AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಪುಷ್ಪರಾಜ್​​ಗೆ ಹುಟ್ಟುಹಬ್ಬದ ಶುಭಾಶಯ’; ಅಲ್ಲು ಅರ್ಜುನ್​ಗೆ ಶುಭಾಶಯ ತಿಳಿಸಿದ ರಶ್ಮಿಕಾ ಮಂದಣ್ಣ

‘ನನ್ನ ಪುಷ್ಪರಾಜ್​ಗೆ ಹುಟ್ಟುಹಬ್ಬದ ಶುಭಾಶಯ’ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಇವರ ಫೋಟೋ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ.

‘ನನ್ನ ಪುಷ್ಪರಾಜ್​​ಗೆ ಹುಟ್ಟುಹಬ್ಬದ ಶುಭಾಶಯ’; ಅಲ್ಲು ಅರ್ಜುನ್​ಗೆ ಶುಭಾಶಯ ತಿಳಿಸಿದ ರಶ್ಮಿಕಾ ಮಂದಣ್ಣ
ಅಲ್ಲು ಅರ್ಜುನ್-ರಶ್ಮಿಕಾ
ರಾಜೇಶ್ ದುಗ್ಗುಮನೆ
|

Updated on: Apr 08, 2023 | 12:55 PM

Share

ಮುಖ್ಯಾಂಶಗಳು

  • ಅಲ್ಲು ಅರ್ಜುನ್​ಗೆ ಬರ್ತ್​ಡೇ ವಿಶ್ ಮಾಡಿದ ರಶ್ಮಿಕಾ
  • ವೈರಲ್ ಆಯ್ತು ಹೊಸ ಫೋಟೋಸ್
  • ಅಲ್ಲು ಅರ್ಜುನ್​ ಜೊತೆಗಿನ ಫೋಟೋ ಕಂಡು ಅಭಿಮಾನಿಗಳು ಖುಷ್

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಅಲ್ಲು ಅರ್ಜುನ್ ‘ಪುಷ್ಪ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಅಲ್ಲು ಅರ್ಜುನ್ ಪುಷ್ಪರಾಜ್ ಆಗಿ ಮಿಂಚಿದರೆ, ರಶ್ಮಿಕಾ ಶ್ರೀವಲ್ಲಿ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಇವರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ. ಇಂದು (ಏಪ್ರಿಲ್ 8) ಅಲ್ಲು ಅರ್ಜುನ್ (Allu Arjun) ಬರ್ತ್​ಡೇ. ಅವರಿಗೆ ರಶ್ಮಿಕಾ ಮಂದಣ್ಣ ಅವರು ವಿಶ್ ಮಾಡಿದ್ದಾರೆ. ‘ನನ್ನ ಪುಷ್ಪರಾಜ್​ಗೆ ಹುಟ್ಟುಹಬ್ಬದ ಶುಭಾಶಯ’ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಇವರ ಫೋಟೋ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ಈ ಜೋಡಿಯನ್ನು ಮತ್ತೆ ತೆರೆಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ.

‘ಪುಷ್ಪ 2’ ಸಿನಿಮಾ ಬರುತ್ತಿದೆ. ನಿರ್ದೇಶಕ ಸುಕುಮಾರ್ ಅವರು ಈ ಚಿತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸ್ಕ್ರಿಪ್ಟ್ ಕೆಲಸಕ್ಕಾಗಿ ಒಂದು ವರ್ಷ ತೆಗೆದುಕೊಂಡಿದ್ದಾರೆ. ಚಿತ್ರದ ಗ್ಲಿಂಪ್ಸ್ ರಿಲೀಸ್ ಆಗಿದೆ. ಇದರಲ್ಲಿ ಅಲ್ಲು ಅರ್ಜುನ್ ಅವರು ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ಜೊತೆ ಇರುವ ಫೋಟೋ ಹಂಚಿಕೊಂಡು ಬರ್ತ್​ಡೇ ವಿಶ್ ಮಾಡಿದ್ದಾರೆ ರಶ್ಮಿಕಾ.

‘ಹುಟ್ಟುಹಬ್ಬದ ಶುಭಾಶಯಗಳು ನನ್ನ ಪುಷ್ಪರಾಜ್​. ಪುಷ್ಪ ಆಗಿ ನಿಮ್ಮ ಆ್ಯಕ್ಷನ್ ನೋಡೋಕೆ ಇಡೀ ವಿಶ್ವ ಕಾದಿದೆ. ನಿಮ್ಮನ್ನು ಜನರು ಹೆಚ್ಚೆಚ್ಚು ಪ್ರೀತಿಸುತ್ತಾರೆ ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಪೋಸ್ಟ್​ಗೆ ಅಭಿಮಾನಿಗಳ ಕಡೆಯಿಂದ ಪಾಸಿಟಿವ್ ಕಮೆಂಟ್ಸ್ ಬಂದಿವೆ.

ರಶ್ಮಿಕಾ ಮಂದಣ್ಣ ಅವರ ಬರ್ತ್​ಡೇ ಪ್ರಯುಕ್ತ ಇತ್ತೀಚೆಗೆ ‘ಪುಷ್ಪ 2’ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿತ್ತು. ರಶ್ಮಿಕಾ ಮಂದಣ್ಣ ಅವರು ಶ್ರೀವಲ್ಲಿ ಪೋಸ್ಟರ್ ಮೂಲಕ ಮಿಂಚಿದ್ದಾರೆ. ಅವರ ಪಾತ್ರ ‘ಚಾಪ್ಟರ್ 2’ನಲ್ಲಿ ಯಾವ ರೀತಿಯಲ್ಲಿ ಇರಲಿದೆ ಎನ್ನುವುದನ್ನು ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: Rashmika Mandanna: ಈ ಸ್ಟಾರ್ ನಟರ ಜೊತೆ ನಟಿಸೋಕೆ ನೋ ಎಂದಿದ್ದ ರಶ್ಮಿಕಾ ಮಂದಣ್ಣ; ನಟಿಗೆ ಈ ಬಗ್ಗೆ ಇದೆ ವಿಷಾದ?

ರಶ್ಮಿಕಾ ಮಂದಣ್ಣ ಕೈಯಲ್ಲಿ ‘ಪುಷ್ಪ 2’ ಜೊತೆ ‘ಅನಿಮಲ್​’ ಸಿನಿಮಾ ಕೂಡ ಇದೆ. ಎರಡೂ ಸಿನಿಮಾಗಳು ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿವೆ. ಇದರ ಜೊತೆಗೆ ನಿತೀನ್ ಜೊತೆ ರಶ್ಮಿಕಾ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಮಹಿಳಾ ಪ್ರಧಾನ ಸಿನಿಮಾ ‘ರೇನ್​ಬೋ’ ಚಿತ್ರಕ್ಕೂ ರಶ್ಮಿಕಾ ನಾಯಕಿ. ಈ ಎರಡೂ ಹೊಸ ಚಿತ್ರಗಳು ತೆಲುಗಿನಲ್ಲಿ ಸಿದ್ಧಗೊಳ್ಳುತ್ತಿದ್ದು, ರಶ್ಮಿಕಾ ಬರ್ತ್​ಡೇ ಹೊಸ್ತಿಲಲ್ಲಿ ಮುಹೂರ್ತ ನಡೆದಿವೆ. ಈ ಕಾರಣಕ್ಕೂ ರಶ್ಮಿಕಾ ಫ್ಯಾನ್ಸ್ ಖುಷಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು