AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmika Mandanna: ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ರಶ್ಮಿಕಾ ಪ್ರೀತಿಯ ಸಂದೇಶ

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ರಶ್ಮಿಕಾ ಮಂದಣ್ಣ ತಮ್ಮ ಅಭಿಮಾನಿಗಳು, ಪ್ರೀತಿಪಾತ್ರರಿಗಾಗಿ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

Rashmika Mandanna: ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ರಶ್ಮಿಕಾ ಪ್ರೀತಿಯ ಸಂದೇಶ
ರಶ್ಮಿಕಾ ಮಂದಣ್ಣ
ಮಂಜುನಾಥ ಸಿ.
|

Updated on: Apr 05, 2023 | 7:52 PM

Share

ಕನ್ನಡ ಚಿತ್ರರಂಗದಿಂದ ಸಿನಿಪಯಣ ಆರಂಭಿಸಿ ಇದೀಗ ಪ್ಯಾನ್ ಇಂಡಿಯಾ (Pan India) ಸ್ಟಾರ್ ಆಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣಗೆ (Rashmika Mandanna) ಇಂದು (ಏಪ್ರಿಲ್ 05) ಹುಟ್ಟುಹಬ್ಬದ (Birthday) ಸಂಭ್ರಮ. ಹಲವು ಸಿನಿಮಾ ತಾರೆಯರು ಹಾಗೂ ಅಭಿಮಾನಿಗಳು ರಶ್ಮಿಕಾರ ಹುಟ್ಟುಹಬ್ಬದಂದು ಶುಭ ಕೋರಿದ್ದಾರೆ. ನಟ ರಕ್ಷಿತ್ ಶೆಟ್ಟಿಯ ನಿರ್ಮಾಣ ಸಂಸ್ಥೆ ವತಿಯಿಂದ ಸಹ ರಶ್ಮಿಕಾಗೆ ಶುಭಾಶಯ ಕೋರಲಾಗಿದೆ. ಗೆಳೆಯರು ಹಾಗೂ ಅಭಿಮಾನಿಗಳ ಶುಭಾಶಯಗಳಿಂದ ಖುಷ್ ಆಗಿರುವ ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗಾಗಿ ವಿಡಿಯೋ ಸಂದೇಶವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಅಭಿಮಾನಿಗಳನ್ನು ‘ಡಾರ್ಲಿಂಗ್ ಲವ್ಸ್’ ಎಂದು ಕರೆದಿರುವ ನಟಿ ರಶ್ಮಿಕಾ ಮಂದಣ್ಣ, ”ನಿಮ್ಮೆಲ್ಲರ ಪ್ರೀತಿಯ ಸಂದೇಶಗಳನ್ನು ನೋಡುತ್ತಿದ್ದೇನೆ. ಒಂದು ನೆನಪಿಡಿ ನೀವು ನನ್ನನ್ನು ಎಷ್ಟು ಪ್ರೀತಿಸುತ್ತಿದ್ದೀರೋ ನಾನು ನಿಮ್ಮನ್ನು ಅಷ್ಟೆ ಪ್ರೀತಿಸುತ್ತೇನೆ. ನೀವೆಲ್ಲರೂ ನನ್ನ ಈ ದಿನವನ್ನು ಬಹಳ ವಿಶೇಷಗೊಳಿಸಿದ್ದೀರಿ. ಈ ವಿಶೇಷ ದಿನದಂದು ನಾನು ನಿಮ್ಮನ್ನು ಹೇಗಿದ್ದೀರೆಂದು ಕೇಳಲು ಬಯಸುತ್ತೀನಿ. ನಿಮ್ಮ ಆರೋಗ್ಯ ಹೇಗಿದೆ? ನಿಮ್ಮ ಹೃದಯ ಹೇಗಿದೆ? ನೀವು ಖುಷಿಯಾಗಿದ್ದೀರಿ, ನಿಮ್ಮ ದಿನ ಚೆನ್ನಾಗಿ ನಡೆಯುತ್ತಿದೆ ಎಂದರೆ ಬಹಳ ಸಂತೋಶ. ನಿಮ್ಮ ಈ ಖುಷಿ ಸದಾ ಹೀಗೆಯೇ ಇರಲಿ ಎಂದು ನಾನು ಆಶಿಸುತ್ತೇನೆ” ಎಂದಿದ್ದಾರೆ ರಶ್ಮಿಕಾ.

ಮುಂದುವರೆದು, ”ಆದರೆ ನಿಮ್ಮ ದಿನ ಚೆನ್ನಾಗಿ ನಡೆಯುತ್ತಿಲ್ಲವೆಂದರೆ ನೆನಪಿಟ್ಟುಕೊಳ್ಳಿ, ಈ ಕೆಟ್ಟ ಸಮಯ ಕಳೆದು ಹೋಗುತ್ತದೆ. ಯಾವುದೇ ಸಮಯವಾದರೂ ಕಳೆದು ಹೋಗುತ್ತದೆ ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದರಿಂದಲೇ ನನ್ನ ಕೆಟ್ಟ ದಿನಗಳನ್ನು ನಾನು ಸುಲಭವಾಗಿ ಕಳೆಯಲು ಸಾಧ್ಯವಾಯಿತು. ನಾನು ನಿಮ್ಮನ್ನು ಬಹಳ ಕೇರ್ ಮಾಡುತ್ತೀನಿ ಹಾಗಾಗಿ ನಿಮ್ಮ ಖುಷಿ-ದುಃಖಗಳು ನನ್ನ ಖುಷಿ ಹಾಗೂ ದುಃಖವೂ ಆಗಿದೆ. ಹಾಗಾಗಿ ನೆನಪಿಟ್ಟುಕೊಳ್ಳಿ, ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರೋ ನಾನು ನಿಮ್ಮನ್ನು ಅಷ್ಟೆ ಪ್ರೀತಿಸುತ್ತೀನಿ. ನಾನು ಇಂದು ಏನಾಗಿದ್ದೇನೋ ಆ ವ್ಯಕ್ತಿಯನ್ನಾಗಿ ಮಾಡಿದ ನಿಮ್ಮೆಲ್ಲರಿಗೂ ಧನ್ಯವಾದ” ಎಂದಿದ್ದಾರೆ.

‘ಯಾವ ವ್ಯಕ್ತಿ ಅಥವಾ ವಿಷಯ ನಿಮಗೆ ಖುಷಿ ಕೊಡುತ್ತದೆಯೋ ಅದರೊಟ್ಟಿಗೆ ನೀವಿರಿ. ನಾನು ಇಂದು ಈ ಯಶಸ್ವಿ ಹಾಗೂ ಶಕ್ತಿಯುತ ಮಹಿಳೆಯಾಗುವಲ್ಲಿ ನಿಮ್ಮ ಪಾತ್ರದೊಡ್ಡದಿದೆ. ನನ್ನ ಈ ಜರ್ನಿಯಲ್ಲಿ ನೀವು ಬಹಳ ಪ್ರಮುಖ ಪಾತ್ರವಹಿಸಿದ್ದೀರಿ. ನಾನು ನಿಮ್ಮನ್ನು ಸದಾ ಪ್ರೀತಿಸುತ್ತೇನೆ. ಎಲ್ಲರೂ ಖುಷಿಯಾಗಿರೋಣ, ಏಕೆಂದರೆ ಜೀವನ ಇರುವುದು ಒಂದು ಮಾತ್ರವೇ’ ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ದಿನದಂದು ಅವರ ನಟನೆಯ ಕೆಲವು ಸಿನಿಮಾ ಘೋಷಣೆ, ಪೋಸ್ಟರ್ ಬಿಡುಗಡೆಗಳು ಆಗಿವೆ. ರಶ್ಮಿಕಾ ಮಂದಣ್ಣ ನಟಿಸುತ್ತರುವ ಪುಷ್ಪ 2 ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ನಿತಿನ್ ಜೊತೆ ನಟಿಸುತ್ತಿರುವ ಸಿನಿಮಾದ ಪೋಸ್ಟರ್ ಸಹ ಬಿಡುಗಡೆ ಆಗಿದೆ. ಇದರ ಜೊತೆಗೆ ರೈನ್​ಬೋ ಹೆಸರಿನ ಹೊಸ ಸಿನಿಮಾದಲ್ಲಿಯೂ ರಶ್ಮಿಕಾ ನಟಿಸುತ್ತಿದ್ದಾರೆ. ಬಾಲಿವುಡ್​ನಲ್ಲಿ ರಣ್​ಬೀರ್ ಕಪೂರ್ ಜೊತೆಗೆ ಅನಿಮನ್ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇನ್ನು ಬಾಲಿವುಡ್​ನಲ್ಲಿಯೇ ಹೊಸ ಸಿನಿಮಾವನ್ನು ಶೀಘ್ರವೇ ಘೋಷಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!