Sign In

By signing in or creating an account, you agree with Associated Broadcasting Company's Terms & Conditions and Privacy Policy.

IRCTC Tour Package: ಕಡಿಮೆ ಖರ್ಚಿನಲ್ಲಿ ಕೇರಳದ ರಮಣೀಯ ಪ್ರದೇಶಗಳಲ್ಲಿ ವಿಹರಿಸಿ; ಐಆರ್​​ಸಿಟಿಸಿ ಹೊಸ ಪ್ಯಾಕೇಜ್

IRCTC Kerala Tour; ಹೌಸ್‌ಬೋಟ್‌ಗಳು ಮತ್ತು ಜಲಪಾತಗಳು ಕೇರಳ ಪ್ರವಾಸೋದ್ಯಮದ ವಿಶೇಷ ಗುರುತಾಗಿವೆ. ಐಆರ್​ಸಿಟಿಸಿ ಕೇರಳಕ್ಕೆ ಭೇಟಿ ನೀಡುವ ಜನರಿಗೆ ಉತ್ತಮ ಪ್ರವಾಸ ಪ್ಯಾಕೇಜ್‌ ಘೋಷಿಸಿದೆ.

Ganapathi Sharma
|

Updated on: Apr 07, 2023 | 8:28 PM

Amazing Kerala Package by IRCTC Now Visit Kerala at a Budget Friendly Price

ಗೋವಾದಂತೆ ಕೇರಳ ಕೂಡ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಪ್ರಶಾಂತ ಪರಿಸರ ಮತ್ತು ಹಸಿರಿನಿಂದಾಗಿ ಕೇರಳಕ್ಕೆ ಭೇಟಿ ನೀಡಲು ದೂರದೂರುಗಳಿಂದ ಜನರು ಬರುತ್ತಾರೆ. ಹೌಸ್‌ಬೋಟ್‌ಗಳು ಮತ್ತು ಜಲಪಾತಗಳು ಕೇರಳದ ವಿಶೇಷ ಗುರುತಾಗಿವೆ. ಕೇರಳಕ್ಕೆ ಭೇಟಿ ನೀಡುವ ಜನರಿಗೆ ಐಆರ್​ಸಿಟಿಸಿ ಉತ್ತಮ ಪ್ರವಾಸ ಪ್ಯಾಕೇಜ್‌ ಘೋಷಿಸಿದೆ.

1 / 5
Amazing Kerala Package by IRCTC Now Visit Kerala at a Budget Friendly Price

ಐಆರ್​ಸಿಟಿಸಿಯ ಟೂರ್ ಪ್ಯಾಕೇಜ್ ಏಪ್ರಿಲ್ 11 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಪ್ರವಾಸಿಗರಿಗೆ ಅಲೆಪ್ಪಿಯ ಜಲಪಾತಗಳು ಮತ್ತು ಮುನ್ನಾರ್‌ನ ಹಸಿರನ್ನು ಪರಿಚಯಿಸಲಾಗುತ್ತದೆ. ಪ್ರವಾಸಿಗರು ಈ ಎರಡೂ ಸ್ಥಳಗಳಿಗೆ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ.

2 / 5
Amazing Kerala Package by IRCTC Now Visit Kerala at a Budget Friendly Price

ಈ ಟೂರ್ ಪ್ಯಾಕೇಜ್ ಇದು 11,980 ರೂ.ನಿಂದ ಪ್ರಾರಂಭವಾಗಲಿದೆ. ಸ್ಲೀಪರ್ ಮತ್ತು ಥರ್ಡ್ ಎಸಿ ಕ್ಲಾಸ್ ಮೂಲಕ ರೈಲಿನಲ್ಲಿ ಪ್ರವಾಸಿಗರು ಕೇರಳಕ್ಕೆ ತೆರಳಬಹುದಾಗಿದೆ.

3 / 5
Amazing Kerala Package by IRCTC Now Visit Kerala at a Budget Friendly Price

ಪ್ರವಾಸ ಪ್ಯಾಕೇಜ್ ಅಡಿ ನೋಂದಾಯಿಸಿದವರಿಗೆ 3 ಉಪಹಾರವನ್ನು ಸಹ ನೀಡಲಾಗುತ್ತದೆ. ಮೊದಲು ಜನರನ್ನು ಮುನ್ನಾರ್‌ಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಜನರನ್ನು ರಾಷ್ಟ್ರೀಯ ಉದ್ಯಾನವನ, ಟೀ ಮ್ಯೂಸಿಯಂ ಮತ್ತು ಎಕೋ ಪಾಯಿಂಟ್‌ಗೆ ಕರೆದೊಯ್ಯಲಾಗುತ್ತದೆ.

4 / 5
Amazing Kerala Package by IRCTC Now Visit Kerala at a Budget Friendly Price

ಪ್ರವಾಸಿಗರು ಅಲೆಪ್ಪಿಯಲ್ಲಿ ಹಿನ್ನೀರಿನಲ್ಲಿ ವಿಹಾರವನ್ನೂ ಮಾಡಬಹುದಾಗಿದೆ. ಒಟ್ಟಾರೆಯಾಗಿ, ಐಆರ್​​ಸಿಟಿಸಿಯ ಈ ಪ್ರವಾಸ ಪ್ಯಾಕೇಜ್ ಮೂಲಕ ಜನರು ಕಡಿಮೆ ಸಮಯದಲ್ಲಿ ಕೇರಳದ ಎರಡು ಅದ್ಭುತ ಸ್ಥಳಗಳನ್ನು ಆನಂದಿಸಲು ಸಾಧ್ಯವಾಗಲಿದೆ ಎಂದು ಐಆರ್​​ಸಿಟಿಸಿ ಪ್ರಕಟಣೆ ತಿಳಿಸಿದೆ.

5 / 5
Follow us