Kabzaa First Half Review: ಹೇಗಿದೆ ‘ಕಬ್ಜ’ ಚಿತ್ರದ ಮೊದಲಾರ್ಧ? ಉಪೇಂದ್ರ-ಆರ್​. ಚಂದ್ರು ತೆರೆದಿಟ್ಟ ಬೇರೊಂದು ಲೋಕ ಇಲ್ಲಿದೆ..

ಉಪೇಂದ್ರ ಅಭಿನಯದ ‘ಕಬ್ಜ’ ಸಿನಿಮಾ ಗ್ರ್ಯಾಂಡ್​ ಆಗಿ ತೆರೆಕಂಡಿದೆ. ಈ ಚಿತ್ರದ ಫಸ್ಟ್​ ಹಾಫ್​ನಲ್ಲಿ ಏನೆಲ್ಲ ಇದೆ ತಿಳಿಯಲು ಈ ಸ್ಟೋರಿ ಓದಿ..

Kabzaa First Half Review: ಹೇಗಿದೆ ‘ಕಬ್ಜ’ ಚಿತ್ರದ ಮೊದಲಾರ್ಧ? ಉಪೇಂದ್ರ-ಆರ್​. ಚಂದ್ರು ತೆರೆದಿಟ್ಟ ಬೇರೊಂದು ಲೋಕ ಇಲ್ಲಿದೆ..
‘ಕಬ್ಜ’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on:Mar 17, 2023 | 1:21 PM

ಕನ್ನಡದ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಶೈನ್​ ಆಗುತ್ತಿವೆ. ಆ ಸಾಲಿನಲ್ಲಿ ‘ಕಬ್ಜ’ ಚಿತ್ರ (Kabzaa Movie) ಕೂಡ ಇದೆ. ಈ ಸಿನಿಮಾಗಾಗಿ ನಿರ್ದೇಶಕ ಆರ್​. ಚಂದ್ರು ಅವರು ನಾಲ್ಕು ವರ್ಷ ಶ್ರಮಿಸಿದ್ದಾರೆ. ಅಭಿಮಾನಿಗಳು ಈ ಸಿನಿಮಾ ಮೇಲೆ ಇಟ್ಟುಕೊಂಡಿದ್ದ ನಿರೀಕ್ಷೆ ಕೂಡ ದೊಡ್ಡದು. ಉಪೇಂದ್ರ (Upendra), ಶಿವರಾಜ್​ಕುಮಾರ್​, ಕಿಚ್ಚ ಸುದೀಪ್​, ಶ್ರೀಯಾ ಶರಣ್​ ಮುಂತಾದವರು ನಟಿಸಿರುವ ‘ಕಬ್ಜ’ ಚಿತ್ರದ ತೆರೆ ಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಇಂದು (ಮಾರ್ಚ್​ 17) ಅದ್ದೂರಿಯಾಗಿ ಈ ಚಿತ್ರ ರಿಲೀಸ್​ ಆಗಿದೆ. ಉಪ್ಪಿ ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ‘ಕಬ್ಜ’ ಸಿನಿಮಾದ ಮೊದಲಾರ್ಧ (Kabzaa First Half) ಹೇಗಿದೆ ಎಂಬುದು ಕೂಡ ಈಗ ಗೊತ್ತಾಗಿದೆ. ಆ ಕುರಿತು ವಿವರ ಇಲ್ಲಿದೆ..

  1. ಎಲ್ಲರಿಗಿಂತ ಮೊದಲ ಸುದೀಪ್ ಎಂಟ್ರಿ. ಪೊಲೀಸ್ ಕಮಿಷನರ್ ಭಾರ್ಗವ್ ಬಕ್ಷಿ ಪಾತ್ರದಲ್ಲಿ ಅಬ್ಬರಿಸುವ ಕಿಚ್ಚ
  2. ಫ್ಲಾಶ್‌ಬ್ಯಾಕ್ ಮೂಲಕ ಕತೆ ಹೇಳುವ ಭಾರ್ಗವ್ ಬಕ್ಷಿ. ಸುದೀಪ್ ನಿರೂಪಣೆಯಲ್ಲಿ ಸಾಗುವ ‘ಕಬ್ಜ’ ಕಹಾನಿ.
  3. ಬ್ರಿಟಿಷ್‌ ಕಾಲದ ಕಥೆ ಶುರುವಾಗೋದು 1945ರ ಸಂಗ್ರಾಮ ನಗರದಲ್ಲಿ. ನಂತರ ಅಮರಪುರ, ವಿಶಾಖಪಟ್ಟಣ ಮುಂತಾದ ಕಡೆಗೆ ಕಥೆ ಸಾಗುತ್ತದೆ.
  4. ಗ್ಯಾಂಗ್‌ಸ್ಟರ್ ಮತ್ತು ಪೈಲೆಟ್.. ಹೀಗೆ ಎರಡು ಗೆಟಪ್‌ನಲ್ಲಿ ಎದುರುಗೊಳ್ಳುವ ಉಪೇಂದ್ರ ಅವರ ಪಾತ್ರ. ಆ ಮೂಲಕ ಕೌತುಕ ಮೂಡಿಸುತ್ತವೆ ಓಪನಿಂಗ್ ದೃಶ್ಯಗಳು.
  5. ‘ನಮಾಮಿ ನಮಾಮಿ..’ ಹಾಡಿನಿಂದ ಶ್ರಿಯಾ ಶರಣ್ ಎಂಟ್ರಿ. ರಾಜಮನೆತನದ ಮಧುಮತಿ ಎಂಬ ರಾಜಕುಮಾರಿ ಪಾತ್ರ ಮಾಡಿದ್ದಾರೆ ಶ್ರೀಯಾ ಶರಣ್.
  6. ಸ್ವತಂತ್ರ ಭಾರತದಲ್ಲೂ ಅಧಿಕಾರಕ್ಕಾಗಿ ಮಸಲತ್ತು ನಡೆಸುವ ರಾಜ ಮನೆತನದ ಒಡೆಯನಾಗಿ ಕಾಣಿಸಿಕೊಂಡಿದ್ದಾರೆ ಹಿರಿಯ ನಟ ಮುರಳಿ ಶರ್ಮಾ.
  7. ರೆಬಲ್ ಸ್ವಭಾವದ ಸಂಕೇಶ್ವರ ಎಂಬ ಪಾತ್ರದಲ್ಲಿ ಕಥೆಗೆ ಮೊದಲ ಕಿಚ್ಚು ಹಚ್ಚುವ ಸುನೀಲ್ ಪುರಾಣಿಕ್. ಆ ಪಾತ್ರದಿಂದಲೇ ‘ಕಬ್ಜ’ ಕಥೆಗೆ ಮೇಜರ್ ಟ್ವಿಸ್ಟ್.
  8. ಜೈಲ್ ಫೈಟ್ ಮೂಲಕ ಆ್ಯಕ್ಷನ್ ಪ್ರಿಯರಿಗೆ ಫಸ್ಟ್ ಹಾಫ್‌ನಲ್ಲಿ ಸಖತ್ ಮನರಂಜನೆ ನೀಡ್ತಾರೆ ಉಪೇಂದ್ರ.
  9. ಚುರುಕಾದ ನಿರೂಪಣೆಯಿಂದ ಮೊದಲಾರ್ಧದ ಮೆರುಗು ಹೆಚ್ಚಿಸಿದ ನಿರ್ದೇಶಕ ಆರ್. ಚಂದ್ರು. ಎಲ್ಲಿಯೂ ಬೋರ್ ಎನಿಸದೇ ಸಾಗುತ್ತದೆ ‘ಕಬ್ಜ’ ಫಸ್ಟ್ ಹಾಫ್.
  10. ಬೃಹತ್ ಸೆಟ್‌ಗಳ ಮೂಲಕ 1970ರ ಕಾಲವನ್ನು ಪ್ರೇಕ್ಷಕರ ಎದುರಿಗೆ ತಂದಿದ್ದಾರೆ ಕಲಾ ‌ನಿರ್ದೇಶಕ ಶಿವ ಕುಮಾರ್. ಬೇರೊಂದು ದುನಿಯಾವನ್ನು ನೋಡಿದ ಫೀಲ್ ಸಿಗುತ್ತದೆ.
  11. ಉಪೇಂದ್ರ, ಕಿಚ್ಚ ಸುದೀಪ್, ಸುನೀಲ್ ಪುರಾಣಿಕ್, ಮರಳಿ ಶರ್ಮಾ, ಶ್ರಿಯಾ ಶರಣ್ ಮಾತ್ರವಲ್ಲದೇ ನೀನಾಸಂ ಅಶ್ವತ್ಥ್, ದಾನಿಶ್ ಅಖ್ತರ್ ಮುಂತಾದ ಕಲಾವಿದರು ಕೂಡ ಫಸ್ಟ್ ಹಾಫ್‌ನಲ್ಲಿ ಅಬ್ಬರಿಸುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:35 am, Fri, 17 March 23

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು