AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್ ಅಧಿಕಾರಿಯಾಗಿ ವಿಜಯ್ ದೇವರಕೊಂಡ ಕಂಬ್ಯಾಕ್; ಖ್ಯಾತ ನಿರ್ದೇಶಕನ ಜತೆ ಸಿನಿಮಾ

ಮೊದಲ ಪೋಸ್ಟರ್​ನಲ್ಲಿ ವಿಜಯ್ ದೇವರಕೊಂಡ ಅವರ ಮುಖ ಕಂಡಿಲ್ಲ. ಆದಾಗ್ಯೂ ಪೋಸ್ಟರ್ ಸಾಕಷ್ಟು ಗಮನ ಸೆಳೆದಿದೆ. ಪೋಸ್ಟರ್​ನಲ್ಲಿ ವಿಜಯ್ ದೇವರಕೊಂಡ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಪೊಲೀಸ್ ಅಧಿಕಾರಿಯಾಗಿ ವಿಜಯ್ ದೇವರಕೊಂಡ ಕಂಬ್ಯಾಕ್; ಖ್ಯಾತ ನಿರ್ದೇಶಕನ ಜತೆ ಸಿನಿಮಾ
ವಿಜಯ್ ದೇವರಕೊಂಡ ಚಿತ್ರದ ಹೊಸ ಪೋಸ್ಟರ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Jan 14, 2023 | 10:42 AM

Share

ವಿಜಯ್ ದೇವರಕೊಂಡ (Vijay Devarakonda) ಅವರು ‘ಲೈಗರ್​’ ಸೋಲಿನ ಬಳಿಕ ಸೈಲೆಂಟ್ ಆಗಿದ್ದರು. ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿರಲಿಲ್ಲ. ಸಮಂತಾ ಅನಾರೋಗ್ಯದಿಂದ ‘ಖುಷಿ’ ಚಿತ್ರದ ಕೆಲಸಗಳು ನಿಂತಿವೆ. ಈಗ ವಿಜಯ್ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ತೆಲುಗಿನಲ್ಲಿ ಸೂಪರ್ ಹಿಟ್ ಆದ ‘ಜೆರ್ಸಿ’ ಸಿನಿಮಾದ ನಿರ್ದೇಶಕ ಗೌತಮ್ ತಿನ್ನೌರಿ ಜತೆ ವಿಜಯ್ ದೇವರಕೊಂಡ ಸಿನಿಮಾ ಮಾಡುತ್ತಿದ್ದಾರೆ. ಶುಕ್ರವಾರ (ಜನವರಿ 13) ಹೊಸ ಪೋಸ್ಟರ್​ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ.

ಮೊದಲ ಪೋಸ್ಟರ್​ನಲ್ಲಿ ವಿಜಯ್ ದೇವರಕೊಂಡ ಅವರ ಮುಖ ಕಂಡಿಲ್ಲ. ಆದಾಗ್ಯೂ ಪೋಸ್ಟರ್ ಸಾಕಷ್ಟು ಗಮನ ಸೆಳೆದಿದೆ. ಪೋಸ್ಟರ್​ನಲ್ಲಿ ವಿಜಯ್ ದೇವರಕೊಂಡ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮುಖವನ್ನು ಬಟ್ಟೆಯಿಂದ ಮುಚ್ಚಲಾಗಿದೆ. ಅವರ ಸುತ್ತಲೂ ಬೆಂಕಿ ಇದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ VD12 ಎಂದು ಹೆಸರು ಇಡಲಾಗಿದೆ. ಈ ಚಿತ್ರವನ್ನು ನಾಗ ವಂಶಿ ಹಾಗೂ ಸಾಯಿ ಸೌಜನ್ಯ ನಿರ್ಮಾಣ ಮಾಡುತ್ತಿದ್ದಾರೆ. ಸಿತಾರಾ ಎಂಟರ್​ಟೇನ್​ಮೆಂಟ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮೂಡಿಬರುತ್ತಿದೆ.

ಇದನ್ನೂ ಓದಿ
Image
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Image
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Image
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Image
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

‘ನನ್ನ ಮುಂದಿನ ಸಿನಿಮಾ. ಈ ಕಥೆಯನ್ನು ಕೇಳಿದಾಗ ಕೆಲ ಹೊತ್ತು ಎದೆಬಡಿತ ನಿಂತಿತ್ತು’ ಎಂದು ವಿಜಯ್ ದೇವರಕೊಂಡ ಬರೆದುಕೊಂಡಿದ್ದಾರೆ. ಗೌತಮ್​ ತಿನ್ನೌರಿ ಅವರು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ತೆಲುಗಿನ ‘ಜೆರ್ಸಿ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದನ್ನು ಹಿಂದಿಗೆ ರಿಮೇಕ್ ಮಾಡಲಾಯಿತು. ಆದರೆ, ಈ ಚಿತ್ರ ಹಿಂದಿಯಲ್ಲಿ ಸದ್ದು ಮಾಡಲಿಲ್ಲ.

ಇದನ್ನೂ ಓದಿ: Mission Majnu Trailer: ಮತ್ತೆ ಪಾಕಿಸ್ತಾನಿ ಯುವತಿಯ ಪಾತ್ರ ಮಾಡಿದ ರಶ್ಮಿಕಾ ಮಂದಣ್ಣ

VD12 ಸಿನಿಮಾ ಪ್ಯಾನ್ ಇಂಡಿಯಾ ಚಿತ್ರ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ನಾಯಕಿ ಯಾರು ಎಂಬ ಪ್ರಶ್ನೆಯೂ ಮೂಡಿದೆ. ರಶ್ಮಿಕಾ ಹಾಗೂ ವಿಜಯ್ ಮತ್ತೊಂದು ಸಿನಿಮಾದಲ್ಲಿ ಒಟ್ಟಾಗಿ ನಟಿಸಲಿದ್ದಾರೆ ಎಂದು ಇತ್ತೀಚೆಗೆ ವರದಿ ಆಗಿತ್ತು. ಅದು ಇದೇ ಚಿತ್ರವೇ ಎಂಬ ಪ್ರಶ್ನೆಯೂ ಅಭಿಮಾನಿಗಳಲ್ಲಿ ಮೂಡಿದೆ. ಈ ಬಗ್ಗೆ ಚಿತ್ರತಂಡದಿಂದಲೇ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ: ಏಕಾಏಕಿ ಮುಂಬೈಗೆ ಭೇಟಿ ನೀಡಿದ ವಿಜಯ್ ದೇವರಕೊಂಡ; ಎಲ್ಲಾ ರಶ್ಮಿಕಾಗೋಸ್ಕರ ಎಂದ ಫ್ಯಾನ್ಸ್

‘ಲೈಗರ್’ ಸಿನಿಮಾ ಸೋತಿದ್ದರಿಂದ ವಿಜಯ್ ದೇವರಕೊಂಡಗೆ ತುರ್ತಾಗಿ ಒಂದು ಗೆಲುವು ಬೇಕಿದೆ. ಈಗ ರಿಲೀಸ್ ಆಗಿರುವ ಪೋಸ್ಟರ್​ ಸಾಕಷ್ಟು ನಿರೀಕ್ಷೆ ಸೃಷ್ಟಿಸಿದ್ದು, ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:32 am, Sat, 14 January 23