- Kannada News Photo gallery Animal Fair: Buffalo’s unique identity, price is 10 crores, competition to take selfie in Muzaffarnagar
Photos: ಮನುಷ್ಯನಿಗೂ ಇಲ್ಲದ ಬೆಲೆ ಈ ಎಮ್ಮೆಗಿದೆ ನೋಡಿ, ಬರೋಬ್ಬರಿ 10 ಕೋಟಿ ರೂ. ಬೆಲೆ ಬಾಳುತ್ತಂತೆ!
ಮನುಷ್ಯನಿಗೂ ಇಲ್ಲದ ಬೆಲೆ ಈ ಎಮ್ಮೆಗಿದೆ ನೋಡಿ, ದಷ್ಟಪುಷ್ಟವಾಗಿದ್ದು ಬರೋಬ್ಬರಿ 16 ಕ್ವಿಂಟಾಲ್ ತೂಗುವ ಈ ಎಮ್ಮೆ ಬರೋಬ್ಬರಿ 10 ಕೋಟಿ ರೂ. ಬೆಲೆ ಬಾಳುತ್ತಂತೆ!
Updated on: Apr 07, 2023 | 3:22 PM

ಮನುಷ್ಯನಿಗೂ ಇಲ್ಲದ ಬೆಲೆ ಈ ಎಮ್ಮೆಗಿದೆ ನೋಡಿ, ದಷ್ಟಪುಷ್ಟವಾಗಿದ್ದು ಬರೋಬ್ಬರಿ 16 ಕ್ವಿಂಟಾಲ್ ತೂಗುವ ಈ ಎಮ್ಮೆ ಬರೋಬ್ಬರಿ 10 ಕೋಟಿ ರೂ. ಬೆಲೆ ಬಾಳುತ್ತಂತೆ!

ಉತ್ತರ ಪ್ರದೇಶದ ಮುಜಾಫರನಗರದಲ್ಲಿ ರಾಷ್ಟ್ರೀಯ ಪ್ರಾಣಿ ಪ್ರದರ್ಶನದಲ್ಲಿ ಹಲವು ಪ್ರಾಣಿಗಳು ಗಮನಸೆಳೆದವು ಅದರಲ್ಲಿ ಈ ಎಮ್ಮೆ ಕೂಡ.

ಹೌದು, ಸಾಮಾನ್ಯವಾಗಿ ಎಮ್ಮೆ 25-30 ಸಾವಿರ ರೂ. ಬೆಲೆ ಬಾಳುತ್ತದೆ, ಇನ್ನೂ ಅಧಿಕವೆಂದರೆ 1-2 ಲಕ್ಷ ರೂ. ಇರಬಹುದು. ಆದರೆ ಈ ಎಮ್ಮೆ ಬರೋಬ್ಬರಿ 10 ಕೋಟಿ ರೂ ಬೆಲೆ ಬಾಳುತ್ತೆ.

ರಾಷ್ಟ್ರೀಯ ಪ್ರಾಣಿ ಪ್ರದರ್ಶನದಲ್ಲಿ ದಿನಕ್ಕೆ ಮೂರು ಬಾರಿಯಂತೆ 65 ಲೀಟರ್ ಹಾಲು ಕೊಡುವ ಹಸುಗಳ ಪ್ರದರ್ಶನವೂ ನಡೆಯಿತು.

ಪಾಣಿಪತ್ನ ದಿಡ್ವಾಡಿ ಗ್ರಾಮದ ನರೇಂದ್ರ ಸಿಂಗ್ ಅವರು ಸಾಕಿರುವ ಎಮ್ಮೆ ಘೋಲುವನ್ನು ನೋಡಲು ಪ್ರಾಣಿಪ್ರಿಯರ ದಂಡೇ ನೆರೆದಿತ್ತು.

ಹರ್ಯಾಣ, ಪಂಜಾಬ್, ರಾಜಸ್ಥಾನ, ಉತ್ತರಾಖಂಡದಿಂದ ಈ ಪ್ರಾಣಿ ಪ್ರದರ್ಶನಕ್ಕೆ ಜನರು ಆಗಮಿಸಿದ್ದರು.

ಏಪ್ರಿಲ್ 6 ಹಾಗೂ 7 ರಂದು ಎರಡು ದಿನಗಳ ಕಾಲ ಪ್ರಾಣಿಗಳು ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ ನಡೆಯಿತು.

ದೇಶಾದ್ಯಂತ ಸುಮಾರು 1200 ಜಾನುವಾರುಗಳು ಮತ್ತು 50 ಸಾವಿರ ರೈತರು ಆಗಮಿಸಿದ್ದರು. 150 ಮಳಿಗೆಗಳಲ್ಲಿ ರೈತರಿಗೆ ಪಶುಸಂಗೋಪನೆ ಹಾಗೂ ಕೃಷಿಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ನೀಡಲಾಯಿತು. ಈ ಪೈಕಿ 75 ಮಳಿಗೆಗಳಲ್ಲಿ ಕೃಷಿ ಯಂತ್ರೋಪಕರಣಗಳು, ಡ್ರೋನ್, ಸಸ್ಯಗಳ ಕುರಿತು ಮಾಹಿತಿ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಜಾನುವಾರುಗಳಿಗೆ 18 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ವಿಜೇತ ಕುರಿಗಾಹಿಗಳಿಗೆ 5 ಲಕ್ಷ ರೂ. ಹಾಗೂ 2 ಲಕ್ಷ ರೂ. ಬಹುಮಾನ ನೀಡಿ ಗೌರವಿಸಲಾಗುವುದು.



















