ನಟಿ ಸಮಂತಾ ರುತ್ ಪ್ರಭು ಅವರಿಗೆ ಹಲವು ಬಗೆಯ ಆಫರ್ಗಳು ಬರುತ್ತಿವೆ. ‘ಸಿಟಾಡೆಲ್’ ವೆಬ್ ಸೀರಿಸ್ನ ಇಂಡಿಯನ್ ವರ್ಷನ್ನಲ್ಲಿ ಅವರು ವರುಣ್ ಧವನ್ ಜೊತೆ ನಟಿಸುತ್ತಿದ್ದಾರೆ. ಇದರಲ್ಲಿ ಸಮಂತಾ ಪಾತ್ರ ಬೋಲ್ಡ್ ಆಗಿರಲಿದೆ.
1 / 5
‘ಸಿಟಾಡೆಲ್’ ವೆಬ್ ಸೀರಿಸ್ನಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಬ್ಯಾಕ್ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಟೀಸರ್ನಲ್ಲಿ ಸಾಕ್ಷಿ ಸಿಕ್ಕಿದೆ. ಹಾಗಾದರೆ ಭಾರತೀಯ ವರ್ಷನ್ನಲ್ಲಿ ಸಮಂತಾ ಕೂಡ ಇದೇ ರೀತಿ ನಟಿಸುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.
2 / 5
ಗ್ಲಾಮರಸ್ ಪಾತ್ರಗಳನ್ನು ಮಾಡುವಲ್ಲಿ ಸಮಂತಾ ರುತ್ ಪ್ರಭು ಅವರು ಹಿಂದೇಟು ಹಾಕುವವರಲ್ಲ. ‘ಪುಷ್ಪ’ ಸಿನಿಮಾದ ‘ಉ ಅಂಟಾವಾ ಮಾವ..’ ಹಾಡಿನಲ್ಲಿ ಅವರು ಸಖತ್ ಹಾಟ್ ಆಗಿ ನಟಿಸಿದ್ದರು. ಅಲ್ಲದೇ, ‘ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ನಲ್ಲೂ ಅವರ ಪಾತ್ರ ಬೋಲ್ಡ್ ಆಗಿತ್ತು.
3 / 5
ಸಮಂತಾ ರುತ್ ಪ್ರಭು ಅವರಿಗೆ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಸಿಗುತ್ತಿವೆ. ಏಪ್ರಿಲ್ 14ರಂದು ಅವರ ‘ಶಾಕುಂತಲಂ’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿ ಆಗಿದ್ದಾರೆ.
4 / 5
ಅನಾರೋಗ್ಯದ ಕಾರಣದಿಂದ ಸಮಂತಾ ಅವರ ವೃತ್ತಿಜೀವನ ಕೊಂಚ ಕುಂಠಿತ ಆಗಿತ್ತು. ಆದರೆ ಈಗ ಅವರು ಸಂಪೂರ್ಣ ಚೇತರಿಸಿಕೊಂಡು ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. ವಿಜಯ್ ದೇವರಕೊಂಡ ಜೊತೆಗಿನ ‘ಖುಷಿ’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.