‘ಆದಿಪುರುಷ್​​’ ಚಿತ್ರಕ್ಕೆ ಮುಳುವಾದ ವಿವಾದ; ಉತ್ತರಿಸಲು ಸೆನ್ಸಾರ್ ಮಂಡಳಿಗೆ ಕೋರ್ಟ್​ ಆದೇಶ

ಶನಿವಾರ (ಜನವರಿ 14) ಅಲಹಾಬಾದ್ ಹೈಕೋರ್ಟ್​​ನ ಲಖನೌ ಪೀಠವು ಸೆನ್ಸಾರ್ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ. ಸಲ್ಲಿಕೆ ಆದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತರಿಸುವಂತೆ ಕೋರ್ಟ್​ ಸೂಚನೆ ನೀಡಿದೆ.

‘ಆದಿಪುರುಷ್​​’ ಚಿತ್ರಕ್ಕೆ ಮುಳುವಾದ ವಿವಾದ; ಉತ್ತರಿಸಲು ಸೆನ್ಸಾರ್ ಮಂಡಳಿಗೆ ಕೋರ್ಟ್​ ಆದೇಶ
ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 14, 2023 | 2:48 PM

ಪ್ರಭಾಸ್ (Prabhas) ನಟನೆಯ ‘ಆದಿಪುರುಷ್​’ ಚಿತ್ರಕ್ಕೆ ಒಂದಾದ ಮೇಲೆ ಒಂದರಂತೆ ವಿವಾದಗಳು ಸುತ್ತಿಕೊಳ್ಳುತ್ತಿವೆ. ವಿವಾದಗಳಿಂದ ಚಿತ್ರತಂಡ ದೂರ ಉಳಿಯಬೇಕು ಎಂದುಕೊಂಡರೂ ಅದು ಸಾಧ್ಯವಾಗುತ್ತಿಲ್ಲ. ಸಿನಿಮಾ ಬಗ್ಗೆ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಚಿತ್ರದ ಟೀಸರ್ ಈ ನಿರೀಕ್ಷೆಯನ್ನು ನಾಶ ಮಾಡಿತ್ತು. ಜನರು ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿದರು. ಚಿತ್ರದಲ್ಲಿ ರಾವಣನ ಪಾತ್ರ ಮಾಡಿದ ಸೈಫ್ ಅಲಿ ಖಾನ್​ (Saif Ali Khan) ಖಿಲ್ಜಿಯ ರೀತಿ ಕಾಣುತ್ತಾನೆ ಎಂಬ ಆರೋಪಗಳು ಬಂದವು. ಈಗ ಸಿನಿಮಾಗೆ ಮತ್ತೊಂದು ತೊಂದರೆ ಆಗುವ ಸೂಚನೆ ಸಿಕ್ಕಿದೆ.

ವಿಎಫ್​ಎಕ್ಸ್ ವಿಚಾರದಲ್ಲಿ ‘ಆದಿಪುರುಷ್​’ ಚಿತ್ರವನ್ನು ಟೀಕಿಸಲಾಗಿದೆ. ರಾವಣನ ಪಾತ್ರ ಸರಿ ಇಲ್ಲ ಎಂದು ದೂರಲಾಗಿದೆ. ಅಷ್ಟೇ ಅಲ್ಲ, ಸಿನಿಮಾದಲ್ಲಿ ವಾನರರ ಜತೆ ಬೇರೆ ಪ್ರಾಣಿಗಳೂ ಸೇರಿಕೊಂಡಿವೆ ಎಂದು ಟೀಕೆ ಮಾಡಲಾಗಿದೆ. ಇದರ ಜತೆಗೆ ತಂಡ ಕಾನೂನು ಸಮರ ಎದುರಿಸುತ್ತಿದೆ. ಈಗ ಸೆನ್ಸಾರ್​ ಮಂಡಳಿಗೆ ಕೋರ್ಟ್​ನಿಂದ ನೋಟಿಸ್ ಹೋಗಿದೆ.

ಶನಿವಾರ (ಜನವರಿ 14) ಅಲಹಾಬಾದ್ ಹೈಕೋರ್ಟ್​​ನ ಲಖನೌ ಪೀಠವು ಸೆನ್ಸಾರ್ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ. ಸಲ್ಲಿಕೆ ಆದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತರಿಸುವಂತೆ ಕೋರ್ಟ್​ ಸೂಚನೆ ನೀಡಿದೆ. ಮುಂದಿನ ಅರ್ಜಿ ವಿಚಾರಣೆ ಫೆಬ್ರವರಿ 21ಕ್ಕೆ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ
Image
‘ಹನುಮಾನ್’ ಚಿತ್ರದ ಟೀಸರ್​ನಲ್ಲಿ ಬರುವ ಗ್ರಾಫಿಕ್ಸ್ ನೋಡಿ ಪ್ರಭಾಸ್​ಗೆ ಚುಚ್ಚಿದ ಸಿನಿಪ್ರಿಯರು
Image
ಟ್ರೋಲ್​ಗಳ ಮಧ್ಯೆ ನಿರ್ದೇಶಕ ಓಂ ರಾವತ್ ಪರ ನಿಂತ ‘ಆದಿಪುರುಷ್’ ನಟಿ ಕೃತಿ ಸನೋನ್
Image
ಟ್ರೋಲ್ ಮಧ್ಯೆಯೂ ಓಂ​ ರಾವತ್​ಗೆ 4 ಕೋಟಿ ರೂ. ಕಾರು ಕೊಟ್ಟ ‘ಆದಿಪುರುಷ್’ ನಿರ್ಮಾಪಕ ಭೂಷಣ್​ ಕುಮಾರ್​?

ಹಿಂದೂ ದೇವರಿಗೆ ಅವಮಾನ ಆಗಿದ್ದು, ಸಿನಿಮಾ ಮೇಲೆ ಬ್ಯಾನ್ ಹೇರಬೇಕು ಎಂದು ಈ ಮೊದಲು ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಆಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದರೆ ಜನವರಿ12ರಂದು ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ವಿಎಫ್​ಎಕ್ಸ್ ಕೆಲಸಗಳು ಪೂರ್ಣಗೊಂಡಿಲ್ಲ ಎನ್ನುವ ಕಾರಣ ನೀಡಿ ಚಿತ್ರದ ರಿಲೀಸ್ ದಿನಾಂಕವನ್ನು ತಂಡ ಮುಂದೂಡಿಕೊಂಡಿದೆ.

ಅರ್ಜಿಯಲ್ಲೇನಿದೆ?

ಕುಲ್ದೀಪ್ ತಿವಾರಿ ಎಂಬುವವರು ಈ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ‘ಸೆನ್ಸಾರ್ ಬೋರ್ಡ್​​ನಿಂದ ಒಪ್ಪಿಗೆ ಪಡೆಯದೇ ಆದಿಪುರುಷ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಮೂಲಕ ನಿಯಮ ಉಲ್ಲಂಘನೆ ಆಗಿದೆ. ಸೀತೆಯ ಪಾತ್ರಕ್ಕೆ ಬೇರೆ ರೀತಿಯ ಉಡುಗೆ ತೊಡಿಸಲಾಗಿದೆ. ಜನರ ನಂಬಿಕೆಗೆ ವಿರುದ್ಧವಾಗಿ ದೇವರನ್ನು ತೋರಿಸಲಾಗಿದೆ. ರಾವಣನ ಪಾತ್ರ ಕೂಡ ಸರಿಯಾಗಿ ಮೂಡಿ ಬಂದಿಲ್ಲ’ ಎಂದು ಕುಲ್ದೀಪ್ ಆರೋಪಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ