Updated on: Apr 08, 2023 | 7:00 AM
ಭಾರತವು ವೈವಿಧ್ಯತೆಯನ್ನು ಹೊಂದಿದ್ದು, ನೀವಿಲ್ಲಿ ಅನೇಕ ತಾಣಗಳನ್ನು ಕಣ್ತುಂಬಿಸಿಕೊಳ್ಳಬಹುದು. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬಿಸಿಲಿನ ಶಾಖ ಹೆಚ್ಚಾಗಿರುವುದರಿಂದ ಭೇಟಿ ನೀಡಲು ಸೂಕ್ತವಾದ ತಾಣಗಳ ಬಗ್ಗೆ ಮಾಹಿತಿ ಇಲ್ಲಿದೆ.
ಮನಾಲಿ: ಹಿಮಾಚಲ ಪ್ರದೇಶದ ಹಿಮಾಲಯ ಪರ್ವತಗಳಲ್ಲಿರುವ ಸುಂದರವಾದ ಗಿರಿಧಾಮವಾಗಿದೆ. ಬೇಸಿಗೆಯಲ್ಲಿ ನೀವಿಲ್ಲಿ ಹಿಮ ಕರಗುವುದನ್ನು ಕಾಣಬಹುದು. ಸೇಬಿನ ತೋಟ ಇಲ್ಲಿನ ಮತ್ತೊಂದು ವಿಶೇಷತೆ.
ಲಡಾಖ್ : ಭಾರತದ ಉತ್ತರ ಭಾಗದಲ್ಲಿರುವ ಸುಂದರ ಪ್ರದೇಶ ಇದಾಗಿದ್ದು, ನೀವಿಲ್ಲಿ ಪ್ರಾಚೀನ ಮಠಗಳು, ಅಲ್ಲಿನ ಸಂಸ್ಕೃತಿ ವೈವಿಧ್ಯತೆಯನ್ನು ಕಣ್ತುಂಬಿಸಿಕೊಳ್ಳಬಹುದು. ಈ ಬೇಸಿಗೆಯಲ್ಲಿ ಸೂಕ್ತವಾದ ತಾಣವೂ ಹೌದು.
ಊಟಿ :ತಮಿಳುನಾಡಿನ ಒಂದು ಸುಂದರ ಗಿರಿಧಾಮವಾಗಿದೆ. ಏಪ್ರಿಲ್ ಮೇ ತಿಂಗಳುಗಳಲ್ಲಿ ಇಲ್ಲಿನ ಹವಾಮಾನವು ಆಹ್ಲಾದಕರವಾಗಿರುತ್ತದೆ. ಜೊತೆಗೆ ಈ ಸಮಯದಲ್ಲಿ ಬೆಟ್ಟಗಳು ಸುಂದರವಾದ ಹೂವಿನಿಂದ ಆವೃತವಾಗಿರುತ್ತದೆ.
ಡಾರ್ಜಿಲಿಂಗ್: ಪಶ್ಚಿಮ ಬಂಗಾಳದ ಹಿಮಾಲಯದ ತಪ್ಪಲಿನಲ್ಲಿರುವ ಸುಂದರವಾದ ಗಿರಿಧಾಮ ಇದಾಗಿದೆ. ಇಲ್ಲಿನ ಚಹಾ ತೋಟಗಳು, ರಮಣೀಯ ಸೌಂದರ್ಯ ಮತ್ತು ವಾಸ್ತು ಶಿಲ್ಪಕ್ಕೆ ಹೆಸರುವಾಸಿಯಾಗಿದೆ.