AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jayasudha: 64 ವರ್ಷದ ಜಯಸುಧಾ ಹಿಂದೆ ಬಿದ್ದ ಆ ವ್ಯಕ್ತಿ ಯಾರು? ಮೌನ ಮುರಿದ ನಟಿ

ಸಿನಿಮಾದ ಪ್ರೀ ರೀಲಿಸ್ ಈವೆಂಟ್​ನಲ್ಲಿ ಜಯಸುಧಾ ಹಾಜರಿದ್ದರು. ಅವರ ಜತೆ ಓರ್ವ ವಿದೇಶಿ ವ್ಯಕ್ತಿ ಇದ್ದರು. ಇವರ ಜತೆ ಜಯಸುಧಾ ಮೂರನೇ ಮದುವೆ ಆಗಿದ್ದಾರೆ ಎಂದು ವರದಿ ಆಗಿತ್ತು.

Jayasudha: 64 ವರ್ಷದ ಜಯಸುಧಾ ಹಿಂದೆ ಬಿದ್ದ ಆ ವ್ಯಕ್ತಿ ಯಾರು? ಮೌನ ಮುರಿದ ನಟಿ
ಫಿಲಿಪ್ ಜತೆ ಜಯಸುಧಾ
TV9 Web
| Edited By: |

Updated on:Jan 14, 2023 | 5:10 PM

Share

‘ವಾರಿಸು’ ಸಿನಿಮಾದಲ್ಲಿ (Varisu Movie) ದಳಪತಿ ವಿಜಯ್ ತಾಯಿ ಪಾತ್ರ ಮಾಡಿರುವ ನಟಿ ಜಯಸುಧಾ (Jayasudha) ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದರು. ಇದಕ್ಕೆ ಕಾರಣ ಸಿನಿಮಾ ಅಲ್ಲ. ಅವರ ಖಾಸಗಿ ವಿಚಾರ. ಜಯಸುಧಾ ತಮ್ಮ 64ನೇ ವಯಸ್ಸಿನಲ್ಲಿ ಮೂರನೇ ಮದುವೆ ಆಗಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡಿತ್ತು. ಹಲವು ಕಾರ್ಯಕ್ರಮದಲ್ಲಿ ವಿದೇಶಿ ವ್ಯಕ್ತಿ ಜತೆ ಜಯಸುಧಾ ಕಾಣಿಸಿಕೊಂಡಿದ್ದರು. ಮದುವೆ ವದಂತಿ ಹುಟ್ಟಲು ಇದು ಪ್ರಮುಖ ಕಾರಣವಾಗಿತ್ತು. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ.

‘ವಾರಸುಡು’ (ವಾರಿಸು ಚಿತ್ರದ ತೆಲುಗು ಅವತರಣಿಕೆ) ಸಿನಿಮಾದ ಪ್ರೀ ರಿಲೀಸ್​ ಈವೆಂಟ್​ನಲ್ಲಿ ಜಯಸುಧಾ ಹಾಜರಿದ್ದರು. ಅವರ ಜತೆ ಓರ್ವ ವಿದೇಶಿ ವ್ಯಕ್ತಿ ಇದ್ದರು. ಇವರ ಜತೆ ಜಯಸುಧಾ ಮೂರನೇ ಮದುವೆ ಆಗಿದ್ದಾರೆ ಎಂದು ವರದಿ ಆಗಿತ್ತು. ಆದರೆ, ಇದನ್ನು ಅವರು ಅಲ್ಲಗಳೆದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಜಯಸುಧಾ, ‘ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಹೆಸರು ಫಿಲಿಪ್ ರೂಲ್ಸ್. ಅವರು ಅಮೆರಿಕದವರು. ಅವರು ನನ್ನ ಬಯೋಪಿಕ್ ಮಾಡಲು ಭಾರತಕ್ಕೆ ಬಂದಿದ್ದಾರೆ. ಚಿತ್ರರಂಗದಲ್ಲಿ ನನ್ನ ಪ್ರಾಮುಖ್ಯತೆಯ ಬಗ್ಗೆ ತಿಳಿದುಕೊಳ್ಳಲು ಅವರು ಪ್ರತಿ ಕಾರ್ಯಕ್ರಮಕ್ಕೂ ನನ್ನೊಂದಿಗೆ ಬರುತ್ತಿದ್ದಾರೆ’ ಎಂದು ಅಸಲಿ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ
Image
Sanya Iyer: ಬೋಲ್ಡ್ ಫೋಟೋ ಮೂಲಕ ಮಿಂಚಿದ ನಟಿ ಸಾನ್ಯಾ ಐಯ್ಯರ್; ಇಲ್ಲಿದೆ ಗ್ಯಾಲರಿ
Image
ಶರವೇಗದಲ್ಲಿ ‘ಧೂಮಂ’ ಶೂಟಿಂಗ್ ಮುಗಿಸಿದ ಪವನ್ ಕುಮಾರ್​; ರಿಲೀಸ್ ಯಾವಾಗ?
Image
Varisu Movie Review: ಇವ ಎಂಟರ್​​ಟೇನರ್ ವಾರಸುದಾರ; ಎಳೆದಾಟವೇ ಪ್ರೇಕ್ಷಕನಿಗೆ ಭಾರ

‘ಇಂಟರ್‌ನೆಟ್‌ನಲ್ಲಿ ಫಿಲಿಪ್ ನನ್ನ ಬಗ್ಗೆ ತಿಳಿದುಕೊಂಡರು. ನಿಜ ಜೀವನದಲ್ಲಿ ನಾನು ಹೇಗೆ ಇರುತ್ತೇನೆ ಎಂದು ತಿಳಿಯಲು ಇಲ್ಲಿಗೆ ಬಂದರು. ನನ್ನ ಸಿನಿಮಾಗಳು ಮತ್ತು ಶೂಟಿಂಗ್‌ಗಳ ವಿವರಗಳನ್ನು ತಿಳಿಯಲು ಅವರು ನನ್ನ ಜತೆ ಬರುತ್ತಿದ್ದಾರೆ. ಅದು ಬಿಟ್ಟರೆ ಇದರಲ್ಲಿ ಬೇರೇನೂ ಇಲ್ಲ’ ಎಂದು ಜಯಸುಧಾ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Varisu Movie Review: ಇವ ಎಂಟರ್​​ಟೇನರ್ ವಾರಸುದಾರ; ಎಳೆದಾಟವೇ ಪ್ರೇಕ್ಷಕನಿಗೆ ಭಾರ

ಜಯಸುಧಾ ಈ ಹಿಂದೆ ಎರಡು ಮದುವೆ ಆಗಿದ್ದರು. ಕಾಕರ್ಲಪುಡಿ ರಾಜೇಂದ್ರ ಪ್ರಸಾದ್ ಹೆಸರಿನ ಉದ್ಯಮಿಯನ್ನು ಅವರು ಮೊದಲು ಮದುವೆಯಾಗಿದ್ದರು. ಇಬ್ಬರೂ ಬೇರೆ ಆದರು. ಆ ನಂತರ ಅವರು ಬಾಲಿವುಡ್ ಸ್ಟಾರ್ ಹೀರೋ ಜಿತೇಂದ್ರ ಕಪೂರ್ ಅವರ ಸೋದರ ಸಂಬಂಧಿ ನಿತಿನ್ ಕಪೂರ್ ಅವರನ್ನು ವಿವಾಹವಾದರು. ಆರೋಗ್ಯ ಸಮಸ್ಯೆಯಿಂದ 2017ರಲ್ಲಿ ಅವರು ನಿಧನರಾದರು. ಹೀಗಿರುವಾಗಲೇ ಅವರ ಮದುವೆ ವಿಚಾರ ಹಬ್ಬಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 4:25 pm, Sat, 14 January 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್