೀರ್ಷಿಕೆಯಾಗಿ ಬಳಸಿಕೊಂಡಿರುವುದು ವಿಶೇಷ.

‘ಯಲಾ ಕುನ್ನಿ’ ಎನ್ನುತ್ತಾ ಕೋಮಲ್​ ಜೊತೆ ಚಿತ್ರರಂಗಕ್ಕೆ ಕಾಲಿಟ್ಟ ವಜ್ರಮುನಿ ಮೊಮ್ಮಗ ಆಕರ್ಶ್​
ನಿಸರ್ಗ, ಆಕರ್ಶ್, ಕೋಮಲ್
Follow us
ಮದನ್​ ಕುಮಾರ್​
|

Updated on:Mar 28, 2023 | 2:17 PM

ಕನ್ನಡ ಚಿತ್ರರಂಗಕ್ಕೆ ನಟ ವಜ್ರಮುನಿ (Vajramuni) ಅವರು ನೀಡಿದ ಕೊಡುಗೆ ಅಪಾರ. ವಿಲನ್​ ಪಾತ್ರಗಳಲ್ಲಿ ಅವರ ಅಭಿನಯವನ್ನು ಕಂಡು ಪ್ರೇಕ್ಷಕರು ಎಂಜಾಯ್​ ಮಾಡಿದ್ದಾರೆ. ನಟ ಭಯಂಕರನಾಗಿ ಅಬ್ಬರಿಸಿದ ಅವರಿಗೆ ಅವರೇ ಸಾಟಿ. ಈಗ ಅವರ ಮೊಮ್ಮಗ ಆಕರ್ಶ್​ ‘ಯಲಾ ಕುನ್ನಿ’ ಸಿನಿಮಾ (Yala Kunni Movie) ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಆ ಕಾರಣದಿಂದ ವಜ್ರಮುನಿ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಈ ಸಿನಿಮಾ ವಿಶೇಷವಾಗಿದೆ. ಖ್ಯಾತ ನಟ ಕೋಮಲ್​ (Komal Kumar) ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸಲಿದ್ದಾರೆ. ಇತ್ತೀಚೆಗೆ ‘ಯಲಾ ಕುನ್ನಿ’ ಸಿನಿಮಾದ ಮುಹೂರ್ತ ಸಮಾರಂಭ ನಡೆಯಿತು. ವಜ್ರಮುನಿ ಕುಟುಂಬದ ಸದಸ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದರು.

ನಟ ಕೋಮಲ್ ಕುಮಾರ್​ ಅವರು ‘ಯಲಾ ಕುನ್ನಿ’ ಸಿನಿಮಾದಲ್ಲಿ ದ್ವಿಪಾತ್ರ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ಡಬಲ್​ ರೋಲ್​ ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಅವರು ಮಾತನಾಡಿದ್ದಾರೆ. ‘ನಿರ್ದೇಶಕ ಪ್ರದೀಪ್ ಬಹಳ ಚೆನ್ನಾಗಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರದ ಭಾಗಶಃ ಕಥೆ 1981ರ ಕಾಲಘಟ್ಟದಲ್ಲಿ ನಡೆಯುತ್ತದೆ. ಶ್ರೀರಂಗಪಟ್ಟಣ, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಗಂಜಾಂ ಬಳಿ ಇರುವ ಪುರಾತನ ದೇವಾಲಯದಲ್ಲಿ ಹೆಚ್ಚಿನ ದೃಶ್ಯಗಳ ಶೂಟಿಂಗ್​ ಮಾಡಲಿದ್ದೇವೆ. ವಿಶೇಷ ಸೆಟ್ ಸಹ ಹಾಕಲಾಗುವುದು’ ಎಂದಿದ್ದಾರೆ ಕೋಮಲ್ ಕುಮಾರ್.

ಇದನ್ನೂ ಓದಿ: Undenaama Movie: ‘2020’ ಅಲ್ಲ, ಇದು ‘ಉಂಡೆನಾಮ’; ಕೋಮಲ್​ ಚಿತ್ರಕ್ಕೆ ಹೊಸ ಶೀರ್ಷಿಕೆ: ಏ.14ಕ್ಕೆ ಬಿಡುಗಡೆ

ವಜ್ರಮುನಿ ಅವರು ತಮ್ಮ ಸಿನಿಮಾಗಳಲ್ಲಿ ‘ಯಲಾಕುನ್ನಿ’ ಎಂಬ ಪದವನ್ನು ಹೆಚ್ಚಾಗಿ ಬಳಸುತ್ತಿದ್ದರು. ಈಗ ಅದೇ ಪದವನ್ನು ಸಿನಿಮಾದ ಶೀರ್ಷಿಕೆಯಾಗಿ ಬಳಸಿಕೊಂಡಿರುವುದು ವಿಶೇಷ. ಈ ಟೈಟಲ್​ಗೆ ‘ಮೇರಾ ನಾಮ್ ವಜ್ರಮುನಿ’ ಎಂಬ ಅಡಿಬರಹ ಇದೆ. ವಜ್ರಮುನಿ ಅವರ ಪತ್ನಿ ಲಕ್ಷ್ಮೀ ಅವರು ಕ್ಯಾಮೆರಾ ಚಾಲನೆ ಮಾಡಿದರು. ವಜ್ರಮುನಿ ಅವರ ಹಿರಿಯ ಪುತ್ರ ವಿಶ್ವನಾಥ್ ಅವರು ಮೊದಲ ಸನ್ನಿವೇಶಕ್ಕೆ ಆರಂಭಫಲಕ ತೋರಿದರು. ಕಿರಿಯ ಪುತ್ರ ಜಗದೀಶ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದರು.

ಇದನ್ನೂ ಓದಿ: ನನ್ನ ಟೈಮ್​ ಸರಿ ಇರಲಿಲ್ಲ, ಹೀಗಾಗಿ ನಟನೆ ಬಿಟ್ಟಿದ್ದೆ: ಕೋಮಲ್ ಕುಮಾರ್

ಹೊಸ ನಟಿ ನಿಸರ್ಗ ಅವರು ‘ಯಲಾ ಕುನ್ನಿ’ ಚಿತ್ರಕ್ಕೆ ನಾಯಕಿ.‌ ಮಹೇಶ್ ಗೌಡ ಬಂಡವಾಳ ಹೂಡುತ್ತಿದ್ದಾರೆ. ಯತಿರಾಜ್ ಜಗ್ಗೇಶ್, ‘ಫ್ರೆಂಚ್ ಬಿರಿಯಾನಿ’ ಖ್ಯಾತಿಯ ಮಹಾಂತೇಶ್, ಜಯಸಿಂಹ ಮುಸುರಿ, ಅರವಿಂದ್ ರಾವ್, ಮಂಜು ಪಾವಗಡ, ರಾಜು ತಾಳಿಕೋಟೆ, ಶಿವರಾಜ್, ಬಿರಾದರ್, ವೆಂಕಟೇಶ್ ಪ್ರಸಾದ್, ಉಮೇಶ್ ಸಕ್ಕರೆನಾಡು, ಅನಿಲ್ ಯಾದವ್ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಧರ್ಮವಿಶ್ ಸಂಗೀತ ‌ನಿರ್ದೇಶನ, ಉದಯ್ ಲೀಲಾ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಹಾಗೂ ವಿನೋದ್ ಸಾಹಸ ನಿರ್ದೇಶನ ಮಾಡಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:17 pm, Tue, 28 March 23

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ