ಬಾಕ್ಸ್ ಆಫೀಸ್​​ನಲ್ಲಿ ‘ತುನಿವು’-‘ವಾರಿಸು’ ಮಧ್ಯೆ ಸಮಬಲದ ಫೈಟ್; ಯಾವ ಚಿತ್ರದ ಕಲೆಕ್ಷನ್ ಎಷ್ಟು?

‘ವಾರಿಸು’ ಹಾಗೂ ‘ತುನಿವು’ ಚಿತ್ರಗಳು ಜನವರಿ 11ರಂದು ರಿಲೀಸ್ ಆದವು. ಎರಡೂ ಚಿತ್ರಗಳು ಸಂಕ್ರಾಂತಿ ನಿಮಿತ್ತ ತೆರೆಗೆ ಬಂದಿವೆ. ಮೊದಲ ದಿನ ‘ತುನಿವು’ 26 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ, ‘ವಾರಿಸು’ 26.5 ಕೋಟಿ ಬಾಚಿಕೊಂಡಿತು.

ಬಾಕ್ಸ್ ಆಫೀಸ್​​ನಲ್ಲಿ ‘ತುನಿವು’-‘ವಾರಿಸು’ ಮಧ್ಯೆ ಸಮಬಲದ ಫೈಟ್; ಯಾವ ಚಿತ್ರದ ಕಲೆಕ್ಷನ್ ಎಷ್ಟು?
ವಿಜಯ್-ಅಜಿತ್
Follow us
| Updated By: ರಾಜೇಶ್ ದುಗ್ಗುಮನೆ

Updated on: Jan 14, 2023 | 11:43 AM

ಈ ವಾರ ಕಾಲಿವುಡ್​ನಲ್ಲಿ ಭರ್ಜರಿ ಫೈಟ್ ನಡೆದಿದೆ. ಅಜಿತ್ ಕುಮಾರ್ ನಟನೆಯ ‘ತುನಿವು’ (Thunivu Movie) ಹಾಗೂ ದಳಪತಿ ವಿಜಯ್ ಅಭಿನಯದ ‘ವಾರಿಸು’ (Varisu Movie) ಸಿನಿಮಾಗಳು ಒಂದೇ ದಿನ ರಿಲೀಸ್ ಆಗಿ ಸದ್ದು ಮಾಡುತ್ತಿವೆ. ಕಲೆಕ್ಷನ್ ವಿಚಾರದಲ್ಲಿ ಎರಡೂ ಚಿತ್ರಗಳು ಕೆಲವೇ ಕೋಟಿ ಅಂತರಗಳಲ್ಲಿ ಬಿಸ್ನೆಸ್ ಮಾಡುತ್ತಿವೆ. ಎರಡೂ ಸಿನಿಮಾಗಳನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ ಅನ್ನೋದು ವಿಶೇಷ.

‘ವಾರಿಸು’ ಹಾಗೂ ‘ತುನಿವು’ ಚಿತ್ರಗಳು ಜನವರಿ 11ರಂದು ರಿಲೀಸ್ ಆದವು. ಎರಡೂ ಚಿತ್ರಗಳು ಸಂಕ್ರಾಂತಿ ನಿಮಿತ್ತ ತೆರೆಗೆ ಬಂದಿವೆ. ಮೊದಲ ದಿನ ‘ತುನಿವು’ 26 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ, ‘ವಾರಿಸು’ 26.5 ಕೋಟಿ ಬಾಚಿಕೊಂಡಿತು. ಎರಡು (ಜನವರಿ 12) ಹಾಗೂ ಮೂರನೇ ದಿನವೂ (ಜನವರಿ 13) ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿವೆ. ವಾರದ ದಿನವಾದರೂ ಕೋಟಿ ಕೋಟಿ ಬಾಚಿಕೊಂಡಿವೆ.

ಇದನ್ನೂ ಓದಿ
Image
ಪೊಲೀಸ್ ಅಧಿಕಾರಿಯಾಗಿ ವಿಜಯ್ ದೇವರಕೊಂಡ ಕಂಬ್ಯಾಕ್; ಖ್ಯಾತ ನಿರ್ದೇಶಕನ ಜತೆ ಸಿನಿಮಾ
Image
Sapthami Gowda: ಬಾಲಿವುಡ್​ಗೆ ಕಾಲಿಟ್ಟ ಸಪ್ತಮಿ ಗೌಡ; ವಿವೇಕ್​ ಅಗ್ನಿಹೋತ್ರಿಯ ‘ದಿ ವ್ಯಾಕ್ಸಿನ್​ ವಾರ್​’ ಚಿತ್ರದಲ್ಲಿ ‘ಕಾಂತಾರ’ ನಟಿ
Image
ಬಾಕ್ಸ್ ಆಫೀಸ್​​ನಲ್ಲಿ ‘ತುನಿವು’ ಚಿತ್ರ ಹಿಂದಿಕ್ಕಿದ ವಿಜಯ್ ಸಿನಿಮಾ ‘ವಾರಿಸು’

ಜನವರಿ 13ರಂದು ‘ವಾರಿಸು’ ಸಿನಿಮಾ ಭಾರತದಲ್ಲಿ 10 ಕೋಟಿ ರೂಪಾಯಿ ಕಮಾಯಿ ಮಾಡಿದೆ ಎನ್ನಲಾಗಿದೆ. ಈ ಮೂಲಕ ಸಿನಿಮಾದ ಕಲೆಕ್ಷನ್ 57 ಕೋಟಿ ರೂಪಾಯಿ ದಾಟಿದೆ. ‘ತುನಿವು’ ಸಿನಿಮಾ ಶುಕ್ರವಾರ 8.5 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 52 ಕೋಟಿ ರೂಪಾಯಿ ಆಗಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಲೆಕ್ಕಾಚಾರ ಇನ್ನಷ್ಟೇ ಸಿಗಬೇಕಿದೆ.

ಇಂದು (ಜನವರಿ 14) ಹಾಗೂ ನಾಳೆ (ಜನವರಿ 15) ವೀಕೆಂಡ್. ಜತೆಗೆ ಹಬ್ಬದ ಸಂಭ್ರಮ. ಈ ಅವಧಿಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಾರೆ. ಹೀಗಾಗಿ, ಎರಡೂ ಚಿತ್ರಗಳಿಗೆ ಈ ದಿನ ಅಗ್ನಿಪರೀಕ್ಷೆಯ ದಿನವಾಗಿದೆ.

ಇದನ್ನೂ ಓದಿ: Thalapathy Vijay: ‘ವಾರಿಸು’ ಸಿನಿಮಾದಲ್ಲಿ ನಟಿಸಲು 150 ಕೋಟಿ ರೂಪಾಯಿ ಸಂಭಾವನೆ ಪಡೆದ ದಳಪತಿ ವಿಜಯ್​

ದಳಪತಿ ವಿಜಯ್ ಹಾಗೂ ಅಜಿತ್ ಅಭಿಮಾನಿಗಳ ಮಧ್ಯೆ ಫೈಟ್ ಇದ್ದೇ ಇದೆ. ಹೀಗಾಗಿ, ‘ವಾರಿಸು’ ಹಾಗೂ ‘ತುನಿವು’ ಚಿತ್ರದ ಕಲೆಕ್ಷನ್ ಮೇಲೆ ಅಭಿಮಾನಿಗಳು ಕಣ್ಣಿಟ್ಟಿರುತ್ತಾರೆ. ಹೀಗಾಗಿ, ಈ ಎರಡು ಚಿತ್ರಗಳಲ್ಲಿ ಯಾವ ಸಿನಿಮಾ ಹೆಚ್ಚು ಗಳಿಕೆ ಮಾಡಲಿದೆ ಎಂಬ ಕುತೂಹಲದಲ್ಲಿ ಅಭಿಮಾನಿಗಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘