ಶರವೇಗದಲ್ಲಿ ‘ಧೂಮಂ’ ಶೂಟಿಂಗ್ ಮುಗಿಸಿದ ಪವನ್ ಕುಮಾರ್​; ರಿಲೀಸ್ ಯಾವಾಗ?

Dhoomam Movie: ಪವನ್​ ಕುಮಾರ್​ ಅವರ ನಿರ್ದೇಶನದ ಬಗ್ಗೆ ಜನರಿಗೆ ಸಾಕಷ್ಟು ನಿರೀಕ್ಷೆ ಇದೆ. ‘ಲೂಸಿಯಾ’, ‘ಯು-ಟರ್ನ್​’ ರೀತಿಯ ಸಿನಿಮಾಗಳ ಮೂಲಕ ಜನರಿಗೆ ತಮ್ಮ ಸಾಮರ್ಥ್ಯವನ್ನು ಅವರು ಸಾಬೀತುಪಡಿಸಿದ್ದಾರೆ.

ಶರವೇಗದಲ್ಲಿ ‘ಧೂಮಂ’ ಶೂಟಿಂಗ್ ಮುಗಿಸಿದ ಪವನ್ ಕುಮಾರ್​; ರಿಲೀಸ್ ಯಾವಾಗ?
ಶೂಟಿಂಗ್ ಮುಗಿಸಿದ ಧೂಮಂ ತಂಡ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 14, 2023 | 12:55 PM

ಸ್ಟಾರ್ ನಟರ ಜತೆ ಸಿನಿಮಾ ಮಾಡುವಾಗ ಸಾಮಾನ್ಯವಾಗಿ ನಿರ್ದೇಶಕರು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಹಲವು ಹಂತಗಳಲ್ಲಿ ಚಿತ್ರೀಕರಣ ನಡೆಯುತ್ತದೆ. ಕೆಲವೊಮ್ಮೆ ಹಲವು ವರ್ಷ ಚಿತ್ರದ ರಿಲೀಸ್​ಗೆ ಫ್ಯಾನ್ಸ್ ಕಾಯಬೇಕಾಗುತ್ತದೆ. ಆದರೆ, ನಿರ್ದೇಶಕ ಪವನ್ ಕುಮಾರ್ (Pawan Kumar) ಈ ವಿಚಾರದಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಮಲಯಾಳಂ ನಟ ಫಹಾದ್ ಫಾಸಿಲ್ (Fahad Faasil) ಅವರ ಜತೆ ಕೈ ಜೋಡಿಸಿರುವ ‘ಧೂಮಂ’ ಸಿನಿಮಾದ ಶೂಟಿಂಗ್ ಕೆಲವೇ ತಿಂಗಳಲ್ಲಿ ಪೂರ್ಣಗೊಂಡಿದೆ. ಶೂಟಿಂಗ್ ಮುಗಿದ ವಿಚಾರವನ್ನು ಹೊಂಬಾಳೆ ಫಿಲ್ಮ್ಸ್ ಅಧಿಕೃತ ಮಾಡಿದೆ.

ಪವನ್​ ಕುಮಾರ್​ ಅವರ ನಿರ್ದೇಶನದ ಬಗ್ಗೆ ಜನರಿಗೆ ಸಾಕಷ್ಟು ನಿರೀಕ್ಷೆ ಇದೆ. ‘ಲೂಸಿಯಾ’, ‘ಯು-ಟರ್ನ್​’ ರೀತಿಯ ಸಿನಿಮಾಗಳ ಮೂಲಕ ಜನರಿಗೆ ತಮ್ಮ ಸಾಮರ್ಥ್ಯವನ್ನು ಅವರು ಸಾಬೀತುಪಡಿಸಿದ್ದಾರೆ. ಇನ್ನು, ಫಹಾದ್ ಫಾಸಿಲ್ ಅವರು ತಮ್ಮ ನಟನೆ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಅವರ ನಟನೆಯನ್ನು ಮೆಚ್ಚಿಕೊಂಡವರು ಹಲವರಿದ್ದಾರೆ. ‘ಧೂಮಂ’ ಚಿತ್ರಕ್ಕಾಗಿ ಇವರು ಒಂದಾಗಿದ್ದು ಸಹಜವಾಗಿಯೇ ಕುತೂಹಲ ಸೃಷ್ಟಿಸಿತ್ತು.

ಇದನ್ನೂ ಓದಿ
Image
Dhoomam: ‘ಧೂಮಂ’ ಚಿತ್ರಕ್ಕೆ ಮುಹೂರ್ತ ನೆರವೇರಿಸಿದ ‘ಹೊಂಬಾಳೆ ಫಿಲ್ಮ್​’; ಇಲ್ಲಿದೆ ಫೋಟೋ ಗ್ಯಾಲರಿ
Image
Dhoomam: ‘ಹೊಂಬಾಳೆ ಫಿಲ್ಮ್ಸ್​’ ಹೊಸ ಚಿತ್ರ ‘ಧೂಮಂ’; ಫಹಾದ್​ ಫಾಸಿಲ್​-ಪವನ್​ ಕುಮಾರ್​ ಚಿತ್ರದ ಶೀರ್ಷಿಕೆ ಬಹಿರಂಗ
Image
ಫಹಾದ್ ಫಾಸಿಲ್​ಗೆ ಬರ್ತ್​​ಡೇ ವಿಶ್ ಮಾಡಿದ ಹೊಂಬಾಳೆ ಫಿಲ್ಮ್ಸ್​​; ಪವನ್​ ಕುಮಾರ್ ನಿರ್ದೇಶನ?
Image
Vikram Movie: ‘ವಿಕ್ರಮ್’ ಚಿತ್ರ ಬೆಂಬಲಿಸಿದ್ದಕ್ಕೆ ಕನ್ನಡದಲ್ಲೇ ಧನ್ಯವಾದ ತಿಳಿಸಿದ ಕಮಲ್ ಹಾಸನ್; ವಿಡಿಯೋದಲ್ಲಿ ನಟ ಹೇಳಿದ್ದೇನು?

ಅಕ್ಟೋಬರ್ 9ರಂದು ‘ಧೂಮಂ’ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು. ‘ಧೂಮಂ’ ಚಿತ್ರದ ಮೊದಲ ಸನ್ನಿವೇಶಕ್ಕೆ ಮಂಜುನಾಥ್ ಕಿರಗಂದೂರು ಆರಂಭ ಫಲಕ ತೋರಿದ್ದರು. ಶೈಲಜಾ ವಿಜಯ್ ಕಿರಗಂದೂರು ಕ್ಯಾಮೆರಾ ಚಾಲನೆ ನೀಡಿದ್ದರು. ಈಗ ಮೂರೇ ತಿಂಗಳಲ್ಲಿ ‘ಧೂಮಂ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ.

ಫಹಾದ್ ಫಾಸಿಲ್​​​ಗೆ ಜತೆಯಾಗಿ ಅಪರ್ಣಾ ಬಾಲಮುರುಳಿ ನಟಿಸಿದ್ದಾರೆ. ಈ ಚಿತ್ರಕ್ಕೆ ಪ್ರತಿಷ್ಠಿತ ‘ಹೊಂಬಾಳೆ ಫಿಲ್ಮ್ಸ್​​’ ಬಂಡವಾಳ ಹೂಡುತ್ತಿದೆ. ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶೀಘ್ರವೇ ಆರಂಭ ಆಗಲಿದೆ. ಇನ್ನು ಕೆಲವೇ ತಿಂಗಳಲ್ಲಿ ‘ಧೂಮಂ’ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿದೆ. ಮಲಯಾಳಂ ಜೊತೆಗೆ ಈ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಲಿದೆಯೇ ಎನ್ನುವ ಪ್ರಶ್ನೆ ಕಾಡಿದೆ.

ಇದನ್ನೂ ಓದಿ: Dhoomam: ‘ಧೂಮಂ’ ಚಿತ್ರಕ್ಕೆ ಮುಹೂರ್ತ ನೆರವೇರಿಸಿದ ‘ಹೊಂಬಾಳೆ ಫಿಲ್ಮ್​’; ಇಲ್ಲಿದೆ ಫೋಟೋ ಗ್ಯಾಲರಿ

‘ಕೆಜಿಎಫ್​’, ‘ಕೆಜಿಎಫ್​ 2’, ‘ರಾಜಕುಮಾರ’, ‘ಕಾಂತಾರ’ ಮುಂತಾದ ಸೂಪರ್ ಹಿಟ್​ ಚಿತ್ರಗಳಿಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ. ಇದೇ ಬ್ಯಾನರ್ ಅಡಿಯಲ್ಲಿ ‘ಧೂಮಂ’ ರಿಲೀಸ್ ಆಗುತ್ತಿರುವುದರಿಂದ ಚಿತ್ರಕ್ಕೆ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:49 pm, Sat, 14 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ