AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದ ಈ ನಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್: ಯಾರು ಗುರುತಿಸಬಲ್ಲಿರಾ?

ಕನ್ನಡದ ಈ ನಟಿ ಈಗ ಪ್ಯಾನ್ ಇಂಡಿಯಾ ನಟಿ. ಬಿಡುಗಡೆ ಆಗಿರುವುದು ಎರಡೇ ಸಿನಿಮಾ ಆದರೂ ಭಾರಿ ಜನಪ್ರಿಯತೆ ಗಳಿಸಿದ್ದಾರೆ. ಈ ನಟಿ ಯಾರೆಂದು ಗುರುತಿಸಬಲ್ಲಿರಾ?

ಕನ್ನಡದ ಈ ನಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್: ಯಾರು ಗುರುತಿಸಬಲ್ಲಿರಾ?
ಈ ನಟಿ ಯಾರು?
ಮಂಜುನಾಥ ಸಿ.
|

Updated on: Mar 17, 2023 | 9:34 PM

Share

ಸಿನಿಮಾ (Movie) ನಟ-ನಟಿಯರ ಬಾಲ್ಯದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿರುತ್ತವೆ. ಆದರೆ ಇಲ್ಲಿ ನೀಡಲಾಗಿರುವುದು ನಟಿಯೊಬ್ಬರ ಕಾಲೇಜಿನ ಸಮಯದ ಚಿತ್ರಗಳು. ಕನ್ನಡದವರೇ ಆದ ಈ ನಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್. ಈ ನಟಿ ನಟಿಸಿರುವ ಕೇವಲ ಎರಡು ಸಿನಿಮಾಗಳಷ್ಟೆ ಈವರೆಗೆ ಬಿಡುಗಡೆ ಆಗಿದೆ. ಆದರೂ ಕನ್ನಡದ ಮನೆ ಮಾತಾಗುವಷ್ಟು ಖ್ಯಾತಿ ಗಳಿಸಿದ್ದಾರೆ. ಕನ್ನಡ ಜೊತೆಗೆ ಇದೀಗ ಹಿಂದಿ ಭಾಷೆಯಲ್ಲಿಯೂ ನಟಿಸುತ್ತಿದ್ದಾರೆ. ತೆಲುಗು, ತಮಿಳಿಗೂ ಹಾರುವ ಸಾಧ್ಯತೆಗಳು ಇವೆ.

ಎರಡೇ ಸಿನಿಮಾಕ್ಕೆ ದೊಡ್ಡ ಮಟ್ಟದ ಖ್ಯಾತಿ ಗಳಿಸಿರುವ ನಟಿ ಸಪ್ತಮಿ ಗೌಡ ಅವರ ಕಾಲೇಜಿನ ಸಮಯದ ಚಿತ್ರಗಳಿವು. ಈಗಿರುವುದಕ್ಕಿಂತಲೂ ಬಹಳ ಭಿನ್ನವಾಗಿ ಸಪ್ತಮಿ ಗೌಡ ಆಗ ಕಾಣುತ್ತಿದ್ದರು. ಅವರ ಹಳೆಯ ಚಿತ್ರಗಳ ಮತ್ತೊಂದು ವಿಶೇಷವೆಂದರೆ ಸಪ್ತಮಿ ಗೌಡ ನಕ್ಕಾಗ ಒಂದು ರೀತಿ, ನಗದೇ ಇದ್ದಾಗ ಒಂದು ರೀತಿ ಕಾಣುತ್ತಾರೆ. ಕಾಲೇಜು ದಿನಗಳಲ್ಲಿ ಅತ್ಯುತ್ತಮ ಈಜುಪಟುವಾಗಿದ್ದ ಸಪ್ತಮಿ ಗೌಡ ಇಂದಿಗಿಂತಲೂ ಹೆಚ್ಚು ತೆಳ್ಳಗಿದ್ದರು ಸಹ.

ಸಪ್ತಮಿ ಗೌಡ ತಮ್ಮ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಕಾಲೇಜು ದಿನಗಳಿಂದಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸಪ್ತಮಿ ಗೌಡ ಆಗಿನಿಂದಲೂ ತಮ್ಮ ಚಿತ್ರಗಳನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ. ಸ್ಟಾರ್ ಆದ ಮೇಲೆ ಆ ಚಿತ್ರಗಳನ್ನು ಡಿಲೀಟ್ ಮಾಡಿಲ್ಲ. ಸಪ್ತಮಿಯ ಇನ್​ಸ್ಟಾಗ್ರಾಂ ಖಾತೆಯನ್ನು ತುಸು ಡೀಪ್​ ಆಗಿ ಸ್ಕ್ರೋಲ್ ಮಾಡಿದರೆ ಅವರ ಕಾಲೇಜು ದಿನದ ಚಿತ್ರಗಳು ಸಿಗುತ್ತವೆ. ಕಾಲೇಜು ದಿನದ ಸೆಲ್ಫಿಗಳ ಜೊತೆಗೆ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ, ಪ್ರಶಸ್ತಿ ಗೆದ್ದ ಚಿತ್ರಗಳನ್ನು ಸಹ ಸಪ್ತಮಿ ಹಂಚಿಕೊಂಡಿದ್ದಾರೆ.

ದುನಿಯಾ ಸೂರಿ ನಿರ್ದೇಶನದ ಪಾಪ್​ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಸಪ್ತಮಿ ಗೌಡ ದೊಡ್ಡ ಹೆಸರು ಗಳಿಸಿದ್ದು ಮಾತ್ರ ಕಾಂತಾರ ಸಿನಿಮಾದ ಮೂಲಕ. ಕಾಂತಾರ ಸಿನಿಮಾದಲ್ಲಿ ಸಪ್ತಮಿ ನಿರ್ವಹಿಸಿದ್ದ ಲೀಲಾ ಪಾತ್ರ ಭಾರಿ ದೊಡ್ಡ ಹಿಟ್ ಆಗಿದ್ದು, ಕಾಂತಾರ ಬಳಿಕ ಒಂದರ ಹಿಂದೊಂದು ಅವಕಾಶಗಳನ್ನು ಸಪ್ತಮಿ ಬಾಚಿಕೊಳ್ಳುತ್ತಿದ್ದಾರೆ. ಹಿಂದಿಯಲ್ಲಿ ವ್ಯಾಕ್ಸಿನ್ ವಾರ್ ಹೆಸರಿನ ಸಿನಿಮಾದಲ್ಲಿ ನಟಿಸಿ ಬಂದಿದ್ದಾರೆ ಸಪ್ತಮಿ ಈ ಸಿನಿಮಾವನ್ನು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್ ನಟನೆಯ ಸಿನಿಮಾದಲ್ಲಿಯೂ ಸಪ್ತಮಿ ನಾಯಕಿಯಾಗಿ ನಟಿಸಲಿದ್ದಾರೆ. ಯುವರಾಜ್ ಕುಮಾರ್ ನಟನೆಯ ಮೊದಲ ಸಿನಿಮಾ ಯುವನಲ್ಲಿಯೂ ಸಪ್ತಮಿಯೇ ನಾಯಕಿ. ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾದಲ್ಲಿಯೂ ಸಪ್ತಮಿ ಇರಲಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು