AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ಮಂದಣ್ಣಗೆ ಬರ್ತ್​ಡೇ ವಿಶ್ ಮಾಡಿದ ರಕ್ಷಿತ್ ಶೆಟ್ಟಿ ಒಡೆತನದ ನಿರ್ಮಾಣ ಸಂಸ್ಥೆ

Rashmika Mandanna Birthday: ‘ರಶ್ಮಿಕಾ ಮಂದಣ್ಣ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ರಕ್ಷಿತ್. ಆದರೆ, ಈಗ ರಕ್ಷಿತ್​ಗೆ ರಶ್ಮಿಕಾ ಮೋಸ ಮಾಡಿದ್ದಾರೆ’ ಎಂದು ಅನೇಕರು ಮಾತನಾಡಿಕೊಂಡರು.

ರಶ್ಮಿಕಾ ಮಂದಣ್ಣಗೆ ಬರ್ತ್​ಡೇ ವಿಶ್ ಮಾಡಿದ ರಕ್ಷಿತ್ ಶೆಟ್ಟಿ ಒಡೆತನದ ನಿರ್ಮಾಣ ಸಂಸ್ಥೆ
ರಾಜೇಶ್ ದುಗ್ಗುಮನೆ
|

Updated on:Apr 05, 2023 | 1:19 PM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇಂದು (ಏಪ್ರಿಲ್ 7) 27ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಒಡೆತನದ ಪರಂವಃ ಸ್ಟುಡಿಯೋಸ್ ಕಡೆಯಿಂದ ರಶ್ಮಿಕಾ ಮಂದಣ್ಣಗೆ ವಿಶ್ ಮಾಡಲಾಗಿದೆ. ಈ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಇದು ಎಷ್ಟು ಸರಿ ಎನ್ನುವ ಪ್ರಶ್ನೆ ಅನೇಕರಿಂದ ಉದ್ಭವ ಆಗಿದೆ. ಅನೇಕರು ರಕ್ಷಿತ್ ಶೆಟ್ಟಿ (Rakshit Shetty) ಅವರದ್ದು ದೊಡ್ಡ ಗುಣ ಎಂದು ಹೇಳಿದ್ದಾರೆ. ಸದ್ಯ ಪರಂವಃ ಸ್ಟುಡಿಯೋಸ್ ಮಾಡಿರೋ ಟ್ವೀಟ್ ವೈರಲ್ ಆಗಿದೆ.

2016ರಲ್ಲಿ ತೆರೆಗೆ ಬಂದ ‘ಕಿರಿಕ್ ಪಾರ್ಟಿ’ ಚಿತ್ರವನ್ನು ಪರಂವಃ ಸ್ಟುಡಿಯೋಸ್ ಹಾಗೂ ಪುಷ್ಕರ್ ಫಿಲ್ಮ್ಸ್ ಒಟ್ಟಾಗಿ ನಿರ್ಮಾಣ ಮಾಡಿತ್ತು. ಈ ಚಿತ್ರದಿಂದ ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಮೊದಲಾದವರಿಗೆ ದೊಡ್ಡ ಬ್ರೇಕ್ ಸಿಕ್ಕಿತು. ಹಲವು ಆಫರ್​ಗಳು ಇವರನ್ನು ಹುಡುಕಿ ಬಂದವು. ರಕ್ಷಿತ್ ಹಾಗೂ ರಶ್ಮಿಕಾ ಮಂದಣ್ಣ ಪ್ರೀತಿ ಶುರುವಾಗಿದ್ದು ಇದೇ ಸಿನಿಮಾದಿಂದ. ಇಬ್ಬರೂ ಹಲವು ಸಮಯ ಪ್ರೀತಿಯಲ್ಲಿದ್ದರು. ಇವರ ನಿಶ್ಚಿತಾರ್ಥ ಕೂಡ ಆಯಿತು. ಆದರೆ, ಈ ಎಂಗೇಜ್​ಮೆಂಟ್ ಹೆಚ್ಚು ದಿನ ಉಳಿಯಲೇ ಇಲ್ಲ. ಇವರ ಸಂಬಂಧ ಮುರಿದುಬಿತ್ತು.

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಎಂಗೇಜ್​ಮೆಂಟ್ ಮುರಿದುಕೊಂಡ ಬಗ್ಗೆ ಘೋಷಣೆ ಮಾಡಿದರು. ರಶ್ಮಿಕಾ ಆಗಲೇ ದೊಡ್ಡ ಮಟ್ಟದ ಹೆಸರು ಮಾಡಿದ್ದರು. ‘ರಶ್ಮಿಕಾ ಮಂದಣ್ಣ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ರಕ್ಷಿತ್. ಆದರೆ, ಈಗ ರಕ್ಷಿತ್​ಗೆ ರಶ್ಮಿಕಾ ಮೋಸ ಮಾಡಿದ್ದಾರೆ’ ಎಂದು ಅನೇಕರು ಮಾತನಾಡಿಕೊಂಡರು. ರಕ್ಷಿತ್ ಅಭಿಮಾನಿಗಳಿಗೆ ರಶ್ಮಿಕಾ ಮೇಲೆ ದ್ವೇಷ ಹುಟ್ಟೋಕೆ ಇದು ಕೂಡ ಪ್ರಮುಖ ಕಾರಣ ಆಯಿತು.

ರಶ್ಮಿಕಾ ಮಂದಣ್ಣ ಅವರಿಗೆ ಶುಭಾಶಯ ತಿಳಿಸಿ ಪರಂವಃ ಸ್ಟುಡಿಯೋಸ್ ಟ್ವೀಟ್ ಮಾಡಿದೆ. ರಶ್ಮಿಕಾ ಮಂದಣ್ಣ ಫೋಟೋ ಹಾಕಿ, ‘ಗಾರ್ಜಿಯಸ್ ರಶ್ಮಿಕಾ ಮಂದಣ್ಣಗೆ ಹುಟ್ಟುಹಬ್ಬದ ಶುಭಾಶಯ. ಈ ವರ್ಷ ನಿಮಗೆ ಸಂತೋಷ, ನಗು ಮತ್ತು ಯಶಸ್ಸು ಹೆಚ್ಚಾಗಲಿ’ ಎಂದು ಪರಂವಃ ಸ್ಟುಡಿಯೋಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ನಿಜವಾದ ವಯಸ್ಸೆಷ್ಟು? ಇಲ್ಲಿದೆ ಉತ್ತರ

ಈ ಪೋಸ್ಟ್​ಗೆ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ರಶ್ಮಿಕಾ ಮಂದಣ್ಣಗೆ ಯಶಸ್ಸು ಸಿಗಲಿ’ ಎಂದು ಕೆಲವರು ಹಾರೈಸಿದ್ದಾರೆ. ಇನ್ನೂ ಕೆಲವರು ರಕ್ಷಿತ್ ಶೆಟ್ಟಿ ನಿರ್ಮಾಣ ಸಂಸ್ಥೆ ಕಡೆಯಿಂದ ಬಂದ ಟ್ವೀಟ್​ಗೆ ನೆಗೆಟಿವ್ ಆಗಿ ಉತ್ತರಿಸಿದ್ದಾರೆ. ಅವರು ಈ ರೀತಿ ಟ್ವೀಟ್ ಮಾಡಬಾರದಿತ್ತು ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:17 pm, Wed, 5 April 23