AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ ಮಾಡಲಿಲ್ಲ, ಬರ್ತ್​ಡೇ ಪಾರ್ಟಿಗೂ ಬರಲಿಲ್ಲ; ರಾಮ್​ ಚರಣ್ ಬಗ್ಗೆ ಮುನಿಸಿಕೊಂಡ್ರಾ ಅಲ್ಲು ಅರ್ಜುನ್?

ಈ ಮೊದಲು ಕೂಡ ಅಲ್ಲು ಅರ್ಜುನ್ ಇದೇ ರೀತಿ ನಡೆದುಕೊಂಡಿದ್ದಿದೆ. ಅದಕ್ಕೆ ಅವರು ಸ್ಪಷ್ಟನೆ ನೀಡುವ ಕೆಲಸವನ್ನೂ ಮಾಡಿದ್ದರು.

ವಿಶ್ ಮಾಡಲಿಲ್ಲ, ಬರ್ತ್​ಡೇ ಪಾರ್ಟಿಗೂ ಬರಲಿಲ್ಲ; ರಾಮ್​ ಚರಣ್ ಬಗ್ಗೆ ಮುನಿಸಿಕೊಂಡ್ರಾ ಅಲ್ಲು ಅರ್ಜುನ್?
ಚಿರಂಜೀವಿ-ಅಲ್ಲು ಅರ್ಜುನ್
ರಾಜೇಶ್ ದುಗ್ಗುಮನೆ
|

Updated on: Mar 28, 2023 | 10:46 AM

Share

ರಾಮ್ ಚರಣ್ (Ram Charan)ಅವರು ಮಾರ್ಚ್​ 27ರಂದು ಅದ್ದೂರಿಯಾಗಿ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬಂದಿದೆ. ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು, ಕುಟುಂಬದವರು ಬರ್ತ್​ಡೇ ವಿಶ್ ಮಾಡಿದ್ದಾರೆ. ಅವರ ನಟನೆಯ 15ನೇ ಚಿತ್ರಕ್ಕೆ ‘ಗೇಮ್ ಚೇಂಜರ್​’ (Game Changer Movie) ಟೈಟಲ್ ಇಡಲಾಗಿದೆ. ಬರ್ತ್​ಡೇ ದಿನವೇ ಈ ಟೈಟಲ್ ರಿವೀಲ್ ಆಗಿದೆ. ಸೆಲೆಬ್ರಿಟಿಗಳಿಗೋಸ್ಕರ ರಾಮ್ ಚರಣ್ ಅವರು ಅದ್ದೂರಿ ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಗೆ ಅಲ್ಲು ಅರ್ಜುನ್ ಬರಲೇ ಇಲ್ಲ. ಅಷ್ಟೇ ಅಲ್ಲ, ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದೇ ಒಂದು ವಿಶ್ ಕೂಡ ಮಾಡಿಲ್ಲ.

ರಾಮ್ ಚರಣ್ ಅವರು ಅದ್ದೂರಿಯಾಗಿ ಬರ್ತ್​ಡೇ ಪಾರ್ಟಿ ಆಯೋಜನೆ ಮಾಡಿದ್ದರು. ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದ್ದರಿಂದ ಈ ಬಾರಿಯ ಬರ್ತ್​ಡೇ ಅದ್ದೂರಿಯಾಗೇ ನಡೆದಿದೆ. ಈ ಪಾರ್ಟಿಗೆ ಪ್ರಶಾಂತ್ ನೀಲ್, ರಾಣಾ ದಗ್ಗುಬಾಟಿ, ಕಾಜಲ್ ಅಗರ್​ವಾಲ್​ ಸೇರಿ ತೆಲುಗು ಇಂಡಸ್ಟ್ರಿಯ ಅನೇಕರು ಇಲ್ಲಿಗೆ ಆಗಮಿಸಿದ್ದರು. ಆದರೆ, ಅಲ್ಲು ಅರ್ಜುನ್ ಗೈರಾಗಿದ್ದರು.

ಇದನ್ನೂ ಓದಿ: Game Changer: ರಾಮ್ ಚರಣ್ ಹೊಸ ಚಿತ್ರದ ಟೈಟಲ್ ರಿವೀಲ್​; ‘ಗೇಮ್ ಚೇಂಜರ್’ ಆದ ನಟ

ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಸಹೋದರಿಯನ್ನು ಚಿರಂಜೀವಿ ಮದುವೆ ಆಗಿದ್ದಾರೆ. ಹೀಗಾಗಿ, ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ಸಂಬಂಧಿಗಳು. ಆದರೆ, ರಾಮ್ ಚರಣ್ ಜನ್ಮದಿನದ ಬಗ್ಗೆ ಅವರು ಒಂದೇ ಒಂದು ಟ್ವೀಟ್ ಕೂಡ ಮಾಡದೇ ಇರುವುದು ಅಚ್ಚರಿ ಮೂಡಿಸಿದೆ. ಕೊನೆಪಕ್ಷ ಅಲ್ಲು ಅರ್ಜುನ್ ಪಾರ್ಟಿಗಾದರೂ ಬರಬಹುದು ಎಂದು ಭಾವಿಸಿದ್ದರು. ಆದರೆ, ಹಾಗಾಗಿಲ್ಲ.

ಇದನ್ನೂ ಓದಿ: ಪ್ರಭಾಸ್, ಅಲ್ಲು ಅರ್ಜುನ್ ಬಳಿಕ ಜೂ ಎನ್​ಟಿಆರ್ ಮೇಲೆ ಕಣ್ಣಿಟ್ಟ ಟಿ-ಸೀರೀಸ್

ಈ ಮೊದಲು ಕೂಡ ಅಲ್ಲು ಅರ್ಜುನ್ ಇದೇ ರೀತಿ ನಡೆದುಕೊಂಡಿದ್ದಿದೆ. ಅದಕ್ಕೆ ಅವರು ಸ್ಪಷ್ಟನೆ ನೀಡುವ ಕೆಲಸವನ್ನೂ ಮಾಡಿದ್ದರು. ‘ಮೆಗಾ ಕುಟುಂಬದವರು ತಮ್ಮ ಫ್ಯಾಮಿಲಿ ಇವೆಂಟ್​ನಲ್ಲಿ ಭಾಗಿ ಆಗುವುದಿಲ್ಲ. ಹಾಗೆ ಮಾಡಿದರೆ ಈ ಗ್ಯಾಂಗ್ ಸೆಲ್ಫ್ ಪ್ರಮೋಟ್ ಮಾಡಿಕೊಳ್ಳುತ್ತದೆ ಎಂದು ಜನರು ಭಾವಿಸುತ್ತಾರೆ. ಈ ಕಾರಣಕ್ಕೆ ನಾನಂತೂ ಈ ರೀತಿ ಕಾರ್ಯಕ್ರಮದಲ್ಲಿ ಭಾಗಿ ಆಗಲ್ಲ’ ಎಂದು ಹೇಳಿದ್ದರು. ಈ ವಿಚಾರದಲ್ಲಿ ರಾಮ್ ಚರಣ್ ಫ್ಯಾನ್ಸ್ ಮತ್ತೊಂದು ಪ್ರಶ್ನೆ ಎತ್ತಿದ್ದಾರೆ. ‘ಪಾರ್ಟಿಗೆ ಅಂತೂ ಬರೋಕೆ ಆಗಲ್ಲ. ಬರ್ತ್​ಡೇ ವಿಶ್ ಮಾಡೋಕೆ ಸಮಸ್ಯೆ ಏನು’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಈ ಮೊದಲು ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಾಗ ಒಂದು ದಿನ ತಡವಾಗಿ ಅಲ್ಲು ಅರ್ಜುನ್ ಶುಭಾಶಯ ತಿಳಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ