AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kabzaa Twitter Review: ‘ಕಬ್ಜ’ ನೋಡಿ ಏನು ಹೇಳ್ತಿದ್ದಾರೆ ಫಸ್ಟ್​ ಡೇ ಪ್ರೇಕ್ಷಕರು? ಇಲ್ಲಿದೆ ಟ್ವಿಟರ್​ ವಿಮರ್ಶೆ

Kabzaa Review | Upendra: ಉಪೇಂದ್ರ, ಶಿವರಾಜ್​ಕುಮಾರ್​, ಕಿಚ್ಚ ಸುದೀಪ್​ ಅವರ ಕಾಂಬಿನೇಷನ್​ನಿಂದ ‘ಕಬ್ಜ’ ಚಿತ್ರ ಸೌಂಡು ಮಾಡುತ್ತಿದೆ. ಅಭಿಮಾನಿಗಳು ಟ್ವಿಟರ್​ನಲ್ಲಿ ತಮ್ಮ ವಿಮರ್ಶೆ ತಿಳಿಸಿದ್ದಾರೆ.

Kabzaa Twitter Review: ‘ಕಬ್ಜ’ ನೋಡಿ ಏನು ಹೇಳ್ತಿದ್ದಾರೆ ಫಸ್ಟ್​ ಡೇ ಪ್ರೇಕ್ಷಕರು? ಇಲ್ಲಿದೆ ಟ್ವಿಟರ್​ ವಿಮರ್ಶೆ
ಕಬ್ಜ ಸಿನಿಮಾ ಪೋಸ್ಟರ್
ಮದನ್​ ಕುಮಾರ್​
|

Updated on:Mar 17, 2023 | 3:30 PM

Share

‘ಕೆಜಿಎಫ್​: ಚಾಪ್ಟರ್​ 2’, ‘ವಿಕ್ರಾಂತ್​ ರೋಣ’, ‘ಕಾಂತಾರ’ ಸಿನಿಮಾಗಳು ಅಬ್ಬರಿಸಿದ ಪರಿ ಕಂಡು ಕನ್ನಡ ಚಿತ್ರರಂಗದ ಬಗ್ಗೆ ಇಡೀ ಭಾರತೀಯ ಸಿನಿಮಾರಂಗ ಮಾತನಾಡಿಕೊಳ್ಳುವಂತೆ ಆಯಿತು. ಅದೇ ಮಾದರಿಯಲ್ಲಿ ‘ಕಬ್ಜ’ ಚಿತ್ರ (Kabzaa Movie) ಕೂಡ ಸೌಂಡು ಮಾಡುತ್ತಿದೆ. ಆರ್​. ಚಂದ್ರು (R Chandru) ಅವರ ಸಾರಥ್ಯದಲ್ಲಿ ಬಂದಿರುವ ಈ ಚಿತ್ರ ಇಂದು (ಮಾರ್ಚ್​ 17) ಗ್ರ್ಯಾಂಡ್​ ಆಗಿ ತೆರೆಕಂಡಿದೆ. ವಿಶ್ವಾದ್ಯಂತ 4000 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ‘ಕಬ್ಜ’ ಪ್ರದರ್ಶನ ಕಾಣುತ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ಮಲಯಾಳಂ, ಹಿಂದಿ, ತಮಿಳಿನಲ್ಲಿ ಈ ಚಿತ್ರ ರಿಲೀಸ್​ ಆಗಿದೆ. ಕನ್ನಡಿಗರ ಹಾಗೆಯೇ ಪರಭಾಷೆಯ ಪ್ರೇಕ್ಷಕರು ಕೂಡ ಫಸ್ಟ್​ ಡೇ ಫಸ್ಟ್​ ಶೋ ನೋಡಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಉಪೇಂದ್ರ ಅವರ ಅಭಿಮಾನಿಗಳಿಗೆ ಈ ಸಿನಿಮಾ ಮಸ್ತ್​ ಮನರಂಜನೆ ನೀಡಿದೆ. ಪ್ರೇಕ್ಷಕರು ಹಂಚಿಕೊಂಡ ‘ಕಬ್ಜ’ ಟ್ವಿಟರ್​ ವಿಮರ್ಶೆ (Kabzaa Twitter Review) ಇಲ್ಲಿದೆ..

ಕಿಚ್ಚ ಸುದೀಪ್​ ಅವರು ‘ಕಬ್ಜ’ ಸಿನಿಮಾದ ಆರಂಭದಲ್ಲೇ ಎಂಟ್ರಿ ನೀಡುತ್ತಾರೆ. ಅವರ ಪಾತ್ರದ ಮ್ಯಾನರಿಸಂ, ಡೈಲಾಗ್​ ಡೆಲಿವರಿ ಅಭಿಮಾನಿಗಳಿಗೆ ಇಷ್ಟ ಆಗಿದೆ. ಸಿನಿಮಾದುದ್ದಕ್ಕೂ ಅವರ ಧ್ವನಿಯಲ್ಲೇ ಕಥೆ ನಿರೂಪಿತವಾಗುತ್ತದೆ. ಕ್ಲೈಮ್ಯಾಕ್ಸ್​ನಲ್ಲೂ ಅವರು ಅಬ್ಬರಿಸುತ್ತಾರೆ. ಹಾಗಾಗಿ ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಈ ಚಿತ್ರ ಇಷ್ಟ ಆಗಿದೆ.

ಇದನ್ನೂ ಓದಿ
Image
Kabzaa Movie Review: 1970ರ ಕಾಲಕ್ಕೆ ಕರೆದೊಯ್ಯುವ ‘ಕಬ್ಜ’; ತೆರೆ ಹಿಂದಿನ ಹೀರೋಗಳ ಅದ್ದೂರಿ ಸಿನಿಮಾ
Image
‘ಕ್ಲೈಮ್ಯಾಕ್ಸ್ ಮಿಸ್ ಮಾಡೋ ಮಾತೇ ಇಲ್ಲ’; ‘ಕಬ್ಜ’ ನೋಡಿದ ಅಭಿಮಾನಿಗಳ ರಿಯಾಕ್ಷನ್
Image
Kabzaa First Half Review: ಹೇಗಿದೆ ‘ಕಬ್ಜ’ ಚಿತ್ರದ ಮೊದಲಾರ್ಧ? ಉಪೇಂದ್ರ-ಆರ್​. ಚಂದ್ರು ತೆರೆದಿಟ್ಟ ಬೇರೊಂದು ಲೋಕ ಇಲ್ಲಿದೆ..
Image
ಪವನ್ ಕಲ್ಯಾಣ್​ ಚಿತ್ರಕ್ಕೆ ಆರ್​. ಚಂದ್ರು ನಿರ್ದೇಶನ? ‘ಕಬ್ಜ’ ನೋಡಿ ಮೆಚ್ಚಿಕೊಂಡ ಪವರ್​ಸ್ಟಾರ್

ಬಹುತೇಕ ಎಲ್ಲರಿಗೂ ‘ಕಬ್ಜ’ ಸಿನಿಮಾದ ಕ್ಲೈಮ್ಯಾಕ್ಸ್​ ಇಷ್ಟ ಆಗಿದೆ. ಪ್ರತಿ ಹಂತದಲ್ಲೂ ಕೌತುಕ ಮೂಡಿಸುವಂತಹ ಶಕ್ತಿ ಈ ಚಿತ್ರಕ್ಕಿದೆ. ಉಪೇಂದ್ರ, ಶ್ರೀಯಾ ಶರಣ್​, ಮುರಳಿ ಶರ್ಮಾ ಅವರ ಕಾಂಬಿನೇಷನ್​ ಚೆನ್ನಾಗಿದೆ ಎಂದು ಅಭಿಮಾನಿಗಳು ಟ್ವೀಟ್​ ಮಾಡಿದ್ದಾರೆ.

ಶಿವರಾಜ್​ಕುಮಾರ್​ ಅವರು ಕುತೂಹಲಭರಿತವಾದ ಪಾತ್ರದಲ್ಲಿ ಪ್ರೇಕ್ಷಕರ ಎದುರು ಕಾಣಿಸಿಕೊಳ್ಳುತ್ತಾರೆ. ‘ನೀವು ಏನನ್ನು ಬೇಕಿದ್ದರೂ ನಿರ್ಲಕ್ಷಿಸಬಹುದು. ಆದರೆ ಶಿವಣ್ಣನ ಎಂಟ್ರಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ’ ಎಂದು ಶಿವರಾಜ್​ಕುಮಾರ್​ ಅವರ ಅಪ್ಪಟ ಅಭಿಮಾನಿಗಳು ಟ್ವಿಟರ್​ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

‘ಕಬ್ಜ’ ಚಿತ್ರದಲ್ಲಿ ತಾಂತ್ರಿಕ ಗುಣಮಟ್ಟ ಸೂಪರ್​ ಆಗಿದೆ. ಎಜೆ ಶೆಟ್ಟಿ ಅವರ ಛಾಯಾಗ್ರಹಣ, ಶಿವಕುಮಾರ್​ ಅವರ ಕಲಾ ನಿರ್ದೇಶನ, ರವಿ ಬಸ್ರೂರು ಅವರ ಸಂಗೀತ ನಿರ್ದೇಶನ, ಮಹೇಶ್​ ರೆಡ್ಡಿ ಅವರ ಸಂಕಲನ ಗಮನ ಸೆಳೆಯುತ್ತಿದೆ. ಹಾಗಾಗಿ ಈ ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡಿ ಎಂಜಾಯ್​ ಮಾಡಬೇಕು ಎನ್ನುತ್ತಿದ್ದಾರೆ ಫ್ಯಾನ್ಸ್​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:30 pm, Fri, 17 March 23

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More