Kabzaa 2: ನಿರೀಕ್ಷೆ ಮೂಡಿಸಿದ ‘ಕಬ್ಜ 2’; ಕಥೆ ಇನ್ನೂ ಬಾಕಿ ಇದೆ ಎಂದ ಆರ್. ಚಂದ್ರು

Kabzaa Sequel | R Chandru: ‘ಕಬ್ಜ’ ಚಿತ್ರದಲ್ಲಿ ಪ್ರೇಕ್ಷಕರು ನೋಡಿರುವುದು ಅರ್ಧ ಕಥೆ ಮಾತ್ರ. ಇನ್ನುಳಿದ ಕೌತುಕ ಹಾಗೆಯೇ ಇದೆ. ಅದನ್ನು ‘ಕಬ್ಜ 2’ ಚಿತ್ರದಲ್ಲಿ ನಿರ್ದೇಶಕ ಆರ್​. ಚಂದ್ರು ಮುಂದುವರಿಸಲಿದ್ದಾರೆ.

Kabzaa 2: ನಿರೀಕ್ಷೆ ಮೂಡಿಸಿದ ‘ಕಬ್ಜ 2’; ಕಥೆ ಇನ್ನೂ ಬಾಕಿ ಇದೆ ಎಂದ ಆರ್. ಚಂದ್ರು
ಕಿಚ್ಚ ಸುದೀಪ್
Follow us
ಮದನ್​ ಕುಮಾರ್​
|

Updated on:Mar 17, 2023 | 5:00 PM

ಭಾರತೀಯ ಸಿನಿಮಾರಂಗದಲ್ಲಿ ಸೀಕ್ವೆಲ್​ಗಳ ಟ್ರೆಂಡ್​ ಜೋರಾಗಿದೆ. ಆ ಸಾಲಿಗೆ ಹೊಸ ಸೇರ್ಪಡೆ ‘ಕಬ್ಜ 2’ (Kabzaa 2) ಸಿನಿಮಾ. ದೊಡ್ಡ ಚಿತ್ರಗಳ ಕಥೆಯನ್ನು ಎರಡು ಪಾರ್ಟ್​ನಲ್ಲಿ ಹೇಳಲು ನಿರ್ದೇಶಕರು ಆಸಕ್ತಿ ತೋರಿಸುತ್ತಿದ್ದಾರೆ. ಅಂತಹ ಕೆಲವು ಪ್ರಯತ್ನಗಳಿಗೆ ಯಶಸ್ಸು ಸಿಕ್ಕಿದೆ. ‘ಬಾಹುಬಲಿ’ ಮತ್ತು ‘ಕೆಜಿಎಫ್​’ ಚಿತ್ರಗಳು ಎರಡು ಪಾರ್ಟ್​ನಲ್ಲಿ ಬಂದು ಧೂಳೆಬ್ಬಿಸಿದವು. ‘ಪೊನ್ನಿಯಿನ್​ ಸೆಲ್ವನ್​ 1’ ಸೂಪರ್​ ಹಿಟ್​ ಆಗಿದ್ದು, ಈಗ ಅದರ ಸೀಕ್ವೆಲ್​ ಸಿದ್ಧವಾಗುತ್ತಿದೆ. ‘ಕಾಂತಾರ 2’ ಕೂಡ ಬರಲಿದೆ. ಹಾಗೆಯೇ ‘ಕಬ್ಜ 2’ ಚಿತ್ರವೀಗ ನಿರೀಕ್ಷೆ ಮೂಡಿಸಿದೆ. ಇಂದು (ಮಾರ್ಚ್​ 17) ‘ಕಬ್ಜ’ ಸಿನಿಮಾದ (Kabzaa Movie) ಕ್ಲೈಮ್ಯಾಕ್ಸ್​ನಲ್ಲಿ ಸೀಕ್ವೆಲ್​ನ ಸೂಚನೆ ನೀಡಲಾಗಿದೆ. ಚಿತ್ರ ನೋಡಿ ಹೊರಬಂದವರೆಲ್ಲರೂ ‘ಪಾರ್ಟ್​ 2’ ಕಥೆಯನ್ನು ಊಹಿಸುತ್ತಿದ್ದಾರೆ. ನಿರ್ದೇಶಕ ಆರ್. ಚಂದ್ರು ಅವರು (R. Chandru) ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹಂಚಿಕೊಳ್ಳಬೇಕಿದೆ.

‘ಕಬ್ಜ’ ಸಿನಿಮಾದ ಕಥೆ ಎರಡು ಪಾರ್ಟ್​ಗಳಲ್ಲಿ ಬರಲಿದೆ ಎಂದು ಚಿತ್ರತಂಡ ನಿಶ್ಚಿತವಾಗಿ ಹೇಳಿರಲಿಲ್ಲ. ಆದರೆ ಈಗ ಆ ವಿಚಾರ ಬಯಲಾಗಿದೆ. ‘ಕಬ್ಜ’ ಚಿತ್ರದಲ್ಲಿ ಪ್ರೇಕ್ಷಕರು ನೋಡಿರುವುದು ಅರ್ಧ ಕಥೆ ಮಾತ್ರ. ಇನ್ನುಳಿದ ಕೌತುಕ ಹಾಗೆಯೇ ಇದೆ. ಅದನ್ನು ‘ಕಬ್ಜ 2’ ಚಿತ್ರದಲ್ಲಿ ನಿರ್ದೇಶಕ ಆರ್​. ಚಂದ್ರು ಮುಂದುವರಿಸಲಿದ್ದಾರೆ. ಈ ಬಗ್ಗೆ ಈಗ ಅಭಿಮಾನಿಗಳ ವಲಯದಲ್ಲಿ ಟಾಕ್​ ಕ್ರಿಯೇಟ್​ ಆಗಿದೆ.

ಇದನ್ನೂ ಓದಿ: ಪವನ್ ಕಲ್ಯಾಣ್​ ಚಿತ್ರಕ್ಕೆ ಆರ್​. ಚಂದ್ರು ನಿರ್ದೇಶನ? ‘ಕಬ್ಜ’ ನೋಡಿ ಮೆಚ್ಚಿಕೊಂಡ ಪವರ್​ಸ್ಟಾರ್

ಇದನ್ನೂ ಓದಿ
Image
Kabzaa Twitter Review: ‘ಕಬ್ಜ’ ನೋಡಿ ಏನು ಹೇಳ್ತಿದ್ದಾರೆ ಫಸ್ಟ್​ ಡೇ ಪ್ರೇಕ್ಷಕರು? ಇಲ್ಲಿದೆ ಟ್ವಿಟರ್​ ವಿಮರ್ಶೆ
Image
Kabzaa Movie Review: 1970ರ ಕಾಲಕ್ಕೆ ಕರೆದೊಯ್ಯುವ ‘ಕಬ್ಜ’; ತೆರೆ ಹಿಂದಿನ ಹೀರೋಗಳ ಅದ್ದೂರಿ ಸಿನಿಮಾ
Image
‘ಕ್ಲೈಮ್ಯಾಕ್ಸ್ ಮಿಸ್ ಮಾಡೋ ಮಾತೇ ಇಲ್ಲ’; ‘ಕಬ್ಜ’ ನೋಡಿದ ಅಭಿಮಾನಿಗಳ ರಿಯಾಕ್ಷನ್
Image
Kabzaa First Half Review: ಹೇಗಿದೆ ‘ಕಬ್ಜ’ ಚಿತ್ರದ ಮೊದಲಾರ್ಧ? ಉಪೇಂದ್ರ-ಆರ್​. ಚಂದ್ರು ತೆರೆದಿಟ್ಟ ಬೇರೊಂದು ಲೋಕ ಇಲ್ಲಿದೆ..

ಉಪೇಂದ್ರ ಅವರು ‘ಕಬ್ಜ’ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಕಿಚ್ಚ ಸುದೀಪ್​ ಅವರ ಧ್ವನಿಯಲ್ಲಿ ಇಡೀ ಸಿನಿಮಾದ ಕಥೆ ನಿರೂಪಿತವಾಗಿದೆ. ಇನ್ನು, ಶಿವರಾಜ್​ಕುಮಾರ್​ ಅವರು ಅತಿಥಿ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಆ ಪಾತ್ರದ ಹಿನ್ನೆಲೆ ಏನು ಎಂಬುದನ್ನು ಇನ್ನೂ ರಿವೀಲ್​ ಆಗಿಲ್ಲ. ಅದನ್ನು ‘ಕಬ್ಜ 2’ ಚಿತ್ರದಲ್ಲಿ ವಿವರಿಸಬೇಕಿದೆ. ಹಾಗಾದರೆ ಸೀಕ್ವೆಲ್​ನಲ್ಲಿ ಯಾರ ಪಾತ್ರ ಹೈಲೈಟ್​ ಆಗಲಿದೆ? ಯಾರು ಅತಿಥಿ ಪಾತ್ರ ಮಾಡಲಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತರ ಸಿಗಲಿದೆ.

ಇದನ್ನೂ ಓದಿ: R Chandru: ಅವನ ಕೈಲಾಗುತ್ತಾ? ಆರ್.ಚಂದ್ರು ಸಾಮರ್ಥ್ಯದ ಬಗ್ಗೆ ಆಪ್ತರಿಗೇ ಇತ್ತು ಅನುಮಾನ!

‘ಕಬ್ಜ’ ನೋಡಿದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮೊದಲ ದಿನ ಈ ಚಿತ್ರಕ್ಕೆ ಒಳ್ಳೆಯ ಓಪನಿಂಗ್​ ಸಿಕ್ಕಿದೆ. ಎಲ್ಲ ಕಡೆಗಳಲ್ಲಿ ಹೌಸ್​ ಫುಲ್​ ಪ್ರದರ್ಶನ ಆಗಿದೆ. ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯಗಳಲ್ಲೂ ಕೂಡ ‘ಕಬ್ಜ’ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ತಾಂತ್ರಿಕವಾಗಿ ಈ ಚಿತ್ರದ ಗುಣಮಟ್ಟ ಎಲ್ಲರಿಗೂ ಇಷ್ಟ ಆಗಿದೆ. ಜನರಿಂದ ಸಿಕ್ಕಿರುವ ಉತ್ತಮ ಸ್ಪಂದನೆ ಕಂಡು ಬೇರೆ ಭಾಷೆಯ ಸೆಲೆಬ್ರಿಟಿಗಳು ಕೂಡ ‘ಕಬ್ಜ’ ಬಗ್ಗೆ ಟ್ವೀಟ್​ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:38 pm, Fri, 17 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ