AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಮೋಷನ್​​ಗೆ ಚಕ್ಕರ್​, ಬಾಯ್​ಫ್ರೆಂಡ್ ಜತೆ ಸುತ್ತಾಟಕ್ಕೆ ಹಾಜರ್​; ಶ್ರುತಿ ಹಾಸನ್​ ನಡೆಗೆ ಅಸಮಾಧಾನ

ಶ್ರುತಿ ಹಾಸನ್ ಅವರು ‘ವಾಲ್ತೇರು​​ ವೀರಯ್ಯ’ ಚಿತ್ರದ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಭಾಗಿ ಆಗಿರಲಿಲ್ಲ. ಶ್ರುತಿಗೆ ಮಾನಸಿಕ ಆರೋಗ್ಯ ಕೆಟ್ಟಿದೆ, ಹೀಗಾಗಿ ಅವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿಲ್ಲ ಎಂದು ಕೆಲವು ಕಡೆಗಳಲ್ಲಿ ವರದಿ ಆಗಿತ್ತು.

ಪ್ರಮೋಷನ್​​ಗೆ ಚಕ್ಕರ್​, ಬಾಯ್​ಫ್ರೆಂಡ್ ಜತೆ ಸುತ್ತಾಟಕ್ಕೆ ಹಾಜರ್​; ಶ್ರುತಿ ಹಾಸನ್​ ನಡೆಗೆ ಅಸಮಾಧಾನ
ಬಾಯ್​ಫ್ರೆಂಡ್ ಜತೆ ಶ್ರುತಿ ಹಾಸನ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jan 14, 2023 | 6:49 PM

Share

ನಟಿ ಶ್ರುತಿ ಹಾಸನ್ (Shruti Haasan) ಅವರಿಗೆ ಈವಾರ ತುಂಬಾನೇ ವಿಶೇಷವಾಗಿತ್ತು. ಇದಕ್ಕೆ ಕಾರಣ ಅವರ ನಟನೆಯ ಎರಡು ಸಿನಿಮಾಗಳು ಒಂದೇ ವಾರ ರಿಲೀಸ್ ಆಗಿವೆ. ನಂದಮೂರಿ ಬಾಲಕೃಷ್ಣ ನಟನೆಯ ‘ವೀರ ಸಿಂಹ ರೆಡ್ಡಿ’ ಹಾಗೂ ಚಿರಂಜೀವಿ ಅಭಿನಯದ ‘ವಾಲ್ತೇರು ವೀರಯ್ಯ’ (Waltair Veerayya) ಸಿನಿಮಾಗಳು ಒಂದು ದಿನ ಗ್ಯಾಪ್​​ನಲ್ಲಿ ತೆರೆಗೆ ಬಂದಿವೆ. ಈ ಎರಡೂ ಚಿತ್ರಕ್ಕೆ ಶ್ರುತಿ ಹಾಸನ್ ನಾಯಕಿ. ಈ ಸಿನಿಮಾದ ಪ್ರಮೋಷನ್​ನಲ್ಲಿ ಶ್ರುತಿ ಭಾಗಿ ಆಗಿಲ್ಲ. ಬದಲಿಗೆ ಮುಂಬೈನಲ್ಲಿ ಬಾಯ್​​ಫ್ರೆಂಡ್ ಜತೆ ಸುತ್ತಾಟ ನಡೆಸಿದ್ದಾರೆ.

ಶ್ರುತಿ ಹಾಸನ್ ಅವರು ‘ವಾಲ್ತೇರು​​ ವೀರಯ್ಯ’ ಚಿತ್ರದ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಭಾಗಿ ಆಗಿರಲಿಲ್ಲ. ಶ್ರುತಿಗೆ ಮಾನಸಿಕ ಆರೋಗ್ಯ ಕೆಟ್ಟಿದೆ, ಹೀಗಾಗಿ ಅವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿಲ್ಲ ಎಂದು ಕೆಲವು ಕಡೆಗಳಲ್ಲಿ ವರದಿ ಆಗಿತ್ತು. ಆದರೆ, ಇದನ್ನು ಶ್ರುತಿ ಅಲ್ಲಗಳೆದಿದ್ದರು. ಅನಾರೋಗ್ಯದ ಕಾರಣ ಈ ಕಾರ್ಯಕ್ರಮಕ್ಕೆ ಬಂದಿರಲಿಲ್ಲ ಎಂದು ಹೇಳಿದ್ದರು.

ಅಚ್ಚರಿ ಎಂದರೆ, ‘ವಾಲ್ತೇರು ವೀರಯ್ಯ’ ರಿಲೀಸ್ ದಿನ ಶ್ರುತಿ ಹಾಸನ್ ಅವರು ಮುಂಬೈನಲ್ಲಿ ತಮ್ಮ ಬಾಯ್​ಫ್ರೆಂಡ್ ಶಾಂತನು ಜತೆ ಸುತ್ತಾಟ ನಡೆಸಿದ್ದಾರೆ. ಇದರ ಫೋಟೋಗಳನ್ನು ಅವರ ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ.

ಇದನ್ನೂ ಓದಿ
Image
Sanya Iyer: ಬೋಲ್ಡ್ ಫೋಟೋ ಮೂಲಕ ಮಿಂಚಿದ ನಟಿ ಸಾನ್ಯಾ ಐಯ್ಯರ್; ಇಲ್ಲಿದೆ ಗ್ಯಾಲರಿ
Image
ಶರವೇಗದಲ್ಲಿ ‘ಧೂಮಂ’ ಶೂಟಿಂಗ್ ಮುಗಿಸಿದ ಪವನ್ ಕುಮಾರ್​; ರಿಲೀಸ್ ಯಾವಾಗ?
Image
Varisu Movie Review: ಇವ ಎಂಟರ್​​ಟೇನರ್ ವಾರಸುದಾರ; ಎಳೆದಾಟವೇ ಪ್ರೇಕ್ಷಕನಿಗೆ ಭಾರ

‘ವಾಲ್ತರು ವೀರಯ್ಯ’ ಬಗ್ಗೆ ಆಗಲೀ ‘ವೀರ ಸಿಂಹ ರೆಡ್ಡಿ’ ಚಿತ್ರದ ಬಗ್ಗೆಯಾಗಲೀ ಶ್ರುತಿ ಹಾಸನ್ ಒಂದೇ ಒಂದು ಅಕ್ಷರ ಬರೆದುಕೊಂಡಿಲ್ಲ. ಅಭಿಮಾನಿಗಳ ಬಳಿ ಸಿನಿಮಾ ನೋಡಿ ಎಂದು ಕೋರಿಲ್ಲ. ಬದಲಿಗೆ ಬಾಯ್​ಫ್ರೆಂಡ್​ ಜತೆ ಸುತ್ತಾಟ ನಡೆಸಿದ್ದಾರೆ. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ. ‘ತೆಲುಗು ಸಿನಿಮಾ ಎಂಬ ಕಾರಣಕ್ಕೆ ಶ್ರುತಿ ಈ ರೀತಿ ಮಾಡಿದ್ದಾರೆ. ತಮಿಳು ಸಿನಿಮಾ ಆದರೆ ಶ್ರುತಿ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದರು’ ಎಂದು ಕೆಲವರು ಬರೆದುಕೊಂಡಿದ್ದಾರೆ. ಸದ್ಯ ಶ್ರುತಿ ನಡೆ ಬಗ್ಗೆ ಫ್ಯಾನ್ಸ್ ಕಡೆಯಿಂದ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ: Shruti Haasan: ಶ್ರುತಿ ಹಾಸನ್​ ಆರೋಗ್ಯದ ಬಗ್ಗೆ ಅಪಪ್ರಚಾರ; ಮಾನಸಿಕ ಕಾಯಿಲೆ ಎಂದವರಿಗೆ ನಟಿ ತಿರುಗೇಟು

ಕಮಲ್ ಹಾಸನ್ ಮಗಳಾದರೂ ಶ್ರುತಿ ಹಾಸನ್ ತಾವಾಗೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಭಾಸ್ ನಟನೆಯ ‘ಸಲಾರ್​’ ಚಿತ್ರಕ್ಕೆ ಶ್ರುತಿ ನಾಯಕಿ ಆಗಿದ್ದಾರೆ. ಈ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ