Pura Besakih: ಇಂಡೊನೇಷ್ಯಾದ ಬಾಲಿಯಲ್ಲಿ ಅತಿದೊಡ್ಡ ಹಿಂದೂ ದೇಗುಲ; ದೇವಾಲಯದ ಸೌಂದರ್ಯ ಹೀಗಿದೆ ನೋಡಿ
ಬೆಸಾಕಿಹ್ ದೇವಾಲಯ (Pura Besakih) ಇಂಡೊನೇಷ್ಯಾದ ಬಾಲಿಯಲ್ಲಿರುವ ಅತಿ ದೊಡ್ಡ ಹಿಂದೂ ದೇವಾಲಯವಾಗಿದೆ. ಇದನ್ನು ಬಾಲಿಯ ಮಾತೃ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯವನ್ನು 8 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.
Updated on:Apr 07, 2023 | 4:09 PM

ಇಂಡೋನೇಷ್ಯಾದ ಬಾಲಿ ನಗರವು ಪ್ರಪಂಚದಾದ್ಯಂತದ ಜನರ ನೆಚ್ಚಿನ ಪ್ರವಾಸಿ ತಾಣವಾಗಿದೆ. ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಬಾಲಿಯಲ್ಲಿ ಸುಂದರವಾದ ಕಡಲತೀರಗಳ ಜತೆಗೆ ಅತಿದೊಡ್ಡ ಹಿಂದೂ ದೇವಾಲಯವೂ ಇದೆ.

ಬೆಸಾಕಿಹ್ ದೇವಾಲಯ ಬಾಲಿಯಲ್ಲಿರುವ ಅತಿ ದೊಡ್ಡ ಹಿಂದೂ ದೇವಾಲಯವಾಗಿದೆ. ಇದನ್ನು ಬಾಲಿಯ ಮಾತೃ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯವು ಅಗುಂಗ್ ಪರ್ವತದ ಮೇಲೆ ನೆಲೆಗೊಂಡಿದೆ.

ಈ ದೇವಾಲಯದಲ್ಲಿ ಬ್ರಹ್ಮ, ವಿಷ್ಣು ಮತ್ತು ಶಿವನನ್ನು ಪೂಜಿಸಲಾಗುತ್ತದೆ. ದೇವಾಲಯದ ಸಂಕೀರ್ಣದ ಸುತ್ತಲೂ ಅತಿ ಸುಂದರವಾದ ಮೇರು ಗೋಪುರ ಇದ್ದು, ಇದರ ಸೌಂದರ್ಯ ಪ್ರವಾಸಿಗರನ್ನು ಸೆಳೆಯುತ್ತದೆ.

ಇಲ್ಲಿ 80 ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ದೇವಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಅತ್ಯಂತ ಆಕರ್ಷಕವಾದ 23 ವಿವಿಧ ದೇವಾಲಯಗಳ ಸಮೂಹವೂ ಇದೆ. ಈ ದೇವಾಲಯವನ್ನು 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಭಾವಿಸಲಾಗಿದೆ.

ಈ ದೇವಾಲಯದಲ್ಲಿ ಬ್ರಹ್ಮ, ವಿಷ್ಣು ಮತ್ತು ಶಿವನ ವಿಗ್ರಹಗಳೂ ಇದ್ದು, ಕಳೆದ ಕೆಲವು ವರ್ಷಗಳಲ್ಲಿ ದೇವಾಲಯದ ಆವರಣದಲ್ಲಿ ಅನೇಕ ನವೀಕರಣ ಕಾರ್ಯಗಳನ್ನು ಮಾಡಲಾಗಿದೆ. ಇದರಿಂದಾಗಿ ದೇಗುಲದ ಹಳೆಯ ಸಂರಚನೆಯು ಬದಲಾಗಿದೆ.
Published On - 3:55 pm, Fri, 7 April 23



















