AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ-ವಿಜಯ್ ದೇವರಕೊಂಡ ಒಂದೇ ಮನೆಯಲ್ಲಿ ವಾಸ? ಸಾಕ್ಷಿ ಹುಡುಕಿದ ಅಭಿಮಾನಿಗಳು

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆಯೇ? ಹೌದೆನ್ನುತ್ತಿದೆ ಈ ಚಿತ್ರ. ಅಭಿಮಾನಿಗಳ ಅನುಮಾನಕ್ಕೆ ಸ್ವತಃ ರಶ್ಮಿಕಾ ಮಂದಣ್ಣ ಉತ್ತರ ನೀಡಿದ್ದಾರೆ.

ರಶ್ಮಿಕಾ-ವಿಜಯ್ ದೇವರಕೊಂಡ ಒಂದೇ ಮನೆಯಲ್ಲಿ ವಾಸ? ಸಾಕ್ಷಿ ಹುಡುಕಿದ ಅಭಿಮಾನಿಗಳು
ವಿಜಯ್-ರಶ್ಮಿಕಾ
ಮಂಜುನಾಥ ಸಿ.
|

Updated on: Apr 06, 2023 | 3:17 PM

Share

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Deverakonda) ಅವರುಗಳು ಪ್ರೀತಿ-ಗೆಳೆತನದ ಬಗ್ಗೆ ಆಗಾಗ್ಗೆ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಇಬ್ಬರೂ ಆಫ್​ಸ್ಕ್ರೀನ್​ನಲ್ಲಿಯೂ ಬಹಳ ಆತ್ಮೀಯರಾಗಿದ್ದಾರಾದರೂ ತಮ್ಮ ನಡುವೆ ಪ್ರೀತಿ-ಗೀತಿ-ಇತ್ಯಾದಿಗಳಿಲ್ಲವೆಂದೇ ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಸೋಷಿಯಲ್ ಮೀಡಿಯಾ ಕುತೂಹಲಿಗಳು, ಇವರಿಬ್ಬರು ಪರಸ್ಪರ ಪ್ರೀತಿಯಲ್ಲಿರುವ ಬಗ್ಗೆ ಗುಲ್ಲು ಹಬ್ಬಿಸುತ್ತಿರುತ್ತಾರೆ ಅದಕ್ಕೆ ತಕ್ಕಂತೆ ಸಾಕ್ಷಿಗಳನ್ನು ಸಹ ನೀಡುತ್ತಿರುತ್ತಾರೆ. ಇದೀಗ ಮತ್ತೆ ಇಂಥಹುದೇ ಸುದ್ದಿ ಹೊರಗೆ ಬಂದಿದೆ, ಇದಕ್ಕೆ ಕಾರಣವಾಗಿದ್ದು ನಿನ್ನೆಯಷ್ಟೆ (ಏಪ್ರಿಲ್ 5) ನಟಿ ರಶ್ಮಿಕಾ ಹಂಚಿಕೊಂಡಿದ್ದ ವಿಡಿಯೋ.

ಏಪ್ರಿಲ್ 05 ರಂದು ನಟಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ. ಹಲವು ಸೆಲೆಬ್ರಿಟಿಗಳು ರಶ್ಮಿಕಾರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದರು. ಬಳಿಕ ರಶ್ಮಿಕಾ ಸಹ, ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡು, ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದರು. ಬಿಳಿ ಬಣ್ಣದ ಉಡುಗೆ ತೊಟ್ಟು ಬೆರಳಿಗೆ ಸುಂದರವಾದ ಉಂಗುರ ತೊಟ್ಟು ವಿಡಿಯೋದಲ್ಲಿ ನಟಿ ಕಾಣಿಸಿಕೊಂಡಿದ್ದರು. ವಿಡಿಯೋ ರೆಕಾರ್ಡ್ ಮಾಡುವಾಗ ರಶ್ಮಿಕಾ ಕೂತಿದ್ದ ಕೋಣೆಯ ತಾರಸಿ, ಹಾಗೂ ಈ ಹಿಂದೆ ವಿಜಯ್ ದೇವರಕೊಂಡ ಹಂಚಿಕೊಂಡಿದ್ದ ಫೋಟೊ ಒಂದರ ತಾರಸಿ ಥೇಟ್ ಒಂದೇ ರೀತಿ ಇದೆ. ಇದು ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ.

ನೆಟ್ಟಿಗನೊಬ್ಬ ಈ ಸೂಕ್ಷ್ಮವನ್ನು ಗುರುತಿಸಿ ಈ ಬಗ್ಗೆ ಟ್ವೀಟ್ ಮಾಡಿದ್ದು, ವಿಜಯ್ ದೇವರಕೊಂಡರ ಚಿತ್ರ ಹಾಗೂ ರಶ್ಮಿಕಾರ ವಿಡಿಯೋ ಅನ್ನು ಒಟ್ಟಿಗೆ ಟ್ವೀಟ್ ಮಾಡಿ ಎರಡರ ತಾರಸಿಯು ಒಂದೇ, ವಿಜಯ್ ಹಾಗೂ ರಶ್ಮಿಕಾ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬುದಕ್ಕೆ ಇದಕ್ಕಿಂತಲೂ ಸಾಕ್ಷಿ ಬೇಕೆ ಎಂದಿದ್ದಾನೆ. ಮಾತ್ರವಲ್ಲದೆ, ವಿಡಿಯೋದಲ್ಲಿ ರಶ್ಮಿಕಾ ಧರಿಸಿರುವ ಉಂಗುರ ವಿಜಯ್ ದೇವರಕೊಂಡ ನೀಡಿದ್ದು ಎಂದು ಸಹ ಹೇಳಿದ್ದಾನೆ. ಆ ವ್ಯಕ್ತಿಯ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ನಟಿ ರಶ್ಮಿಕಾ ಮಂದಣ್ಣ, ಈ ಬಗ್ಗೆ ಬಹಳ ಯೋಚನೆ ಮಾಡಲು ಹೋಗಬೇಡಿ ಎಂದಿದ್ದಾರೆ.

ರಶ್ಮಿಕಾ ಕೆಲವು ದಿನಗಳ ಹಿಂದೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು ಆ ವಿಡಿಯೋದಲ್ಲಿ ವಿಜಯ್ ದೇವರಕೊಂಡ ಧ್ವನಿ ಹಿನ್ನೆಲೆಯಲ್ಲಿ ಕೇಳಿ ಬಂದಿತ್ತು. ಆಗಲೂ ಸಹ ನೆಟ್ಟಿಗರು ಇವರಿಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆ, ಲಿವಿನ್ ರಿಲೇಶನ್​ಷಿಪ್​ನಲ್ಲಿದ್ದಾರೆ ಎಂದಿದ್ದರು. ಅದಕ್ಕೂ ಮುನ್ನ ರಶ್ಮಿಕಾ ಮಂದಣ್ಣ ವಿದೇಶ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿಂದ ಚಿತ್ರಗಳನ್ನು ಹಂಚಿಕೊಂಡಿದ್ದರು. ಆ ಬಳಿಕ ವಿಜಯ್ ದೇವರಕೊಂಡ ಸಹ ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದರು. ಇಬ್ಬರು ಚಿತ್ರಗಳು ಒಂದೇ ಜಾಗದ್ದಾಗಿದ್ದವು. ಇದು ಸಹ ಅನುಮಾನಕ್ಕೆ ಕಾರಣವಾಯ್ತು ಆದರೆ ಚಿತ್ರಗಳ ಬಗ್ಗೆ ಕ್ಲಾರಿಟಿ ನೀಡಿದ ನಟಿ ರಶ್ಮಿಕಾ, ಪ್ರವಾಸಕ್ಕೆ ಹೋಗಿದ್ದು ನಿಜ ಆದರೆ ನಾನೂ ಹಾಗೂ ವಿಜಯ್ ಮಾತ್ರವೇ ಹೋಗಿರಲಿಲ್ಲ, ಇನ್ನೂ ಹಲವು ಗೆಳೆಯರು ನಮ್ಮೊಟ್ಟಿಗೆ ಪ್ರವಾಸಕ್ಕೆ ಬಂದಿದ್ದರು, ಎಲ್ಲ ಗೆಳೆಯರು ಸೇರಿ ಪ್ರವಾಸಕ್ಕೆ ಹೋಗಿದ್ದೆವು ಎಂದಿದ್ದರು.

ಇದನ್ನೂ ಓದಿ: ವಿಜಯ್ ದೇವರಕೊಂಡ ಅಲ್ಲ, ತೆಲುಗಿನ ಈ ನಟನ ಜೊತೆ ರಶ್ಮಿಕಾ ಮಂದಣ್ಣ ಸುತ್ತಾಟ

ರಶ್ಮಿಕಾ ಹಾಗೂ ವಿಜಯ್ ಒಟ್ಟಿಗೆ ಗೀತ ಗೋವಿಂದಂ ಸಿನಿಮಾದಲ್ಲಿ ನಟಿಸಿದ್ದರು. ಆಗಿನಿಂದಲೂ ಈ ಇಬ್ಬರ ನಡುವೆ ಏನೋ ಇದೆ ಎಂಬ ಗುಲ್ಲು ಹರಿದಾಡುತ್ತಲೇ ಇದೆ. ಈ ವರೆಗೆ ಎರಡು ಸಿನಿಮಾಗಳಲ್ಲಿ ರಶ್ಮಿಕಾ ಹಾಗೂ ವಿಜಯ್ ಒಟ್ಟಿಗೆ ನಟಿಸಿದ್ದಾರೆ. ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೆಡ್, ಇದೀಗ ಗೀತ ಗೋವಿಂದಂ ಸಿನಿಮಾದ ಎರಡನೇ ಭಾಗ ನಿರ್ಮಾಣವಾಗಲಿದ್ದು, ಈ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಾರೆಯೇ ಇಲ್ಲವೆ ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್