ಬೊಮ್ಮಾಯಿಗೆ ಮಾಮ ಅಂತ ಸುದೀಪ್ ಕರೆಯೋದು ಯಾಕೆ? ಇಲ್ಲಿದೆ ಕಿಚ್ಚ ನೀಡಿದ ವಿವರಣೆ
Kichcha Sudeep: ಅನೇಕ ಸಂದರ್ಭಗಳಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ‘ಮಾಮ’ ಎಂದು ಸುದೀಪ್ ಕರೆದಿದ್ದುಂಟು. ಆ ಬಗ್ಗೆ ಕಿಚ್ಚ ಸ್ಪಷ್ಟನೆ ನೀಡಿದ್ದಾರೆ.
ಬಸವರಾಜ ಬೊಮ್ಮಾಯಿ ಮತ್ತು ಕಿಚ್ಚ ಸುದೀಪ್ (Kichcha Sudeep) ಅವರ ಇಂದು (ಏಪ್ರಿಲ್ 5) ಜೊತೆಯಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಪ್ರೆಸ್ಮೀಟ್ ಆರಂಭ ಆಗುತ್ತಿದ್ದಂತೆಯೇ ಸುದೀಪ್ ಅವರು ಒಂದು ವಿಷಯದ ಬಗ್ಗೆ ಸ್ಪಷ್ಟನೆ ನೀಡಿದರು. ಅನೇಕ ಸಂದರ್ಭಗಳಲ್ಲಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ‘ಮಾಮ’ ಎಂದು ಸುದೀಪ್ ಕರೆದಿದ್ದುಂಟು. ಆ ಬಗ್ಗೆ ಕಿಚ್ಚ ಮಾತನಾಡಿದರು. ‘ತಪ್ಪು ತಿಳಿಯಬೇಡಿ. ಇವರು ನಮಗೆ ಮಾನ್ಯ ಮುಖ್ಯಮಂತ್ರಿಗಳು. ಆದರೆ ನಾನು ಚಿಕ್ಕ ವಯಸ್ಸಿನಿಂದ ನೋಡಿಕೊಂಡು ಬಂದಿದ್ದರಿಂದ ಅವರನ್ನು ಮಾಮ ಅಂತಾನೇ ಕರೆಯುವುದು. ಈಗಲೂ ನಾನು ಅವರನ್ನು ಗೌರವದಿಂದ ಹಾಗೆಯೇ ಕರೆಯುತ್ತೇನೆ. ದಯವಿಟ್ಟು ಬೇರೆ ರೀತಿ ತೆಗೆದುಕೊಳ್ಳಬೇಡಿ’ ಎಂದು ಸುದೀಪ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Apr 05, 2023 04:36 PM
Latest Videos