Kabzaa Movie Collection: ‘ಕಬ್ಜ’ ಚಿತ್ರ ಮೊದಲ ದಿನ ಮಾಡಿತು ಭರ್ಜರಿ ಕಲೆಕ್ಷನ್​; ಮೂರು ಸ್ಟಾರ್ಸ್​ ಅಬ್ಬರಕ್ಕೆ ಬಾಕ್ಸ್ ಆಫೀಸ್ ಉಡೀಸ್

Rajesh Duggumane

| Edited By: ಗಣಪತಿ ಶರ್ಮ

Updated on:Mar 18, 2023 | 11:30 AM

ಸಿನಿಮಾ ಬಗ್ಗೆ ಒಳ್ಳೆಯ ಟಾಕ್ ಶುರುವಾಗಿದ್ದರಿಂದ ಬಹುತೇಕ ಶೋಗಳು ಹೌಸ್​ಫುಲ್ ಪ್ರದರ್ಶನ ಕಂಡವು. ಇದರಿಂದ ಸಿನಿಮಾದ ಮೊದಲ ದಿನದ ಗಳಿಕೆ ಜೋರಾಗಿದೆ.

Kabzaa Movie Collection: ‘ಕಬ್ಜ’ ಚಿತ್ರ ಮೊದಲ ದಿನ ಮಾಡಿತು ಭರ್ಜರಿ ಕಲೆಕ್ಷನ್​; ಮೂರು ಸ್ಟಾರ್ಸ್​ ಅಬ್ಬರಕ್ಕೆ ಬಾಕ್ಸ್ ಆಫೀಸ್ ಉಡೀಸ್
ಸುದೀಪ್​, ಉಪೇಂದ್ರ, ಶಿವಣ್ಣ

ಮಾರ್ಚ್​ 17ರಂದು ರಿಲೀಸ್ ಆದ ‘ಕಬ್ಜ’ ಸಿನಿಮಾ (Kabzaa Movie Collection) ಮೊದಲ ದಿನದ ಕಲೆಕ್ಷನ್ ಎಷ್ಟಾಗಲಿದೆ ಎನ್ನುವ ಕುತೂಹಲ ಅನೇಕರಲ್ಲಿತ್ತು. ಈಗ ಇದಕ್ಕೆ ಉತ್ತರ ಸಿಕ್ಕಿದೆ. ಸಿನಿಮಾ ಮೊದಲ ದಿನ ಅಬ್ಬರದ ಕಲೆಕ್ಷನ್ ಮಾಡಿದೆ. ಮೇಕಿಂಗ್, ಮಲ್ಟಿ ಸ್ಟಾರರ್ ಸಿನಿಮಾ ಎಂಬಿತ್ಯಾದಿ ವಿಚಾರಗಳು ಸಿನಿಮಾದಲ್ಲಿ ಕೆಲಸ ಮಾಡಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರದ ಗಳಿಕೆ ನೋಡಿ ಅನೇಕರಿಗೆ ಅಚ್ಚರಿ ಆಗಿದೆ. ಈ ಚಿತ್ರದಿಂದ ನಿರ್ಮಾಪಕ ಆರ್. ಚಂದ್ರು (R Chandru) ಅವರು ಒಳ್ಳೆಯ ಲಾಭ ಕಂಡಿದ್ದಾರೆ.

‘ಕಬ್ಜ’ ಸಿನಿಮಾ ಭರ್ಜರಿ ಓಪನಿಂಗ್ ಪಡೆಯಿತು. ಈ ಚಿತ್ರಕ್ಕೆ ಯಾವುದೇ ಫ್ಯಾನ್​ಶೋ ಇರಲಿಲ್ಲ. ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಿನಿಮಾ ಶೋ ಆರಂಭಗೊಂಡಿತು. ಸಿನಿಮಾ ಬಗ್ಗೆ ಒಳ್ಳೆಯ ಟಾಕ್ ಶುರುವಾಗಿದ್ದರಿಂದ ಬಹುತೇಕ ಶೋಗಳು ಹೌಸ್​ಫುಲ್ ಪ್ರದರ್ಶನ ಕಂಡವು. ಇದರಿಂದ ಸಿನಿಮಾದ ಮೊದಲ ದಿನದ ಗಳಿಕೆ ಜೋರಾಗಿದೆ. ಕರ್ನಾಟಕದಲ್ಲಿ 20 ಕೋಟಿ ರೂಪಾಯಿ ಹಾಗೂ ವಿಶ್ವಾದ್ಯಂತ 54 ಕೋಟಿ ರೂ. ಗಳಿಕೆ ಮಾಡಿದೆ ಎಂದು ತಂಡ ಹೇಳಿಕೊಂಡಿದೆ.

ಇದನ್ನೂ ಓದಿ: Kabzaa 2: ನಿರೀಕ್ಷೆ ಮೂಡಿಸಿದ ‘ಕಬ್ಜ 2’; ಕಥೆ ಇನ್ನೂ ಬಾಕಿ ಇದೆ ಎಂದ ಆರ್. ಚಂದ್ರು

ಇಂದು (ಮಾರ್ಚ್ 18) ಹಾಗೂ ನಾಳೆ (ಮಾರ್ಚ್​ 19) ವೀಕೆಂಡ್ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ ಇದೆ. ಹೀಗಾಗಿ, ಸಿನಿಮಾ ಅಬ್ಬರದ ಕಲೆಕ್ಷನ್ ಮಾಡೋದು ಪಕ್ಕಾ ಎನ್ನಲಾಗುತ್ತಿದೆ. ಮುಂದಿನ ಬುಧವಾರ (ಮಾರ್ಚ್​ 22) ಯುಗಾದಿ ಹಬ್ಬ ಇದ್ದು, ಆ ಪ್ರಯುಕ್ತ ಸರ್ಕಾರಿ ರಜೆ ಇದೆ. ಅದು ಕೂಡ ಚಿತ್ರಕ್ಕೆ ವರದಾನವಾಗಿದೆ. ಕನ್ನಡದಲ್ಲಿ ಯಾವುದೇ ದೊಡ್ಡ ಬಜೆಟ್​ ಚಿತ್ರಗಳು ರಿಲೀಸ್ ಆಗುತ್ತಿಲ್ಲ. ಇದು ಕೂಡ ಚಿತ್ರಕ್ಕೆ ಸಹಕಾರಿ ಆಗಿದೆ.

ಇದನ್ನೂ ಓದಿ: ಆನ್​ಲೈನ್​ ಪ್ಲಾಟ್​ಫಾರ್ಮ್​​ನಲ್ಲಿ ‘ಕಬ್ಜ’ ಸಿನಿಮಾಗೆ ಸಿಕ್ಕ ರೇಟಿಂಗ್ ಎಷ್ಟು? ಇಲ್ಲಿದೆ ವಿವರ

ಕನ್ನಡ ಮಾತ್ರವಲ್ಲದೆ, ಪರಭಾಷೆಗಳಲ್ಲೂ ‘ಕಬ್ಜ’ ಸಿನಿಮಾ ರಿಲೀಸ್ ಆಗಿದೆ. ಖ್ಯಾತರ ಬಳಿ ಇದರ ಹಂಚಿಕೆ ಹಕ್ಕು ಸೇರಿದೆ. ಹೀಗಾಗಿ, ಪರಭಾಷೆಯಲ್ಲೂ ಹೆಚ್ಚಿನ ಪರದೆಗಳಲ್ಲಿ ‘ಕಬ್ಜ’ ರಿಲೀಸ್ ಆಗಿದೆ. ಹೀಗಾಗಿ ಅಲ್ಲಿಂದಲೂ ದೊಡ್ಡ ಕಲೆಕ್ಷನ್ ಚಿತ್ರಕ್ಕೆ ಹರಿದುಬಂದಿದೆ. ಉಪೇಂದ್ರ, ಸುದೀಪ್, ಶಿವರಾಜ್​ಕುಮಾರ್ ಅವರಿಗೆ ಪರಭಾಷೆಗಳಲ್ಲೂ ಅಭಿಮಾನಿಗಳಿದ್ದಾರೆ. ಇದು ಚಿತ್ರಕ್ಕೆ ಸಹಕಾರಿ ಆಗಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಎಷ್ಟಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada