AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijay Deverakonda: ರಶ್ಮಿಕಾ ಬಳಿಕ ಮತ್ತೊಬ್ಬ ಕನ್ನಡತಿ ಜೊತೆ ವಿಜಯ್ ದೇವರಕೊಂಡ

ಅರ್ಜುನ್ ರೆಡ್ಡಿಯ ಮೂಲಕ ಗಮನ ಸೆಳೆದಿದ್ದ ವಿಜಯ್ ದೇವರಕೊಂಡ ಅನ್ನು ಭರವಸೆಯ ಸ್ಟಾರ್ ಮಾಡುವಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಜೊತೆ ನಟಿಸಿದ ಗೀತ ಗೋವಿಂದಂ ಸಿನಿಮಾದ ಯೋಗದಾನ ದೊಡ್ಡದು. ಇದೀಗ ಲೈಗರ್ ಸೋಲಿನಿಂದ ಕಂಗೆಟ್ಟಿರುವ ವಿಜಯ್ ದೇವರಕೊಂಡ ಮತ್ತೊಂದು ಹಿಟ್​ಗಾಗಿ ಹುಡುಕುತ್ತಿದ್ದು, ತಮ್ಮ ಮುಂದಿನ ಸಿನಿಮಾದಲ್ಲಿ ಮತ್ತೊಬ್ಬ ಕನ್ನಡ ನಟಿಯೊಟ್ಟಿಗೆ ರೊಮ್ಯಾನ್ಸ್ ಮಾಡಲು ಸಿದ್ಧವಾಗಿದ್ದಾರೆ.

Vijay Deverakonda: ರಶ್ಮಿಕಾ ಬಳಿಕ ಮತ್ತೊಬ್ಬ ಕನ್ನಡತಿ ಜೊತೆ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ
ಮಂಜುನಾಥ ಸಿ.
|

Updated on: Mar 02, 2023 | 10:04 PM

Share

ಅರ್ಜುನ್ ರೆಡ್ಡಿಯ (Arjun Reddy) ಮೂಲಕ ಗಮನ ಸೆಳೆದಿದ್ದ ವಿಜಯ್ ದೇವರಕೊಂಡ (Vijay Deverakonda) ಅನ್ನು ಭರವಸೆಯ ಸ್ಟಾರ್ ಮಾಡುವಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ನಟಿಸಿದ ಗೀತ ಗೋವಿಂದಂ ಸಿನಿಮಾದ ಯೋಗದಾನ ದೊಡ್ಡದು. ಇದೀಗ ಲೈಗರ್ ಸೋಲಿನಿಂದ ಕಂಗೆಟ್ಟಿರುವ ವಿಜಯ್ ದೇವರಕೊಂಡ ಮತ್ತೊಂದು ಹಿಟ್​ಗಾಗಿ ಹುಡುಕುತ್ತಿದ್ದು, ತಮ್ಮ ಮುಂದಿನ ಸಿನಿಮಾದಲ್ಲಿ ಮತ್ತೊಬ್ಬ ಕನ್ನಡ ನಟಿಯೊಟ್ಟಿಗೆ ರೊಮ್ಯಾನ್ಸ್ ಮಾಡಲು ಸಿದ್ಧವಾಗಿದ್ದಾರೆ.

ಲೈಗರ್ ಸೋಲಿನಿಂದ ಕಂಗೆಟ್ಟಿರುವ ವಿಜಯ್ ದೇವರಕೊಂಡ, ಸಮಂತಾ ಜೊತೆಗೆ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದರು. ಆದರೆ ಸಮಂತಾರ ಆರೋಗ್ಯ ಸಮಸ್ಯೆಯ ಕಾರಣದಿಂದ ಖುಷಿ ಸಿನಿಮಾದ ಚಿತ್ರೀಕರಣ ಅರ್ಧಕ್ಕೆ ನಿಂತಿದ್ದು ಶೀಘ್ರದಲ್ಲಿಯೇ ಶುರುವಾಗುವ ಲಕ್ಷಣಗಳಿಲ್ಲ. ಹಾಗಾಗಿ ಹೊಸ ಸಿನಿಮಾದತ್ತ ವಿಜಯ್ ದೇವರಕೊಂಡ ಹೊರಳಿದ್ದು, ಹೊಸ ಸಿನಿಮಾಕ್ಕೆ ಕನ್ನಡತಿಯೇ ನಾಯಕಿಯಾಗಲಿದ್ದಾರೆ.

ಕನ್ನಡದ ನಟಿ ಶ್ರೀಲೀಲಾ ಇದೀಗ ತೆಲುಗು ಚಿತ್ರರಂಗದ ಹೊಸ ಕ್ರಶ್ ಆಗಿದ್ದು, ಈಗಾಗಲೇ ಮಾಸ್ ಮಹಾರಾಜ ರವಿತೇಜ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ವಿಜಯ್ ದೇವರಕೊಂಡ ನಟನೆಯ ಮುಂದಿನ ಸಿನಿಮಾಕ್ಕೂ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ.

ವಿಜಯ್ ದೇವರಕೊಂಡರ ಮುಂದಿನ ಸಿನಿಮಾವನ್ನು ನಿರ್ದೇಶಕ ಗೌತಮ್ ತಿನ್ನುನಾರಿ ನಿರ್ದೇಶನ ಮಾಡಲಿದ್ದು ಈ ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ವಿಜಯ್ ದೇವರಕೊಂಡ ಮಿಂಚಲಿದ್ದಾರೆ. ಇದೊಂದು ಸ್ಪೈ ಥ್ರಿಲ್ಲರ್ ಕತೆಯನ್ನು ಒಳಗೊಂಡಿದ್ದು, ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ.

ನಟಿ ಶ್ರೀಲೀಲಾಗೆ ತೆಲುಗು ಚಿತ್ರರಂಗ ಹೊಸದೇನೂ ಅಲ್ಲ. 2021 ರಲ್ಲಿ ಪೆಳ್ಳಿ ಸಂದಡಿ ಹೆಸರಿನ ಸಿನಿಮಾದಲ್ಲಿ ನಟಿಸಿದ್ದ ಶ್ರೀಲೀಲಾ, ಕಳೆದ ವರ್ಷ ಬಿಡುಗಡೆ ಆದ ಧಮಾಕಾ ಸಿನಿಮಾದಲ್ಲಿ ರವಿತೇಜ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾದ ಜೊತೆಗೆ ತೆಲುಗಿನಲ್ಲಿ ಹಲವು ಅವಕಾಶಗಳು ಅರಸಿ ಬರುತ್ತಿವೆ.

ಮಹೇಶ್ ಬಾಬು ನಟನೆಯ ಹೊಸ ಸಿನಿಮಾದಲ್ಲಿ ನಟಿಸುತ್ತಿರುವ ಶ್ರೀಲೀಲಾ, ನವೀನ್ ಪೋಲಿಶೆಟ್ಟಿ ನಟನೆಯ ಅನಗನಗಾ ಒಕ ರಾಜು ಹೆಸರಿನ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ತೆಲುಗು-ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣಗೊಳ್ಳುತ್ತಿರುವ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ನಟನೆಯ ಮೊದಲ ಸಿನಿಮಾ ಜೂನಿಯರ್​ನಲ್ಲಿಯೂ ಶ್ರೀಲೀಲಾ ನಾಯಕಿ. ಬೊಯಪಾಟಿ ಶ್ರೀನು ನಿರ್ದೇಶನದ ಹೊಸ ಸಿನಿಮಾದಲ್ಲಿಯೂ ಶ್ರೀಲೀಲಾ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದೀಗ ವಿಜಯ್ ದೇವರಕೊಂಡ ಸಿನಿಮಾದಲ್ಲಿಯೂ ನಟಿಸುವ ಸಾಧ್ಯತೆ ದಟ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ